India vs Pakistan Match: ಶಾಹಿನ್ ಶಾ ಅಫ್ರಿದಿಯನ್ನು ಅಟ್ಟಾಡಿಸಿ ಬಾರಿಸಿದ ಶುಬ್ಮನ್ ಗಿಲ್: ಟ್ವಿಟ್ಟರ್‌ನಲ್ಲಿ ಮೀಮ್ಸ್ ಹಬ್ಬ!!
ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಪಾಕ್ ಬೌಲರ್‌ಗಳನ್ನು ನಿರ್ದಯವಾಗಿ ಬಾರಿಸುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಶೂಬ್ಮನ್ ಗಿಲ್ ಪಾಕಿಸ್ತಾನದ ಪ್ರಮುಖ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿಯನ್ನು ಗುರಿಯಾಗಿಸಿ ಬಾರಿಸಿದ ರೀತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.
ರೋಹಿತ್ ಶರ್ಮಾ ಜೊತೆಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಆರಂಭದಿಂದಲೇ ತಮ್ಮ ನಿಲುವನ್ನು ಸ್ಪಷ್ಟವಾಗಿ ತೋರಿಸಿದರು. ಪಾಕಿಸ್ತಾನದ ಪ್ರಮುಖ ವೇಗಿ ಶಾಹೀನ್ ಶಾ ಅಫ್ರಿದಿಯ ವಿರುದ್ಧ ಇಂದು ಶುಬ್ಮನ್ ಗಿಲ್ ಬೌಂಡರಿಗಳ ಸುರಿಮಳೆಗೈಯುವ ಮೂಲಕ ದೊಡ್ಡ ಪಾಕ್ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದ್ದಾರೆ.

ಪಂದ್ಯದ ಮೂರನೇ ಓವರ್ ಎಸೆದ ಶಾಹೀನ್ ಅಫ್ರಿದಿಯ ಮೊದಲ ಎರಡು ಎಸೆತಗಳನ್ನು ಶುಬ್ಮನ್ ಗಿಲ್ ಸತತವಾಗಿ ಬೌಂಡರಿಗೆ ಅಟ್ಟಿದರು. ನಂತರ ಐದನೇ ಎಸೆತವನ್ನು ಮತ್ತೆ ಬೌಂಡರಿಯತ್ತ ಬಾರಿಸಿದರು ಶುಬ್ಮನ್ ಗಿಲ್. ನಂತರ ಇದೇ ರೀತಿ ಐದನೇ ಓವರ್‌ನಲ್ಲಿಯೂ ಶುಬ್ಮನ್ ಗಿಲ್ ಇದೇ ರೀತಿಯ ಪ್ರದರ್ಶನ ನೀಡಿದರು. ಮೊದಲ ಮೂರು ಓವರ್‌ನಲ್ಲಿಯೇ ಶಾಹೀನ್ ಶಾ ಅಫ್ರಿದಿ 31 ರನ್‌ಗಳನ್ನು ಭಾರತಕ್ಕೆ ಬಿಟ್ಟುಕೊಡುವ ಮೂಲಕ ಪಾಕ್ ಪಡೆಗೆ ಆಘಾತ ನೀಡಿದರು.
ಅರ್ಧ ಶತಕ ಸಿಡಿಸಿದ ಆರಂಭಿಕರು
ಇನ್ನು ಟೀಮ್ ಇಂಡಿಯಾದ ಇಬ್ಬರು ಆರಂಭಿಕ ಆಟಗಾರರು ಕೂಡ ಈ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆರಂಭದಲ್ಲಿ ಶುಬ್ಮನ್ ಗಿಲ್ ಅಬ್ಬರಿಸಿದರೆ ನಂತರ ರೋಹಿತ್ ಶರ್ಮಾ ಕೂಡ ಆಕ್ರಮಣಕಾರಿ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ ಶದಬ್ ಖಾನ್ ಎಸೆತದ ಮೊದಲ ಓವರ್‌ನಲ್ಲಿಯೇ ಎರಡು ಸಿಕ್ಸರ್ ಸಹಿತ 19 ರನ್‌ಗಳನ್ನು ಕಲೆಹಾಕಿದರು. ಇನ್ನು ರೋಹಿತ್ ಶರ್ಮಾ ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿದ ಬಳಿಕ ಶದಬ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶದಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
ಬೆಂಚ್: ಸೌದ್ ಶಕೀಲ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಮ್ ಜೂನಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications