
ಕೇಪ್ ಟೌನ್, ಜನವರಿ 05: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫ್ರೀಡಂ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 73.1 ಓವರ್ ಗಳಲ್ಲಿ 286 ಸ್ಕೋರಿಗೆ ಆಲೌಟ್ ಆಗಿದೆ. ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು 4 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ : ಎಬಿ ಡಿ ವಿಲಿಯರ್ಸ್ 65, ನಾಯಕ ಫಾಫ್ ಡುಪ್ಲೇಸಿಸ್ 62ರನ್, ಕ್ವಿಂಟಾನ್ ಡಿ ಕಾಕ್ 43 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭುವನೇಶ್ವರ್ ಕುಮಾರ್ 4, ಅಶ್ವಿನ್ 2, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಟಾಸ್ ವರದಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಫ್ರೀಡಂ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ನ್ಯೂಲ್ಯಾಂಡ್ ಮೈದಾನದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭುವನೇಶ್ವರ್ ಉತ್ತಮ ಬೌಲಿಂಗ್ ಮಾಡುತ್ತಿದ್ದು, ಆರಂಭಿಕ ಮೂರು ವಿಕೆಟ್ ಕಿತ್ತು, ರನ್ ಗತಿಗೆ ಬ್ರೇಕ್ ಹಾಕಿದರು.
ತಂಡದ ಬದಲಾವಣೆ: ಭಾರತದ ಪರ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಚೊಚ್ಚಲ ಟೆಸ್ಟ್ ಪಂದ್ಯವಾಡುವ ಅವಕಾಶ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರು ಬೂಮ್ರಾಗೆ ಟೆಸ್ಟ್ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. ಅಜಿಂಕ್ಯ ರಹಾನೆ ಅವರನ್ನು ಆಡುವ ಹನ್ನೊಂದರಿಂದ ಕೈಬಿಟ್ಟು ರೋಹಿತ್ ಶರ್ಮ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಶಿಖರ್ ಧವನ್ ಅವರು ಫಿಟ್ ಆಗಿದ್ದು, ತಂಡದ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕೆಎಲ್ ರಾಹುಲ್ ಅವರು ಮತ್ತೊಮ್ಮೆ ಅವಕಾಶಕ್ಕಾಗಿ ಕಾದು ಕೂರಬೇಕಾಗಿದೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಲ್ವರು ವೇಗಿಗಳು ಒಬ್ಬ ಸ್ಪಿನ್ನರ್ ಇದ್ದು, ತೆಂಬಾ ಬವುಮಾ ತಂಡದಿಂದ ಹೊರಗುಳಿದಿದ್ದಾರೆ. 25 ವರ್ಷಗಳಿಂದ ಟೆಸ್ಟ್ ಸರಣಿ ಗೆಲುವಿನ ಬೇಟೆಯಲ್ಲಿರುವ ಭಾರತ, ಉತ್ತಮ ಹೋರಾಟ ನೀಡುವ ನಿರೀಕ್ಷೆಯಿದೆ.
ಆಡುವ ಹನ್ನೊಂದು :
ದಕ್ಷಿಣ ಆಫ್ರಿಕಾ: ಡೀನ್ ಎಲ್ಗಾರ್, ಐಡೆನ್ ಮಾರ್ಕಮ್, ಹಶೀಂ ಆಮ್ಲಾ, ಎಬಿ ಡಿ ವಿಲಿಯರ್ಸ್, ಫಾಫ್ ಡು ಪ್ಲೆಸಿಸ್(ನಾಯಕ), ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ವೆರ್ನಾನ್ ಫಿಲ್ಯಾಂದರ್, ಕೇಶವ್ ಮಹರಾಜ್, ಡೇಲ್ ಸ್ಟೇನ್, ಕಾಗಿಸೋ ರಬಾಡಾ, ಮಾರ್ನೆ ಮಾರ್ಕೆಲ್,
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ.