For Quick Alerts
ALLOW NOTIFICATIONS  
For Daily Alerts
 

ಯುಎಸ್‌ನ ಈ ನಗರದಲ್ಲಿ 2024ರ ಟಿ20 ವಿಶ್ವಕಪ್‌ನ ಭಾರತ vs ಪಾಕಿಸ್ತಾನ ಪಂದ್ಯ ಆಯೋಜನೆ ಪಕ್ಕಾ!

2024ರ ಪುರುಷರ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್‌ ಮತ್ತು ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕದಲ್ಲಿ ಆಯೋಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಜ್ಜಾಗಿದೆ.

2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಬ್ಲಾಕ್‌ಬಸ್ಟರ್ ಪಂದ್ಯಕ್ಕೆ ಐಸಿಸಿ ಸ್ಥಳವನ್ನು ಕೂಡ ಅಂತಿಮಗೊಳಿಸಿದೆ.

India vs Pakistan T20 World Cup 2024 Match Will Be Played In New York, USA

ಕ್ರಿಕ್‌ಬಜ್ ವರದಿಯ ಪ್ರಕಾರ, ನ್ಯೂಯಾರ್ಕ್ ನಗರದ ಪೂರ್ವಕ್ಕೆ ಸುಮಾರು 30 ಮೈಲುಗಳಷ್ಟು ದೂರದಲ್ಲಿರುವ 34,000-ಆಸನಗಳ ವ್ಯವಸ್ಥೆಯುಳ್ಳ ಪಾಪ್-ಅಪ್ ಸೌಲಭ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಇದು ಮುಂಬರುವ 2024ರ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳವಾಗಿದೆ.

ಮ್ಯಾನ್‌ಹ್ಯಾಟನ್‌ನ ಪೂರ್ವಕ್ಕೆ 30 ಮೈಲುಗಳಷ್ಟು ಪೂರ್ವದಲ್ಲಿ 930 ಎಕರೆಗಳಷ್ಟು ವಿಸ್ತಾರವಾದ ಐಸೆನ್‌ಹೋವರ್ ಪಾರ್ಕ್‌ನಲ್ಲಿ ಈ ಸೌಲಭ್ಯವನ್ನು ನಿರ್ಮಿಸಲಾಗುತ್ತದೆ.

"ಬ್ರಾಂಕ್ಸ್‌ನ ಬರೋದಲ್ಲಿರುವ ವ್ಯಾನ್ ಕಾರ್ಟ್‌ಲ್ಯಾಂಡ್ ಪಾರ್ಕ್‌ನಲ್ಲಿ ಇದೇ ರೀತಿಯ ಪಾಪ್ ಸ್ಥಳವನ್ನು ನಿರ್ಮಿಸಲು ಐಸಿಸಿ ಮತ್ತು ನ್ಯೂಯಾರ್ಕ್ ಸಿಟಿ ಅಧಿಕಾರಿಗಳ ನಡುವಿನ ನಿರ್ದಿಷ್ಟ ಮಾತುಕತೆಗಳು ವಿಫಲವಾದ ನಂತರ, ಈ ಪ್ರಕಟಣೆಯು ಕೆಲವೇ ತಿಂಗಳುಗಳಲ್ಲಿ ಬರಲಿದೆ".

"ಉದ್ಯಾನವನದ ಸುತ್ತಲೂ ವಾಸಿಸುವ ಕೆಲವು ಸ್ಥಳೀಯರು ಮತ್ತು ಅದೇ ಉದ್ಯಾನವನದಿಂದ ಹೊರಗಿರುವ ಕ್ರಿಕೆಟ್ ಲೀಗ್‌ ಒಂದರಿಂದ ಕೆಲವು ಭಾರಿ ಪ್ರತಿರೋಧದ ನಂತರ ನಗರ ಅಧಿಕಾರಿಗಳು ಬ್ರಾಂಕ್ಸ್‌ನ ಯೋಜನೆಗಳನ್ನು ಕೈಬಿಡಲು ನಿರ್ಧರಿಸಿದರು".

