ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ vs ಪಾಕಿಸ್ತಾನ ಪೈಪೋಟಿ; ತಿಳಿದುಕೊಳ್ಳಬಹುದಾದ ಸಂಗತಿಗಳು
ವಿಶ್ವ ಕ್ರಿಕೆಟ್‌ನಲ್ಲಿನ ಎಲ್ಲಾ ಪೈಪೋಟಿಗಳ ಅಗ್ರಜವಾಗಿರುವ ಭಾರತ vs ಪಾಕಿಸ್ತಾನ ನಡುವಿನ ಪಂದ್ಯವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮತ್ತೆ ಮರಳಿದೆ ಮತ್ತು ಈ ಬಾರಿ ನ್ಯೂಯಾರ್ಕ್ ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯವನ್ನು ಆಯೋಜಿಸುತ್ತಿದೆ. ಏಷ್ಯಾದ ಎರಡು ದಿಗ್ಗಜ ತಂಡಗಳ ಪೈಪೋಟಿಯು ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಮರೆಯಲಾಗದ ಕಥೆಗಳನ್ನು ಹಂಚಿಕೊಂಡಿವೆ.
ಚುಟುಕು ಸ್ವರೂಪದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತ್ಯಂತ ಸ್ಮರಣೀಯ ಪಂದ್ಯಗಳಲ್ಲಿ ಒಂದಾಗಿದೆ. ಅಲ್ಲಿ ಭಾರತ ತಂಡವು ಲೆಜೆಂಡ್ ನಾಯಕ ಎಂಎಸ್ ಧೋನಿ ನಾಯಕತ್ವದಲ್ಲಿ ವಿಜಯಶಾಲಿಯಾಯಿತು.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉಭಯ ತಂಡಗಳ ಇತ್ತೀಚಿನ ಮುಖಾಮುಖಿಯು 2022ರ ಟಿ20 ವಿಶ್ವ ಕಪ್‌ನಲ್ಲಿ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯುತ್ತಮ ರನ್ ಚೇಸಿಂಗ್‌ಗೆ ಸಾಕ್ಷಿಯಾಯಿತು.
ಆ ವೇಳೆ ವಿರಾಟ್ ಕೊಹ್ಲಿ ಅವರ ಅಜೇಯ 82 ರನ್‌ಗಳು ಭಾರತ ತಂಡವನ್ನು ಕೊನೆಯ ಎಸೆತದಲ್ಲಿ ರೋಮಾಂಚಕ ಗೆಲುವಿನತ್ತ ಮುನ್ನಡೆಸಿತು.
ಆದರೆ, ಈ ವರ್ಷ ವ್ಯತಿರಿಕ್ತ ಫಲಿತಾಂಶಗಳ ಹಿನ್ನೆಲೆಯಲ್ಲಿ ಎರಡೂ ತಂಡಗಳು ಹೈ-ವೋಲ್ಟೇಜ್ ಪಂದ್ಯಕ್ಕೆ ಪ್ರವೇಶಿಸುತ್ತಿವೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ಎಂಟು ವಿಕೆಟ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿ ತನ್ನ ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಆರಂಭಿಸಿತು.
ರೋಹಿತ್, ಕೊಹ್ಲಿ ಅಲ್ಲ; 2024ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಈತನೇ ಗೇಮ್ ಚೇಂಜರ್; ಹರ್ಭಜನ್ ಸಿಂಗ್
ಮತ್ತೊಂದೆಡೆ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಸಹ-ಆತಿಥೇಯ ಯುಎಸ್ಎ ತಂಡದ ವಿರುದ್ಧ ಪಂದ್ಯಾವಳಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿತು.
ಆದರೆ, ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ತಂಡವು ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು, ಯಾರು ಮೇಲುಗೈ ಸಾಧಿಸಲಿದ್ದಾ ಎಂಬುದು ಕುತೂಹಲ ಕೆರಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಟಿ20 ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ ನಡುವಿನ ದಾಖಲೆಗಳು ಮತ್ತು ಅಂಕಿಅಂಶಗಳನ್ನು ನೋಡೋಣ.

ಭಾರತ vs ಪಾಕಿಸ್ತಾನ ಹೆಡ್-ಟು-ಹೆಡ್ ದಾಖಲೆ
ಐತಿಹಾಸಿಕವಾಗಿ, ಟಿ20 ವಿಶ್ವಕಪ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಈವರೆಗೆ ಏಳು ಪಂದ್ಯಗಳಲ್ಲಿ ಸೆಣಸಾಡಿವೆ. ಆರು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ತಂಡ ಕೇವಲ ಒಂದು ಗೆದ್ದಿದೆ. ಆದರೂ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಈ ಬಾರಿ ಆಶಾವಾದಿಯಾಗಿ ಉಳಿದಿದ್ದಾರೆ.
