India Vs Pakistan : ಮೆಲ್ಬೋರ್ನ್ ಅಂಗಳದಲ್ಲಿ ಕಿಂಗ್ ಕೊಹ್ಲಿ ಘರ್ಜನೆ ಹೇಗಿತ್ತು ಗೊತ್ತಾ?

ಮೆಲ್ಬೋರ್ನ್ ಅಂಗಳದಲ್ಲಿ ಕಿಂಗ್ ಕೊಹ್ಲಿ ಆರ್ಭಟಿಸಿದ್ದಾರೆ. ಅವರ ವಿರುದ್ಧದ ಟೀಕೆಗಳಿಗೆ, ವ್ಯಂಗ್ಯಗಳಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ. ಟಿ20 ವಿಶ್ವಕಪ್‌ನ ತನ್ನ ಆರಂಭದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ, ಕಳೆದ ವಿಶ್ವಕಪ್‌ನಲ್ಲಿ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಭಾರತಕ್ಕೆ ಸೋಲಿನ ಭೀತಿ ಎದುರಾಗಿದ್ದ ವೇಳೆ ಕ್ರೀಸ್‌ನಲ್ಲಿ ತಳವೂರಿ ನಿಂತ ಕೊಹ್ಲಿ, ಭಾರತವನ್ನು ಗೆಲುವಿನ ದಡ ಸೇರಿಸಿದರು, ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು, ನಂತರ ಸಿಕ್ಸರ್ ಗಳನ್ನು ಸಿಡಿಸಿ ತಮ್ಮ ಕ್ಲಾಸ್ ತೋರಿಸಿದರು. ಕೊನೆಯ ಓವರ್ ಗಳಲ್ಲಿ ತಾವ್ಯಾಕೆ ಬ್ಯಾಟಿಂಗ್‌ನಲ್ಲಿ ಕಿಂಗ್ ಎನ್ನುವುದನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತು ಮಾಡಿದರು.
ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 71 ಶತಕಗಳನ್ನು ದಾಖಲಿಸಿದ್ದಾರೆ, ಹಲವು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ, ಮೆಲ್ಬೋರ್ನ್ ಅಂಗಳದಲ್ಲಿ ಅವರು ಪಾಕಿಸ್ತಾನದ ವಿರುದ್ಧದ ಇನ್ನಿಂಗ್ಸ್ ಮಾತ್ರ ಬಹುಕಾಲದವರೆಗೆ ನೆನಪಿನಲ್ಲಿ ಉಳಿಯಲಿದೆ.
160 ರನ್‌ಗಳನ್ನು ಬೆನ್ನಟ್ಟಿದ ಭಾರತ 6.1 ಓವರ್ ಗಳಲ್ಲಿ 34 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಭಾರತ ಸೋಲುತ್ತದೆ ಎಂದು ಅಂದುಕೊಳ್ಳುವಾಗಲೇ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಜೊತೆಯಾಟ ಆಡಿದರು.

ಆರಂಭಿಕ ಕುಸಿತ ಕಂಡ ಟೀಂ ಇಡಿಯಾ
ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಶಾಹೀನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ರಕ್ಷಣಾತ್ಮಕ ಆಟವಾಡಿದರು, ನಸೀಂ ಶಾ ಮತ್ತು ಹ್ಯಾರಿಸ್ ರೌಫ್ ವಿಕೆಟ್ ಪಡೆದು ಮಿಂಚಿದರು. ನಸೀಂ ಶಾ ಕೆಎಲ್ ರಾಹುಲ್‌ರನ್ನು ಬೌಲ್ಡ್ ಮಾಡಿದರೆ, ಹ್ಯಾರಿಸ್ ರೌಫ್ ರೋಹಿತ್ ಶರ್ಮಾ ವಿಕೆಟ್ ಪಡೆದರು.
ಅತ್ಯುತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೂಡ 10 ಎಸೆತಗಳಲ್ಲಿ 15 ರನ್ ಗಳಿಸಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾದರು.
IND vs PAK: ಶಾನ್ ಮಸೂದ್ ಔಟ್ ತಪ್ಪಿಸಿದ 'ಸ್ಪೈಡರ್ ಕ್ಯಾಮ್'; ಮೈದಾನದಲ್ಲೇ ರೋಹಿತ್ ಆಕ್ರೋಶ

