ಅಂಡರ್-19 ಏಷ್ಯಾ ಕಪ್: ಪಾಕ್ ವಿರುದ್ಧ ಶತಕ ಬಾರಿಸಿದ ಅರ್ಜುನ್, ತಿಲಕ್

ಕೊಲಂಬೋ, ಸೆಪ್ಟೆಂಬರ್ 7: ಶ್ರೀಲಂಕಾದ ಮೊರಾತುವಾದ ತೈರೊನ್ನೆ ಫೆರ್ನಾಂಡೋ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ ಟೂರ್ನಿಯ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ಅಂಡರ್ 19 ತಂಡದ ವಿರುದ್ಧ ಭಾರತ ಅಂಡರ್ 19 ತಂಡದ ಅರ್ಜುನ್ ಆಝಾದ್, ತಿಲಕ್ ವರ್ಮಾ ಶತಕದಾಟ ನೀಡಿದ್ದಾರೆ. ಭಾರತ 60 ರನ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್ 19 ತಂಡದಿಂದ ಆರಂಭಿಕ ಬ್ಯಾಟ್ಸ್‌ಮನ್ ಅರ್ಜುನ್ 121, ತಿಲಕ್ 110 ರನ್, ಶಾಶ್ವತ್ ರಾವತ್ 18, ಅಥರ್ವ ಅಂಕೋಲೆಕರ್ 16, ಧೃವ್ ಜುರೇಲ್ 10 ರನ್ ಕೊಡುಗೆಯಿತ್ತರು. ಭಾರತ 50 ಓವರ್‌ಗೆ 9 ವಿಕೆಟ್ ಕಳೆದು 305 ರನ್ ಗಳಿಸಿತು.
ಇನ್ನಿಂಗ್ಸ್‌ಗೆ ಇಳಿದ ಪಾಕಿಸ್ತಾನ 19 ತಂಡ, ರೊಹೈಲ್ ನಜೀರ್ 117, ಮೊಹಮ್ಮದ್ ಹ್ಯಾರಿಸ್ 43, ಅಬ್ದುಲ್ ಬಂಗಲ್ಜೈ 15 ರನ್ ಸೇರ್ಪಡೆಯೊಂದಿಗೆ 46.4 ಓವರ್‌ಗೆ ಸರ್ವ ಪತನ ಕಂಡು 245 ರನ್ ಮಾಡಿತು.
ಭಾರತದ ಇನ್ನಿಂಗ್ಸ್‌ನಲ್ಲಿ ನಸೀಮ್ ಶಾ 3, ಅಬ್ಬಾಸ್ ಅಫ್ರಿದಿ 3 ವಿಕೆಟ್‌ಗಳೊಂದಿಗೆ ಗಮನ ಸೆಳೆದರು.
ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಭಾರತದ ಆಕಾಶ್ ಸಿಂಗ್ 1, ವಿದ್ಯಾಧರ್ ಪಾಟಿಲ್ 2, ಸುಶಾಂತ್ ಮಿಶ್ರಾ 2, ಅಥರ್ವ ಅಂಕೋಲೆಕರ್ 3, ಕರಣ್ ಲಾಲ್ 1 ವಿಕೆಟ್‌ನೊಂದಿಗೆ ಮಿಂಚಿದರು. ಅರ್ಜುನ್ ಆಝಾದ್ ಪಂದ್ಯಶ್ರೇಷ್ಠ ಪ್ರಾಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications