ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ಟೀಂ ಇಂಡಿಯಾ XI

India vs South Africa, 1st Test: India Probable XI for the Visakhapatnam Test

ವಿಶಾಖಪಟ್ಟಣಂ, ಅಕ್ಟೋಬರ್ 01: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿ ವೈಜಾಗ್ ನಲ್ಲಿ ಅಕ್ಟೋಬರ್ 02 ರಿಂದ ಶುರುವಾಗಲಿದೆ. ಮೊದಲ ಟೆಸ್ಟ್ ಪಂದ್ಯವಾಡಲಿರುವ ಟೀಂ ಇಂಡಿಯಾದ ಹನ್ನೊಂದು ಮಂದಿ ಬಳಗದ ಬದಲಾವಣೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಮಿಕ್ಕಂತೆ ಯಾವೆಲ್ಲ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ...

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬದಲಿಗೆ ಅನುಭವಿ ವೃದ್ಧಿಮಾನ್ ಸಹಾಗೆ ಆಡಲು ಅವಕಾಶ ಸಿಗಲಿದೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೂರ ದೂರ!

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡ ಟೀಂ ಇಂಡಿಯಾದಲ್ಲಿ ಸಹಾ ಅವರು ಆಯ್ಕೆಯಾಗಿದ್ದರೂ ರಿಷಪ್ ಪಂತ್ ಗೆ ಸ್ಥಾನ ಸಿಕ್ಕಿತ್ತು. ಆದರೆ ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಸಹಾ ಜೊತೆಗೆ ಟೆಸ್ಟ್ ತಂಡಕ್ಕೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಮರಳುತ್ತಿದ್ದಾರೆ. ಅಶ್ವಿನ್ ಅವರು ವೈಜಾಗ್ ಟೆಸ್ಟ್ ಆಡುವುದನ್ನು ಕೊಹ್ಲಿ ಖಚಿತಪಡಿಸಿದ್ದಾರೆ.

ರೋಹಿತ್ ಶರ್ಮ ಕೂಡಾ ಟೆಸ್ಟ್ ತಂಡಕ್ಕೆ ಮರಳಿದ್ದು, ಮಯಾಂಕ್ ಅಗರವಾಲ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

1. ರೋಹಿತ್ ಶರ್ಮ

1. ರೋಹಿತ್ ಶರ್ಮ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಬಿದ್ದ ಬಳಿಕ ತಂಡಕ್ಕೆ ರೋಹಿತ್ ಶರ್ಮ ಆಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರೂ ರೋಹಿತ್ ಮೇಲೆ ಬಿಸಿಸಿಐ, ಕೊಹ್ಲಿ, ರವಿಶಾಸ್ತ್ರಿ ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ. ಇದೇ ನಂಬಿಕೆಯಲ್ಲಿ ರೋಹಿತ್ ಕಣಕ್ಕಿಳಿಯುತ್ತಿದ್ದು ದಕ್ಷಿಣ ಆಫ್ರಿಕಾ ವೇಗಿಗಳ ಎದುರು ರನ್ ಗಳಿಕೆ ಸುಲಭವಂತೂ ಅಲ್ಲ. ಟೆಸ್ಟ್ ತಂಡದಲ್ಲಿ ಉಳಿದುಕೊಳ್ಳಲು ರೋಹಿತ್ ಗೆ ದೊಡ್ಡ ಮೊತ್ತ ಕಲೆ ಹಾಕುವುದು ಅನಿವಾರ್ಯವಂತೂ ಹೌದು.

2. ಮಯಾಂಕ್ ಅಗರವಾಲ್

2. ಮಯಾಂಕ್ ಅಗರವಾಲ್

ಕರ್ನಾಟಕದ ಆಟಗಾರ ಮಯಾಂಕ್ ಅಗರವಾಲ್ ಸಾಧಾರಣ ಮಟ್ಟದ ಲಯದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ ಮಯಾಂಕ್ ಮೇಲೆ ನಿರೀಕ್ಷೆ ಅಧಿಕವಾಗಿದೆ. ಹೊಸ ಆರಂಭಿಕ ಜೋಡಿಯಾಗಿ ರೋಹಿತ್ ಜೊತೆ ಹೊಂದಾಣಿಕೆ ಸಾಧಿಸಿ ರನ್ ಗತಿ ಹೆಚ್ಚಿಸುವ ಹೊಣೆಗಾರಿಕೆ ಮಯಾಂಕ್ ಮೇಲಿದೆ.