ಶ್ರೇಷ್ಠ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ
ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಲು ಮುಂದಾದರು. ಹಾರ್ದಿಕ್ ಪಾಂಡ್ಯ ಕೂಡ ವಿರಾಟ್ ಕೊಹ್ಲಿಗೆ ಅತ್ಯುತ್ತಮವಾಗಿ ಸಾತ್ ನೀಡಿದರು. ಆದರೂ ಪಾಕಿಸ್ತಾನ ಉತ್ತಮ ಬೌಲಿಂಗ್ ಮೂಲಕ ರನ್ ಗಳಿಸದಂತೆ ಕಡಿವಾಣ ಹಾಕಿದರು.
ಹಾರ್ದಿಕ್ ಪಾಂಡ್ಯ ಕೂಡ ರನ್ ಗಳಿಸಲು ಪರದಾಡುತ್ತಿದ್ದರು. ಕೊಹ್ಲಿ ನಿಧಾನಗತಿಯಲ್ಲೇ 43 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. 43 ಎಸೆತಗಳಲ್ಲಿ 50 ರನ್ ಗಳಿಸಿದರೆ, ನಂತರದ 10 ಎಸೆತಗಳಲ್ಲಿ 32 ರನ್ ಗಳಿಸಿದರು, 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಮಿಂಚಿದರು. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಇದ್ದವು.

ಹ್ಯಾರಿಸ್ ರೌಫ್‌ಗೆ ಎರಡು ಸಿಕ್ಸರ್
ಭಾರತಕ್ಕೆ ಕೊನೆಯ 4 ಓವರ್ ಗಳಲ್ಲಿ ಗೆಲುವಿಗೆ 24 ರನ್ ಗಳ ಅಗತ್ಯವಿತ್ತು. ಆದರೆ, 17ನೇ ಓವರ್ ನಲ್ಲಿ ಕೇವಲ 6 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ, 3 ಓವರ್ ಗಳಲ್ಲಿ 48 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿದರು, ಶಾಹೀನ್ ಓವರ್ ನಲ್ಲಿ 3 ಬೌಂಡರಿ ಸಿಡಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು.
18ನೇ ಓವರ್ ನಲ್ಲಿ ಹ್ಯಾರಿಸ್ ರೌಫ್ ಮೊದಲ ನಾಲ್ಕು ಎಸೆತಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದರು, ಹಾರ್ದಿಕ್ ಪಾಂಡ್ಯ ಬೌಲಿಂಗ್ ಗಳಿಸಲು ಪರದಾಡುತ್ತಿದ್ದಾಗ, 18ನೇ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ಅದ್ಭುತವಾಗಿ ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದರು.

ಕೊನೆಯ ಓವರ್ ನಲ್ಲಿ ಥ್ರಿಲ್ಲರ್
ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲುವಿಗಾಗಿ 16 ರನ್ ಬೇಕಿತ್ತು, ಮೊದಲನೇ ಎಸೆತದಲ್ಲೇ ಪಾಂಡ್ಯ ಔಟಾದಾಗ ಆತಂಕ ನಿರ್ಮಾಣವಾಗಿತ್ತು, ನಂತರ ಬಂದ ದಿನೇಶ್ ಕಾರ್ತಿಕ್ ಒಂದು ರನ್ ಓಡುವ ಮೂಲಕ ಕೊಹ್ಲಿಗೆ ಸ್ಟ್ರೈಕ್ ನೀಡಿದರು. ನಂತರ ಎರಡು ರನ್ ಗಳಿಸಿದ ಕೊಹ್ಲಿ, 19.4ನೇ ಓವರ್ ನಲ್ಲಿ ಸಿಕ್ಸರ್ ಬಾರಿಸಿದರು. ಆದರೆ ಅದು ನೋಬಾಲ್ ಆಗಿತ್ತು, ನಂತರದ ಎಸೆತ ವೈಡ್ ಆಯಿತು, ನಂತರದ ಎಸೆತ ಕೂಡ ಫ್ರೀಹಿಟ್ ಆಗಿತ್ತು, ಕೊಹ್ಲಿ ಬ್ಯಾಟ್ ಮಿಸ್ ಆದ ಬಾಲ್ ವಿಕೆಟ್‌ಗೆ ಬಡಿದು ಬೌಂಡರಿ ಕಡೆ ಓಡಿತು, ಆಗ ಮೂರು ರನ್ ಗಳಿಸಿದರು. 19.5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಆದರು.
ನಂತರ ಭಾರತದ ಗೆಲುವಿಗೆ 1 ಎಸೆತದಲ್ಲಿ 2 ರನ್ ಬೇಕಿತ್ತು. ಮೊಹಮ್ಮದ್ ನವಾಜ್ ನಂತರ ವೈಡ್ ಎಸೆಯುವ ಮೂಲಕ ಸ್ಕೋರ್ ಸಮವಾಯಿತು. ನಂತರ 1 ಎಸೆತದಲ್ಲಿ ಒಂದು ರನ್ ಬೇಕಿದ್ದಾಗ, ಅಶ್ವಿನ್ ಯಾವುದೇ ತಪ್ಪು ಮಾಡದೆ, ಒಂದು ರನ್ ಗಳಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ತಮ್ಮ ಅದ್ಭುತವಾದ ಬ್ಯಾಟಿಂಗ್‌ಗೆ ಸಹಜವಾಗಿಯೇ ವಿರಾಟ್ ಕೊಹ್ಲಿ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications