Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Pakistan: 'ವಿಶ್ವಕಪ್‌ನಲ್ಲಿ ವಿಷಯಗಳು ಬದಲಾಗುತ್ತವೆ ಎಚ್ಚರ'; ಭಾರತೀಯ ಮಾಜಿ ಕ್ರಿಕೆಟಿಗ

ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ವೇಳೆ ಉಭಯ ತಂಡಗಳ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಹೇಳಿದ್ದಾರೆ.

2024ರ ಐಸಿಸಿ ಪಂದ್ಯಾವಳಿಯು ಜೂನ್ 2ರಂದು ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿದೆ. ಕ್ರಿಕೆಟ್ ಇತಿಹಾಸದ ಶ್ರೇಷ್ಠ ಹಣಾಹಣಿಯಲ್ಲಿ ಒಂದಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವು ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೊಸ ಅಧ್ಯಾಯ ಬರೆಯಲಿದೆ.

India vs Pakistan Things Will Change in World Cup Says Former Cricketer RP Singh

ಇತ್ತೀಚೆಗೆ ಮುಕ್ತಾಯಗೊಂಡ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಭಾರತದ ಆಟಗಾರರು ವಿಶ್ವಕಪ್ ಪಂದ್ಯಾವಳಿಗೆ ತಯಾರಿ ನಡೆಸುತ್ತಿದ್ದರೆ, ಅತ್ತ ಪಾಕಿಸ್ತಾನ ತಂಡವು ನ್ಯೂಜಿಲೆಂಡ್, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ದ್ವಿಪಕ್ಷೀಯ ಸರಣಿಯನ್ನು ಆಡಿತು.

ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು (2-2) ಡ್ರಾ ಮಾಡಿಕೊಂಡರೆ, ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು (2-1) ಗೆದ್ದರು ಮತ್ತು ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಸೋತರು.

ಪಾಕಿಸ್ತಾನ ತಂಡದ ಕಳಪೆ ಫಾರ್ಮ್‌ನ ಹೊರತಾಗಿಯೂ, ವಿಶ್ವಕಪ್‌ನಲ್ಲಿ ವಿಷಯಗಳು ಬದಲಾಗುತ್ತವೆ ಮತ್ತು ಆಟಗಾರರ ಮೇಲೆ ಒತ್ತಡದ ಮಟ್ಟವು ವಿಭಿನ್ನವಾಗಿರುತ್ತದೆ ಎಂದು ಮಾಜಿ ವೇಗಿ ಆರ್‌ಪಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

India vs Pakistan Things Will Change in World Cup Says Former Cricketer RP Singh

"ಪಾಕಿಸ್ತಾನ ಕೂಡ ಉತ್ತಮ ತಂಡವಾಗಿದೆ. ಅವರು ಐರ್ಲೆಂಡ್ ವಿರುದ್ಧ ಆಡಿದರು ಮತ್ತು ಸೋಲು ಅನುಭವಿಸಿದರು. ವಿಶ್ವಕಪ್‌ನಂತಹ ಸಂದರ್ಭದಲ್ಲಿ ವಿಷಯಗಳು ಬದಲಾಗುತ್ತವೆ. ಪಂದ್ಯವು ಯಾವಾಗಲೂ ಹೈ-ವೋಲ್ಟೇಜ್ ಆಗಿರುವುದರಿಂದ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ," ಎಂದು ಆರ್‌ಪಿ ಸಿಂಗ್ ಹೇಳಿದರು.

"ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ಯಾವಾಗಲೂ ಉತ್ತಮವಾಗಿದೆ. ನಾವು 2021ರಲ್ಲಿ ಕೇವಲ ಒಂದು ಪಂದ್ಯವನ್ನು ಸೋತಿದ್ದೇವೆ ಮತ್ತು ವಿಶ್ವಕಪ್‌ ಪಂದ್ಯಾವಳಿಯುದ್ದಕ್ಕೂ ಪ್ರಬಲರಾಗಿದ್ದೇವೆ," ಎಂದು ಆರ್‌ಪಿ ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.

ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ಕೊನೆಯ ಮುಖಾಮುಖಿಯಲ್ಲಿ ಆಟಗಾರರ ಮೇಲಿನ ಒತ್ತಡದ ಮಟ್ಟ ಮತ್ತು ಅಭಿಮಾನಿಗಳ ಭಾವುಕತೆ ಗೋಚರಿಸಿತು.

India vs Pakistan Things Will Change in World Cup Says Former Cricketer RP Singh

2022ರಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ಧದ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದರು. ಟೀಮ್ ಇಂಡಿಯಾ ಗೆಲುವು ಸಾಧಿಸಲು ಕೇವಲ 8 ಎಸೆತಗಳಲ್ಲಿ 28 ರನ್‌ಗಳ ಅಗತ್ಯವಿತ್ತು. ಆದರೆ, ವಿರಾಟ್ ಕೊಹ್ಲಿ ತಮ್ಮ ಪರಾಕ್ರಮದ ಮೂಲಕ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು.

ಪಾಕಿಸ್ತಾನ ಬೌಲರ್ ಹ್ಯಾರಿಸ್ ರೌಫ್ ವಿರುದ್ಧ ಅನುಭವಿ ಬ್ಯಾಟರ್ ನೇರವಾಗಿ ಅದ್ಭುತ ಸಿಕ್ಸರ್ ಬಾರಿಸಿದರು. ಭಾವನಾತ್ಮಕ ಪಂದ್ಯದಲ್ಲಿ ಕಾಮೆಂಟೇಟರ್ ಗೆರಾರ್ಡ್ ವಾಟ್ಲೆ ಅವರು ವಿರಾಟ್ ಕೊಹ್ಲಿಯ ಮಾಸ್ಟರ್‌ಕ್ಲಾಸ್ ಶಾಟ್ ಅನ್ನು "ದಟ್ ಈಸ್ ಎ ಶಾಟ್ ಆಫ್ ಎಂಪರರ್' ಎಂದು ವಿವರಿಸಿದರು.

ನಂತರದ ಎಸೆತವನ್ನು ಮತ್ತೊಂದು ಸಿಕ್ಸರ್‌ಗಟ್ಟಿದರು. ಇದು ಭಾರತ ತಂಡಕ್ಕೆ ಯಶಸ್ವಿ 160 ರನ್ ಚೇಸ್‌ಗೆ ಅಡಿಪಾಯ ಹಾಕಿತು. ಇದೀಗ ಕ್ರಿಕೆಟ್ ಅಭಿಮಾನಿಗಳು ಮತ್ತೊಂದು ರೋಚಕ ಪಂದ್ಯವನ್ನು ನಿರೀಕ್ಷಿಸುತ್ತಿದ್ದಾರೆ.

ಏಷ್ಯಾದ ಎರಡು ಕ್ರಿಕೆಟ್ ದಿಗ್ಗಜರ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಭಾರತ ತಂಡ ಜೂನ್ 5ರಂದು ಟಿ20 ವಿಶ್ವಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ. ಜೂನ್ 6ರಂದು ಪಾಕಿಸ್ತಾನ ತಂಡವು ಆತಿಥೇಯ ಯುಎಸ್ಎ ತಂಡವನ್ನು ತನ್ನ ಆರಂಭಿಕ ಪಂದ್ಯದಲ್ಲಿ ಎದುರಿಸಲಿದೆ.

Story first published: Friday, May 31, 2024, 23:34 [IST]
Other articles published on May 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+