3. ಚೇತೇಶ್ವರ್ ಪೂಜಾರಾ

3. ಚೇತೇಶ್ವರ್ ಪೂಜಾರಾ

ವೆಸ್ಟ್ ಇಂಡೀಸ್ ಸರಣಿಯಲ್ಲಿ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಟೆಸ್ಟ್ ತಜ್ಞ ಆಟಗಾರ ಚೇತೇಶ್ವರ್ ಪೂಜಾರಾ ವಿಫಲರಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಮೊತ್ತ ಕಲೆ ಹಾಕುವ ಉತ್ಸಾಹದಲ್ಲಿದ್ದಾರೆ. ಬಹುತೇಕ ಟೆಸ್ಟ್ ಸರಣಿಗೆ ಪೂಜಾರಾ ಬ್ಯಾಟಿಂಗ್ ಆಧಾರ ಸ್ತಂಭವಾಗಲಿದೆ.

4. ವಿರಾಟ್ ಕೊಹ್ಲಿ

4. ವಿರಾಟ್ ಕೊಹ್ಲಿ

ಕ್ರಿಕೆಟ್ ಮೂರು ಮಾದರಿಯಲ್ಲಿ 50ಪ್ಲಸ್ ರನ್ ಸರಾಸರಿ ಹೊಂದಿರುವ ಹೆಗ್ಗಳಿಕೆಯೊಂದಿಗೆ ಉತ್ತಮ ಲಯದಲ್ಲಿರುವ ನಾಯಕ ಕೊಹ್ಲಿಗೆ ಈ ಸರಣಿ ಮಹತ್ವದ್ದಾಗಿದೆ. ಬ್ಯಾಟಿಂಗ್ ವಿಷಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ದೊಡ್ಡ ಮೊತ್ತ ಕಲೆ ಹಾಕಿಲ್ಲ. ಏಕದಿನ ಪಂದ್ಯಗಳಲ್ಲಿ 2 ಶತಕ ಬಾರಿಸಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಿದೆ. ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆಯಾದರೂ ಕೊಹ್ಲಿ ಮೈದಾನದಲ್ಲೇ ಉತ್ತರ ನೀಡುವ ನಿರೀಕ್ಷೆಯಿದೆ.

5. ಅಜಿಂಕ್ಯ ರಹಾನೆ

5. ಅಜಿಂಕ್ಯ ರಹಾನೆ

ಟೆಸ್ಟ್ ಕ್ರಿಕೆಟ್ ನಲ್ಲಿ 10ನೇ ಶತಕ ದಾಖಲಿಸಿದ ಉಪ ನಾಯಕ ಅಜಿಂಕ್ಯ ರಹಾನೆ ಉತ್ತಮ ಲಯದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿಗಳ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಪೂಜಾರಾ ನಂತರ ರಹಾನೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಗಮನಿಸಬೇಕಾದ ಆಟಗಾರರಾಗಿದ್ದಾರೆ. ಮುಂಬರುವ ಸರಣಿಗಳಿಗೆ ಆಯ್ಕೆಯಾಗಲು ಈ ಸರಣಿಯಲ್ಲಿ ನೀಡುವ ಪ್ರದರ್ಶನ ಮಾನದಂಡವಾಗಬಹುದು.

6. ವೃದ್ಧಿಮಾನ್ ಸಹಾ

6. ವೃದ್ಧಿಮಾನ್ ಸಹಾ

ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್ ಹಾಗೂ ಕೀಪಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರಿಂದ ಹೊರಗುಳಿಯಲಿದ್ದಾರೆ. ನಾಯಕ ಕೊಹ್ಲಿಯೇ ಅನುಭವಿ ವೃದ್ಧಿಮಾನ್ ಸಹಾ ಅವರು ವೈಜಾಗ್ ಪಂದ್ಯದಲ್ಲಿ ಆಡುವುದನ್ನು ಖಚಿತ ಪಡಿಸಿದ್ದಾರೆ. ಬಹುಕಾಲದ ನಂತರ ಕಣಕ್ಕಿಳಿಯುತ್ತಿರುವ ಸಹಾಗೂ ತಕ್ಷಣಕ್ಕೆ ಹೊಂದಾಣಿಕೆ ಕಷ್ಟವಾಗಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಆಯ್ಕೆ.

