India vs Pakistan: ಈ ಬಾರಿ 82 ರನ್ ಅಲ್ಲ, ಶತಕ ಬಾರಿಸುವುದು ಗುರಿ ಎಂದ 'ಕಿಂಗ್ ಕೊಹ್ಲಿ'
2022 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಎಲ್ಲರೂ ಟೀಮ್ ಇಂಡಿಯಾ ಪಾಕ್ ವಿರುದ್ಧ ಸೋಲು ಕಂಡೇ ಬಿಡುತ್ತೇ ಎಂದು ಅಂದುಕೊಂಡಿದ್ದರು. ಆದರೆ ಸೂಪರ್ ಮ್ಯಾನ್ ರೀತಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ತಮ್ಮ ಅಸಲಿ ಬ್ಯಾಟಿಂಗ್ ಖದರ್ ಪ್ರದರ್ಶಿಸಿದ ವಿರಾಟ್, ತಮ್ಮ ವಿಶ್ವರೂಪ ದರ್ಶನ ಮಾಡಿಸುವ ಮೂಲಕ ಭಾರತದ ಗೆಲುವಿಗೆ ಕಾರಣವಾಗಿದ್ದರು.
ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಕೊನೆಯ ಎರಡು ಓವರ್ ಗಳಲ್ಲಂತೂ ವಿರಾಟ್ ಆರ್ಭಟಕ್ಕೆ ಪಾಕ್ ಫುಲ್ ಸ್ಟನ್ ಆಗಿತ್ತು. ಕೊಹ್ಲಿ, ಪಾಕಿಸ್ತಾನದ ವೇಗಿ ಹಾರೀಸ್ ರೌಫ್ ಎಸೆತವನ್ನು ಸ್ಟ್ರೇಟ್ ಸಿಕ್ಸರ್ ಬಾರಿಸಿದ್ದರು. ಈ ಶಾಟ್ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನ ಮತ್ತೊಂದು ವಿರಾಟ್ ರೂಪವಾಗಿತ್ತು. ಸಿಡಿಲಬ್ಬರದ ಬ್ಯಾಟಿಂಗ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದ ವಿರಾಟ್, ಅಜೇಯ 82 ರನ್ ಸಿಡಿಸಿದ್ದರು.

ಕ್ರಿಕೆಟ್‌ನ ಯಾವುದೇ ಫಾರ್ಮೆಟ್ ಇದ್ದರೂ ವಿರಾಟ್ ರನ್ ಮಶೀನ್ ಎಂಬುದರಲ್ಲಿ ಎರಡು ಮಾತಿಲ್ಲ. ಆಕರ್ಷಕವಾಗಿ ಬ್ಯಾಟ್ ಮಾಡಿ ಎದುರಾಳಿಗಳಿಗೆ ಕಾಡುವ ವಿರಾಟ್, ಪಾಕ್ ಬೌಲರ್ ಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ಎಂಸಿಜೆ ಅಂಗಳದಲ್ಲಿನ ಫಾರ್ಮ್ ಅನ್ನು ಶ್ರೀಲಂಕಾದಲ್ಲೂ ಮುಂದುವರೆಸುವುದಾಗಿ ಸೂಚನೆ ನೀಡಿದ್ದಾರೆ.
ಬ್ಯಾಟಿಂಗ್ ಸುಧಾರಣೆಗೆ ಒತ್ತು
ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿರಾಟ್, ಬ್ಯಾಟಿಂಗ್ ಸುಧಾರಣೆಯ ಬಗ್ಗೆ ನಾನು ಮೊದಲಿನಿಂದಲೂ ಒತ್ತು ನೀಡುತ್ತೇನೆ. ಇದೇ ಯೋಚನೆಯಲ್ಲಿ ನಾನು ಅಭ್ಯಾಸ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಇದರ ಪರಿಣಾಮ ಟೀಮ್ ಇಂಡಿಯಾದಲ್ಲಿ ಭರ್ಜರಿ ಪ್ರದರ್ಶನ ನೀಡಲು ಕಾರಣವಾಗಿದೆ. ನೀವು ನಿಮ್ಮ ಆಟದ ಗುಣಮಟ್ಟ ಸುಧಾರಣೆಯತ್ತ ಒತ್ತು ನೀಡಿದಾಗಲೇ ನಿಮ್ಮ ಆಟ ತಂಡಕ್ಕೆ ನೆರವಾಗುತ್ತದೆ ಎಂದಿದ್ದಾರೆ.
ವಿರಾಟ್ ಈ ಹೇಳಿಕೆಯಿಂದ ತಮ್ಮಲ್ಲಿ ಇನ್ನೂ ಬ್ಯಾಟಿಂಗ್ ಕ್ಷಮತೆ ಇದೆ. ರನ್ ದಾಹ ಇನ್ನು ಕುಂದಿಲ್ಲ ಎನ್ನುವುದನ್ನು ಸಾರಿ ಹೇಳಿದ್ದಾರೆ. ಇನ್ನು ಪಾಕ್ ವಿರುದ್ಧ ವಿರಾಟ್ ಕಳೆದ ಬಾರಿ ಟಿ 20 ವಿಶ್ವಕಪ್‌ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಆ ಪಂದ್ಯದಲ್ಲಿ ವಿರಾಟ್ ಅಜೇಯ 82 ರನ್ ಸಿಡಿಸಿದ್ದರು. ಏಷ್ಯಾಕಪ್ ನಲ್ಲಿ ಇದನ್ನು ಸುಧಾರಿಸಿ ಶತಕ ಬಾರಿಸುವ ಕನಸು ವಿರಾಟ್ ರಿಗೆ ಇದೆ. ಶನಿವಾರ ನಡೆಯುವ ಪಂದ್ಯದಲ್ಲಿ ಶತಕ ಗಳಿಸುವ ಸೂಚನೆಯನ್ನು ಟೀಮ್ ಇಂಡಿಯಾದ ಮಾಜಿ ನಾಯಕ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಭರ್ಜರಿ ಪ್ರದರ್ಶನ
ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಂಕಿ ಅಂಶ ಭರ್ಜರಿಯಾಗಿವೆ. ಈವರೆಗೆ ವಿರಾಟ್ ಪಾಕ್ ವಿರುದ್ಧ ಆಡಿರುವ 13 ಪಂದ್ಯಗಳಲ್ಲಿ 536 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗೂ 2 ಶತಕಗಳು ಸೇರಿವೆ. 96.22 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪಾಕ್ ವಿರುದ್ದ ವಿರಾಟ್ 50 ಬೌಂಡರಿ, 4 ಸಿಕ್ಸರ್ ಸಹ ಸಿಡಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧ ವಿರಾಟ್ ಬೆಸ್ಟ್ ಸ್ಕೋರ್ 183 ರನ್ ಆಗಿದೆ. ಪಾಕ್ ವಿರುದ್ಧ ಮತ್ತೊಮ್ಮೆ ಶತಕ ಬಾರಿಸಿ ವಿರಾಟ್, ವಿಶ್ವಕಪ್‌ಗೆ ಮುನ್ನ ಎದುರಾಳಿಗಳಿಗೆ ಸಂದೇಶ ಕೊಡುವ ಉತ್ಸಾಹದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications