ಭಾರತ ಹಾಗೂ ಶ್ರೀಲಂಕಾ ದೇಶಗಳು ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026ರ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 20 ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದು, 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 5 ತಂಡಗಳು ಸ್ಥಾನ ಪಡೆದಿವೆ. ಭಾರತ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಅಲ್ಲದೆ ಪಾಕಿಸ್ತಾನ ತಂಡವೂ ಇದೇ ಗುಂಪಿನಲ್ಲಿ ಸ್ಥಾನ ಹೊಂದಿದೆ. ಉಳಿದಂತೆ ಇನ್ನು ಮೂರು ತಂಡಗಳು ಈ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಭಾರತ ಈ ಬಾರಿ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಮೈದಾನವನ್ನು ಪ್ರವೇಶಿಸಲಿದೆ. ಲೀಗ್ ಹಂತದಲ್ಲಿ ಒಟ್ಟು 4 ಪಂದ್ಯಗಳನ್ನು ಭಾರತ ಆಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಯುಎಸ್‌ಎ ತಂಡಗಳು ಮುಖಾಮುಖಿ ಆಗಲಿವೆ. ಕಳೆದ ಬಾರಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ರೋಹಿತ್ ಶರ್ಮಾ ಅವರನ್ನು ಈ ಬಾರಿಯ ವಿಶ್ವಕಪ್ ರಾಯಭಾರಿಯನ್ನಾಗಿ ನೇಮಿಸಲಾಗಿದೆ.

ಪಾಕಿಸ್ತಾನ ಭಾರತದ ಪ್ರವಾಸವನ್ನು ಬೆಳೆಸದ ಹಿನ್ನೆಲೆಯಲ್ಲಿ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದೇ ವರ್ಷ ಟಿ20 ಕ್ರಿಕೆಟ್‌ನಲ್ಲಿ ಮೂರು ಬಾರಿ ಮುಖಾಮುಖಿ ಆಗಲಿವೆ. ಭಾರತ, ಪಾಕ್ ತಂಡಗಳು ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಖಾಮುಖಿ ಆಗಿದ್ದವು. ಲೀಗ್, ಸೂಪರ್ 4, ಫೈನಲ್ ಪಂದ್ಯಗಳಲ್ಲಿ ಭಾರತ, ಪಾಕ್ ಫೈಟ್ ನಡೆಸಿದ್ದವು. ಉಭಯ ದೇಶಗಳ ನಡುವಣ ಬಿಗ್ ಫೈಟ್ ಫೆಬ್ರವರಿ 15 ರಂದು ಕೊಲಂಬೋದಲ್ಲಿ ನಡೆಯಲಿದ್ದು ಅಭಿಮಾನಿಗಳನ್ನು ಸೆಳೆಯಲಿದೆ.
ಟಿ20 ವಿಶ್ವಕಪ್‌ಗೆ ಇನ್ನು ಟೀಮ್ ಇಂಡಿಯಾವನ್ನು ಪ್ರಕಟಿಸಿಲ್ಲ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆತಿಥೇಯ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಬಹುದು. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯಗಳನ್ನು ಆಡಲಿದೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಮಹತ್ವದಾಗಿದೆ. ಭಾರತ, ದಕ್ಷಿಣ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಫೆ.7, ಯುಎಸ್‌ಎ ವಿರುದ್ಧ, ಮುಂಬೈ
ಫೆ.12, ನಮೀಬಿಯಾ ವಿರುದ್ಧ, ದೆಹಲಿ
ಫೆ.15 ಪಾಕಿಸ್ತಾನ ವಿರುದ್ಧ, ಕೋಲಂಬೊ
ಫೆ.18 ನೆದರ್ಲ್ಯಾಂಡ್ ವಿರುದ್ಧ, ಅಹಮದಾಬಾದ್