"ಬ್ರಾಂಕ್ಸ್‌ನ ನಷ್ಟವು ನಸ್ಸೌ ಕೌಂಟಿಯ ಲಾಭವಾಗಿದೆ, ಏಕೆಂದರೆ ಐಸೆನ್‌ಹೋವರ್ ಪಾರ್ಕ್‌ನ ನಿರ್ವಾಹಕರಾದ ನಸ್ಸೌ ಕೌಂಟಿಯ ಅಧಿಕಾರಿಗಳೊಂದಿಗಿನ ಮಾತುಕತೆಗಳನ್ನು ಕಾರ್ಯರೂಪಕ್ಕೆ ತರಲು ಐಸಿಸಿ ಹೆಜ್ಜೆ ಇಟ್ಟಿರುವುದು ತ್ವರಿತವಾಗಿ ಸಾಬೀತುಪಡಿಸಿದೆ," ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಸದ್ಯ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನದ ಮುಂದಿನ ಪಂದ್ಯವು ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ನಡೆಯಲಿದೆ.

ಇತ್ತೀಚಿಗೆ ಮುಕ್ತಾಯಗೊಂಡ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯವು ಕ್ಯಾಂಡಿಯಲ್ಲಿ ಮಳೆಯಿಂದಾಗಿ ರದ್ದುಗೊಂಡರೆ, ಕೊಲಂಬೊದಲ್ಲಿ ನಡೆದ ಸೂಪರ್ 4 ಪಂದ್ಯದಲ್ಲಿ ಭಾರತ ತಂಡ 228 ರನ್‌ಗಳ ದಾಖಲೆ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತು.

"ಐಸಿಸಿ ಪಂದ್ಯಾವಳಿಗಾಗೊ ಯುಎಸ್ಎ ಮಾಧ್ಯಮ ಹಕ್ಕುಗಳು ಡಾಲರ್ ಮೌಲ್ಯದ ಪ್ರಕಾರ, ಅಗ್ರ 4 ದೇಶಗಳಲ್ಲಿ ಸೇರಿವೆ ಎಂದು ಹೇಳಲಾಗುತ್ತಿದೆ. ಟಿ20 ವಿಶ್ವಕಪ್‌ಗೆ ಯುಎಸ್ಎ ಅನ್ನು ಸಹ-ಆತಿಥೇಯ ಎಂದು ಹೆಸರಿಸಿರುವುದು ಐಸಿಸಿಯಿಂದ ಅಂತಹ ಒಂದು ದೃಢವಾದ ಕ್ರಮವಾಗಿದೆ," ಎಂದು ಕ್ರಿಕ್‌ಬಜ್ ವರದಿ ತಿಳಿಸಿದೆ.

ಯುಎಸ್ಎನಲ್ಲಿ ಕ್ರಿಕೆಟ್ ಮೂಲಸೌಕರ್ಯಗಳ ಕೊರತೆಯು 2024ರ ಟಿ20 ವಿಶ್ವಕಪ್‌ಗೆ ಮುನ್ನ ದೊಡ್ಡ ಅನುಮಾನದ ವಿಷಯವಾಗಿದೆ. ಈ ವರ್ಷ ನಡೆದ ಉದ್ಘಾಟನಾ ಮೇಜರ್ ಲೀಗ್ ಕ್ರಿಕೆಟ್ ಡಲ್ಲಾಸ್‌ನಲ್ಲಿ 15,000 ಆಸನಗಳ ಕ್ರೀಡಾಂಗಣವನ್ನು ಅನಾವರಣಗೊಳಿಸಿತು. ಆದರೆ ಮಿಯಾಮಿ ಬಳಿಯ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಹೊರತುಪಡಿಸಿ, ಯುಎಸ್ಎ ಮತ್ತೊಂದು ಶಾಶ್ವತ ಫ್ಲಡ್‌ಲೈಟ್ ಮೈದಾನವನ್ನು ಹೊಂದಿಲ್ಲ.

2024ರ 20 ತಂಡಗಳ ಟಿ20 ವಿಶ್ವಕಪ್ ಪಂದ್ಯಾವಳಿಯುವ ಜೂನ್ 4ರಂದು ಆರಂಭವಾಗಿ ಜೂನ್ 30ರಂದು ಮುಕ್ತಾಯಗೊಳ್ಳಲಿದೆ ಎಂದು ಐಸಿಸಿ ಪ್ರಕಟಿಸಿದೆ.

Story first published: Wednesday, September 20, 2023, 13:20 [IST]
Other articles published on Sep 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+