7. ಹನುಮ ವಿಹಾರಿ

7. ಹನುಮ ವಿಹಾರಿ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ವೃತ್ತಿ ಬದುಕಿನ ಚೊಚ್ಚಲ ಶತಕ ಗಳಿಸಿದ ಹನುಮ ವಿಹಾರಿ ಸದ್ಯಕ್ಕೆ ತಂಡದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ಆಟಗಾರ. ವಿಂಡೀಸ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನೂ ಹೌದು. ಆಫ್ ಸ್ಪಿನ್ ಬೌಲಿಂಗ್ ಮೂಲಕ ಕೂಡಾ ತಂಡಕ್ಕೆ ಕೊಡುಗೆ ನೀಡುತ್ತಿರುವ ಹನುಮ ವಿಹಾರಿ ತಮ್ಮ ಉತ್ತಮ ಕಾರ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಮುಂದುವರೆಸಲು ಬಯಸಿದ್ದಾರೆ.

8. ಆರ್ ಅಶ್ವಿನ್

8. ಆರ್ ಅಶ್ವಿನ್

ವೆಸ್ಟ್ ಇಂಡೀಸ್ ಸರಣಿಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗದಿದ್ದಾಗ ಅನೇಕರು ಹುಬ್ಬೇರಿಸಿದ್ದರು. ಬಹುಕಾಲ ಟೀಂ ಇಂಡಿಯಾದಿಂದ ದೂರವುಳಿದಿರುವ ಅಶ್ವಿನ್ ಅವರನ್ನು ವೈಜಾಗ್ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಕೊನೆ ಕ್ಷಣದಲ್ಲಿ ಕುಲದೀಪ್ ಯಾದವ್ ಆಯ್ಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ.

9. ರವೀಂದ್ರ ಜಡೇಜಾ

9. ರವೀಂದ್ರ ಜಡೇಜಾ

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಏಕೈಕ ಸ್ಪಿನ್ನರ್ ಆಗಿದ್ದ ರವೀಂದ್ರ ಜಡೇಜಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಸಜ್ಜಾಗಿದ್ದಾರೆ. ಆಲ್ ರೌಂಡರ್ ಆಟ ನೀಡುವಲ್ಲಿ ಜಡೇಜಾ ವಿಫಲರಾಗುತ್ತಿದ್ದು, ಹಾರ್ದಿಕ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಸರಿಯಾದ ಸಂದರ್ಭ ಹಾಗೂ ಸಮಯವಾಗಿದೆ.

10. ಇಶಾಂತ್ ಶರ್ಮ

10. ಇಶಾಂತ್ ಶರ್ಮ

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ಅಲ್ಲದೆ ಬ್ಯಾಟಿಂಗ್ ನಲ್ಲೂ ಮಿಂಚುವ ಮೂಲಕ ಇಶಾಂತ್ ಶರ್ಮ ಎಲ್ಲರಲ್ಲೂ ಅಚ್ಚರಿಗೆ ದೂಡಿದ್ದರು. 12 ವಿಕೆಟ್ ಕಬಳಿಸಿದ್ದ ಇಶಾಂತ್ ಅವರು ಬೌಲಿಂಗ್ ಪಡೆ ಮುನ್ನಡೆಸಬೇಕಿದೆ. ಜಸ್ ಪ್ರೀತ್ ಬೂಮ್ರಾ ಅನುಪಸ್ಥಿತಿ ತಂಡವನ್ನು ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

11. ಮೊಹಮ್ಮದ್ ಶಮಿ

11. ಮೊಹಮ್ಮದ್ ಶಮಿ

ಭಾರತ ತಂಡದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಗಾಯಾಳುವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇಶಾಂತ್ ಜತೆಗೂಡಿ ಶಮಿ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಶಮಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದರೂ, ಬೌಲಿಂಗ್ ಪಡೆಯನ್ನು ಸಂಪೂರ್ಣವಾಗಿ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಳ್ಳುವ ಧೈರ್ಯ ತೋರಿಲ್ಲ. ಕೊಹ್ಲಿ ಪಡೆ ಯಶಸ್ಸಿಗೆ ಶಮಿ ಬೌಲಿಂಗ್ ನಿರ್ಣಾಯಕವಾಗಲಿದೆ.

Story first published: Tuesday, October 1, 2019, 22:36 [IST]
Other articles published on Oct 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X