ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಆತಂಕ: ಕೊಲಂಬೋದ ಇತ್ತೀಚಿನ ಹವಾಮಾನ ವರದಿ ಹೇಗಿದೆ?
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೆಣೆಸಾಟಕ್ಕೆ ಮಳೆ ಮತ್ತೊಮ್ಮೆ ಮಿಲನ್ ಆಗುವ ಆತಂಕ ಅಭಿಮಾನಿಗಳಲ್ಲಿದೆ. ಪಂದ್ಯ ನಡೆಯಲಿರುವ ಕೊಲಂಬೋದಲ್ಲಿ ಆಗಾಗ ಭಾರೀ ಮಳೆಯಾಗುತ್ತಿರುವುದು ಇದಕ್ಕೆ ಕಾರಣ. ಈಗಾಗಲೇ ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದಾಗ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗುವಂತಾಗಿತ್ತು. ಮತ್ತೊಂದು ಬಾರಿ ಅಂಥಾ ಸನ್ನಿವೇಶವನ್ನು ಕಾಣಲು ಅಭಿಮಾನಿಗಳಿಗೆ ಖಂಡಿತಾ ಇಷ್ಟವಿಲ್ಲ.
ಹಾಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಂಪೂರ್ಣವಾಗಿ ನಡೆಯುವಂತಾಗಲಿ ಎನ್ನುವುದು ಅಭಿಮಾನಿಗಳ ಬಯಕೆ. ಈ ಬಹುನಿರೀಕ್ಷಿತ ಪಂದ್ಯಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ನಿಗದಿಪಡಿಸಿದೆ. ಹಾಗಿದ್ದರೂ ಇಂದು ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡದಿರಲಿ ಎನ್ನುವುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ.

ಅದ್ಭುತವಾಗಿದೆ ಕೊಲಂಬೋ ಹವಾಮಾನ
ಭಾನುವಾರ ಬೆಳಗಿನ ಸಂದರ್ಭದಲ್ಲಿ ಕೊಲಂಬೋ ಹವಾಮಾನ ಅದ್ಭುತವಾಗಿದೆ ಎನ್ನುವುದು ಸಮಾಧಾನಕರ ಸಂಗತಿ. ಪಂದ್ಯಕ್ಕೆ ಅತ್ಯಂತ ಪೂರಕವಾತಾವರಣವಿದೆ. ಇದೇ ವಾತಾವರಣ ಮುಂದುವರಿದರೆ ಸಂಪೂರ್ಣವಾಗಿ ಪಂದ್ಯವನ್ನು ಆಸ್ವಾದಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯುವುದು ನಿಶ್ಚಿತ.
ಅಪ್‌ಡೇಟ್ ನೀಡಿದ ಆರ್ ಅಶ್ವಿನ್
ನಿನ್ನು ಟೀಮ್ ಇಂಡಿಯಾದ ಅನುಭವಿ ಆಟಗಾರ ಆರ್ ಅಶ್ವಿನ್ ಕೂಡ ಕೊಲಂಬೋದ ಹವಾಮಾನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಅವರು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಸುಂದರ ಮುಂಜಾನೆ ಸಿದ್ದವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಈ ಮಹಾ ಸೆಣೆಸಾಟಕ್ಕೆ ಈ ಬಾರಿ ಹವಾಮಾನ ಕೂಡ ಸಾಥ್ ನೀಡುವ ಸಾಧ್ಯತೆ ಹೆಚ್ಚಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಶ್ರೀಲಂಕಾದ ಕೊಲಂಬೋದಲ್ಲಿರುವ ಆರ್ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಬ್ಯಾಟಿಂಗ್ ಹಾಗೂ ಬೌಲರ್‌ಗಳ ಮಧ್ಯೆ ಉತ್ತಮ ಸಮತೋಲಿತ ಪಿಚ್ ಇದಾಗಿರಲಿದೆ. ಆರಂಭಿಕ ಹಂತದಲ್ಲಿ ವೇಗಿಗಳಿಗೆ ಇಲ್ಲಿ ಉತ್ತಮವಾದ ನೆರವು ದೊರೆಯುವ ಸಾಧ್ಯತೆಯಿದೆ. ಆದರೆ ಪಂದ್ಯ ಮುಂದುವರಿಯುತ್ತಿದ್ದಂತೆಯೇ ಪಿಚ್ ಸ್ಥಿರತೆಯನ್ನು ಹೊಂದಲಿದೆ. ಇನ್ನು ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರ ಕೂಡ ನಿರ್ಣಾಯಕವಾಗಿರುವ ಸಾಧ್ಯತೆಯಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಂಭಾವ್ಯ ಆಡುವ ಬಳಗ
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications