Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup 2026: ವೀಕ್ಷಕರ ಸಂಖ್ಯೆಯಲ್ಲೂ ದಾಖಲೆ ಬರೆದ ಭಾರತ, ಪಾಕ್‌ ಪಂದ್ಯ

ಇಂಗ್ಲೆಂಡ್‌ನಲ್ಲಿ ಮಹಿಳಾ ಟಿ20 ವಿಶ್ವಕಪ್‌ ನಡೆಯುತ್ತಿದೆ. ಈ ಮೆಗಾ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸಿದೆ. ಆಡಿದ ಮೊದಲ ಪಂದ್ಯದಲ್ಲಿ 64 ರನ್‌ಗಳಿಂದ ಪಾಕ್ ತಂಡವನ್ನು ಮಣಿಸಿ, ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಟೀಮ್ ಇಂಡಿಯಾದ ಪರ ಆಲ್‌ರೌಂಡರ್‌ ಆಟಗರ್ತಿ ದೀಪ್ತಿ ಶರ್ಮಾ ಸ್ಥಿರ ಪ್ರದರ್ಶನ ನೀಡಿ ಐದು ವಿಕೆಟ್‌ ಪಡೆದರು. ಇವರ ಕ್ಲಾಸಿಕ್ ಪ್ರದರ್ಶನಕ್ಕೆ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

ಭಾರತ ಹಾಗೂ ಪಾಕ್‌ ಪಂದ್ಯದಲ್ಲಿ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಹಲವು ದಾಖಲೆಗಳನ್ನು ಬರೆದು ಮಿಂಚಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 3 ಗುಂಪಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದು, ಆ ಬಗ್ಗೆ ವರದಿ ಇಲ್ಲಿದೆ.

India vs Pakistan

ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿ ಒಟ್ಟು 9ನೇ ಬಾರಿಗೆ ಮುಖಾಮುಖಿಯಾದವು. ಈ ವೇಳೆ ಭಾರತ 7ನೇ ಬಾರಿಗೆ ಜಯ ಸಾಧಿಸಿದೆ. ಈ ಎರಡು ತಂಡಗಳು ಕಣಕ್ಕೆ ಇಳಿದಾಗಲೆಲ್ಲಾ ಅಭಿಮಾನಿಗಳಲ್ಲಿ ಉತ್ಸಾಹ ಉತ್ತುಂಗದಲ್ಲಿರುತ್ತದೆ. ಅದಕ್ಕಾಗಿಯೇ ಈ ಭಾರತ-ಪಾಕಿಸ್ತಾನ ಪಂದ್ಯವು ಅಪಾರ ಅಭಿಮಾನಿಗಳನ್ನು ಕಂಡಿತು, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿತು.

ದಾಖಲೆ ಬರೆದ ಭಾರತ, ಪಾಕ್‌ ಪಂದ್ಯ

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ಒಟ್ಟು 18,814 ಪ್ರೇಕ್ಷಕರು ವೀಕ್ಷಿಸಿದರು. ಈ ಮೂಲಕ ಈ ಪಂದ್ಯ ಹೊಸ ದಾಖಲೆ ನಿರ್ಮಿಸಿತು. ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ಗುಂಪು ಹಂತದ ಪಂದ್ಯಕ್ಕೆ ಇಷ್ಟು ಪ್ರೇಕ್ಷಕರು ಜಮಾಯಿಸಿರಲಿಲ್ಲ. ಆದರೆ ಈಗ ಇದು ಹಳೆಯ ಇತಿಹಾಸವನ್ನು ಅಳಿಸಿ ಹೊಸ ದಾಖಲೆ ಬರೆದಿದೆ. ಈ ದಾಖಲೆ ಈ ಮೊದಲು 2024 ರ ಟಿ 20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವು 15,935 ಪ್ರೇಕ್ಷಕರನ್ನು ಆಕರ್ಷಿಸಿತು, ಇದು ಆ ಸಮಯದಲ್ಲಿ ಗುಂಪು ಹಂತದಲ್ಲಿ ಅತಿ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದರು.

ಹರ್ಮನ್‌ ಪಡೆ ಶುಭಾರಂಭ

ಎರಡು ವರ್ಷಗಳ ಹಿಂದೆ ದುಬೈನಲ್ಲಿ ನಿರ್ಮಿಸಲಾದ ದಾಖಲೆಯನ್ನು ಈಗ ಇಂಗ್ಲೆಂಡ್‌ನಲ್ಲಿ ಮುರಿಯಲಾಗಿದೆ. ಈ ಅಂಕಿ ಅಂಶಗಳು ಭಾರತ ಹಾಗೂ ಪಾಕ್‌ ತಂಡಗಳ ನಡುವಣ ಹೈವೋಲ್ಟೇಜ್‌ ಕಾವು ಈಗಲೂ ಎಷ್ಟು ಜನರನ್ನು ಆಕರ್ಷಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 170 ರನ್‌ಗಳ ಸವಾಲಿನ ಮೊತ್ತವನ್ನು ಗಳಿಸಿತು.ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್‌ ಕೇವಲ 106 ರನ್‌ಗಳಿಗೆ ಆಲೌಟ್ ಆಯಿತು.

Story first published: Monday, June 15, 2026, 13:40 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+