For Quick Alerts
ALLOW NOTIFICATIONS  
For Daily Alerts
 

India vs Pakistan: ನೆಚ್ಚಿನ ಮೈದಾನದಲ್ಲಿ ಅಬ್ಬರಿಸಿ ಬೊಬ್ಬಿರಿದು ಹಲವು ದಾಖಲೆಗಳ ಸರದಾರನಾದ ವಿರಾಟ್ ಕೊಹ್ಲಿ

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸೋಮವಾರ, ಸೆಪ್ಟೆಂಬರ್ 11ರಂದು ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿ ಬೊಬ್ಬಿರಿದರು ಮತ್ತು ಬೃಹತ್ ಮೊತ್ತ ದಾಖಲಿಸಲು ನೆರವಾದರು.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 356 ರನ್‌ಗಳನ್ನು ಕಲೆಹಾಕಿತು.

ಇನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತನ್ನ ನೆಚ್ಚಿನ ಮೈದಾನದಲ್ಲಿ ಅಜೇಯ ಶತಕವನ್ನು ಬಾರಿಸಿದ್ದಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಿಡಿಸಿದರು. ಇನ್ನು ಕರ್ನಾಟಕದ ಕೆಎಲ್ ರಾಹುಲ್ 6ನೇ ಶತಕ ಬಾರಿಸಿದರು.

virat-kohli-hits-brilliant-century-against-pakistan

ಇದಕ್ಕೂ ಮುನ್ನ ಭಾರತದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದರು.

ರೋಹಿತ್ ಶರ್ಮಾ ಅವರು ಶಾದಾಬ್ ಖಾನ್‌ಗೆ ವಿಕೆಟ್ ಒಪ್ಪಿಸಿದ ನಂತರ, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಅವರು 55 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

ಆ ಬಳಿಕ ಕೊಹ್ಲಿ 84 ಎಸೆತಗಳಲ್ಲಿ ತಮ್ಮ 47ನೇ ಏಕದಿನ ಶತಕ ಪೂರೈಸಿದರು. ಅಂತಿಮವಾಗಿ 94 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 122 ರನ್ ಗಳಿಸಿದರು.

ಕರ್ನಾಟಕದ ಮಂಗಳೂರು ಮೂಲದ ಕೆಎಲ್ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 111 ರನ್ ಗಳಿಸಿ ವಿರಾಟ್ ಕೊಹ್ಲಿ ಸಮರ್ಥ ಜೊತೆಗಾರನಾದರು.

virat-kohli-hits-brilliant-century-against-pakistan

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರ್ಮಿಸಿದ ದಾಖಲೆಗಳು ಪಟ್ಟಿ

* ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ವೇಗವಾಗಿ 13000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. 2004ರಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ 321ನೇ ಇನ್ನಿಂಗ್ಸ್‌ನಲ್ಲಿ ಸಾಧನೆ ಮಾಡಿದ್ದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ 13000 ರನ್ ಸಾಧನೆ ಮಾಡಲು ಕೇವಲ 267 ಇನ್ನಿಂಗ್ಸ್‌ ತೆಗೆದುಕೊಂಡರು.

* ವಿರಾಟ್ ಕೊಹ್ಲಿ ಅವರು ಕೆಎಲ್ ರಾಹುಲ್ ಅವರೊಂದಿಗೆ 233 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದು, ಇದು ಏಷ್ಯಾ ಕಪ್ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಜೊತೆಯಾಟವಾಗಿದೆ.

* ವಿರಾಟ್ ಕೊಹ್ಲಿ ಇದೀಗ ಏಷ್ಯಾ ಕಪ್‌ನಲ್ಲಿ 200ಕ್ಕಿಂತ ಅಧಿಕ ರನ್‌ಗಳ 3 ಜೊತೆಯಾಟಗಳಲ್ಲಿ ಭಾಗಿಯಾಗಿದ್ದಾರೆ. 200 ರನ್ ಜೊತೆಯಾಟಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬೇರೆ ಯಾವುದೇ ಬ್ಯಾಟರ್ ಇರಲಿಲ್ಲ.

* ವಿರಾಟ್ ಕೊಹ್ಲಿ ಏಕದಿನ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ಭಾರತೀಯ ಬ್ಯಾಟರ್‌ನಿಂದ 2ನೇ ಗರಿಷ್ಠ ಸ್ಕೋರ್ ಗಳಿಸಿದರು. ಶಿಖರ್ ಧವನ್ 2018 ರಲ್ಲಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಂಗ್ ಕಾಂಗ್ ವಿರುದ್ಧ 127 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

* ವಿರಾಟ್ ಕೊಹ್ಲಿ ಇದೀಗ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ನಾಲ್ಕು ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಟೂರ್ನಿಯಲ್ಲಿ ಸನತ್ ಜಯಸೂರ್ಯ (6) ಮಾತ್ರ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.

* ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಏಕದಿನ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ವಿರಾಟ್ ಕೊಹ್ಲಿ ಭಾರತೀಯ ಬ್ಯಾಟರ್‌ನಿಂದ 3ನೇ ಗರಿಷ್ಠ ರನ್ ಗಳಿಸಿದರು. ಗಮನಾರ್ಹವಾಗಿ, 131 ಮತ್ತು ಅಜೇಯ 128 ಸ್ಕೋರ್‌ಗಳೊಂದಿಗೆ, ಕೊಹ್ಲಿಯೇ ಮೊದಲೆರಡು ಸ್ಥಾನದಲ್ಲಿದ್ದಾರೆ.

* ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ಅವರ ಅತಿ ಹೆಚ್ಚು ಏಕದಿನ ಶತಕಗಳ (4) ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದರು.

Story first published: Monday, September 11, 2023, 22:07 [IST]
Other articles published on Sep 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+