ಟಿ20 ವಿಶ್ವಕಪ್ 2007: ಭಾರತ vs ಪಾಕಿಸ್ತಾನ
2007ರಲ್ಲಿ ನಡೆದ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಎರಡು ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಮೊದಲ ಪಂದ್ಯದಲ್ಲಿ ಎರಡೂ ಎದುರಾಳಿಗಳು ಗುಂಪು ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಅದು ಟೈನಲ್ಲಿ ಕೊನೆಗೊಂಡಿತು. ಆದಾಗ್ಯೂ, ಡರ್ಬನ್‌ನಲ್ಲಿ ಭಾರತ ಬೌಲ್-ಔಟ್‌ನಲ್ಲಿ ಪಾಕಿಸ್ತಾನ ತಂಡವನ್ನು 3-0 ಅಂತರದಲ್ಲಿ ಹಿಂದಿಕ್ಕಿತು.
2007ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾದರು. ಭಾರತ ಐದು ರನ್‌ಗಳಿಂದ ಪಂದ್ಯವನ್ನು ಗೆದ್ದು ಮೊದಲ ಟಿ20 ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಟಿ20 ವಿಶ್ವಕಪ್ 2012: ಭಾರತ vs ಪಾಕಿಸ್ತಾನ
ಶ್ರೀಲಂಕಾದ ಕೊಲಂಬೊದಲ್ಲಿ ನಡೆದ 2012ರ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾದವು. ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಅಜೇಯ 75 ರನ್‌ಗಳು ಪಂದ್ಯದ ನಿರ್ಣಾಯಕವೆನಿಸಿತು ಮತ್ತು ಭಾರತ ತಂಡವು ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.
ಭಾರತ vs ಪಾಕಿಸ್ತಾನ: 2014ರ ಟಿ20 ವಿಶ್ವಕಪ್
ಬಾಂಗ್ಲಾದೇಶದಲ್ಲಿ ನಡೆದ 2014ರ ಟಿ20 ವಿಶ್ವಕಪ್‌ನಲ್ಲಿ ಒಂದೇ ಗುಂಪಿನ ಭಾಗವಾಗಿದ್ದ ಭಾರತ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಟೀಮ್ ಇಂಡಿಯಾ ನಂತರ ಫೈನಲ್‌ಗೆ ಪ್ರವೇಶಿಸಿತು. ಆದರೆ ಅಂತಿಮವಾಗಿ ಶ್ರೀಲಂಕಾ ವಿರುದ್ಧ ಆರು ವಿಕೆಟ್‌ಗಳಿಂದ ಸೋಲು ಕಂಡಿತು.
2016ರ ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ
ಭಾರತ 2016ರ ಟಿ20 ವಿಶ್ವಕಪ್‌ನ ಆತಿಥ್ಯ ವಹಿಸಿತ್ತು ಮತ್ತು ಗುಂಪು-ಹಂತದ ಪಂದ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿತು. ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿತು ಮತ್ತು ಆರು ವಿಕೆಟ್‌ಗಳಿಂದ ವಿಜಯಶಾಲಿಯಾಯಿತು.
ಭಾರತ vs ಪಾಕಿಸ್ತಾನ: 2021ರ ಟಿ20 ವಿಶ್ವಕಪ್
ಯುಎಇನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಆವೃತ್ತಿಯ ಸಂದರ್ಭದಲ್ಲಿ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಗೆಲುವನ್ನು ದಾಖಲಿಸಿದರು.
ನಾಯಕ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ರನ್ ಚೇಸ್‌ನಲ್ಲಿ ಕೈಜೋಡಿಸಿ ತಮ್ಮ ಸಾಂಪ್ರದಾಯಿಕ ಎದುರಾಳಿಯಾದ ಭಾರತ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
2022ರ ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ
ಅಕ್ಟೋಬರ್ 23, 2022ರಂದು ಕ್ರಿಕೆಟ್‌ನ ಅತ್ಯಂತ ರೋಮಾಂಚಕ ಪಂದ್ಯಗಳಲ್ಲಿ ಒಂದನ್ನು ವೀಕ್ಷಿಸಲು ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಜನಸಮೂಹ ಉಸಿರನ್ನು ಬಿಗಿ ಹಿಡಿದು ಕಾದಿತ್ತು.
ಭಾರತ ತಂಡದ ಅಗ್ರ ಕ್ರಮಾಂಕದ ಹಠಾತ್ ಕುಸಿತದ ನಂತರ, ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜೋಡಿಯು ಮಧ್ಯಮ ಓವರ್‌ಗಳಲ್ಲಿ ಲೆಕ್ಕಾಚಾರದ ಕ್ರಿಕೆಟ್ ಆಡುವಂತೆ ಮಾಡಿತು. ಹ್ಯಾರಿಸ್ ರೌಫ್ ವಿರುದ್ಧ ವಿರಾಟ್ ಕೊಹ್ಲಿ ಸತತ ಎರಡು ಸಿಕ್ಸರ್ ಬಾರಿಸಿದಾಗ ಟೀಮ್ ಇಂಡಿಯಾ ಗೆಲುವಿನ ಸಮೀಪ ಬಂದಿತು ಮತ್ತು ಭಾರತದತ್ತ ಅಲೆಯನ್ನೇ ತಿರುಗಿಸಿತು.
ಪಾಕಿಸ್ತಾನ ತಂಡದ ವಿರುದ್ಧ ತಮ್ಮ ಆರನೇ ಗೆಲುವನ್ನು ದಾಖಲಿಸಲು ಭಾರತ ತಂಡ ಅಂತಿಮ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications