ಭಾರತ vs ದ. ಆಫ್ರಿಕಾ: ಯಾರಿಗೆ ಕೊರಳಿಗೆ ಗೆಲುವಿನ ಮಾಲೆ?: 3ನೇ ದಿನದ ಹೈಲೈಟ್ಸ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಮೂರನೇ ದಿನದಾಟದ ಅಂತ್ಯವಾಗುವ ವೇಲೆ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದು ನಾಲ್ಕನೇ ದಿನ ಪಂದ್ಯವನ್ನು ಗೆಲ್ಲುವತ್ತ ಚಿತ್ತ ನೆಟ್ಟಿರುವುದು ಸ್ಪಷ್ಟವಾಗಿದೆ. 240 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಬವನ್ನು ಪಡೆದುಕೊಂಡಿದ್ದು ಗೆಲುವಿನತ್ತ ಹೆಜ್ಜೆ ಹಾಕಿದೆ. ನಾಲ್ಕನೇ ದಿನ ಭಾರತ ತಂಡದ ಬೌಲರ್‌ಗಳು ಯಾವ ರೀತಿ ತಿರುಗಿ ಬೀಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಡೀನ್ ಎಲ್ಗರ್ ಮತ್ತೊಮ್ಮೆ ಆಸರೆಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ್ದಾರೆ. ಮತ್ತೊಂದು ತುದಿಯಲ್ಲಿ ರಾಸ್ಸಿ ವಾನ್‌ಡರ್ ಡಸ್ಸೆನ್ ಸಾಥ್ ನೀಡುತ್ತಿದ್ದು ದಕ್ಷಿಣ ಆಫ್ರಿಕಾ ಮೂರನೇ ದಿನ ಹೆಚ್ಚಿನ ಆಘಾತ ಅನುಭವಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರನೇ ದಿನದಾಟದ ಹೈಲೈಟ್ಸ್ ಹೇಗಿತ್ತು? ಮುಂದೆ ಓದಿ..

ಪೂಜಾರ, ರಹಾನೆ ಉತ್ತಮ ಜೊತೆಯಾಟ
ಭಾರತ ತಂಡ 85 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು 3ನೇ ದಿನದಾಟವನ್ನು ಆರಂಭಿಸಿತ್ತು. ಕ್ರೀಸ್‌ನಲ್ಲಿ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಮೂರನೇ ದಿನದಾಟ ಮುಂದಿವರಿಸಿದ್ದರು. ನಿರಂತರವಾಗಿ ವೈಫಲ್ಯ ಅನುಭವಿಸುತ್ತಾ ಬಂದ ಈ ಇಬ್ಬರು ಆಟಗಾರರು ಈ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನಿಡುವ ಮೂಲಕ ಉತ್ತಮ ಜೊತೆಯಾಟವನ್ನು ನೀಡಿದರು. ಇಬ್ಬರು ಆಟಗಾರರು ಕೂಡ ತಲಾ ಅರ್ಧ ಶತಕವನ್ನು ಬಾರಿಸಿ ಮಿಂಚಿದರು. ಆದರೆ ಈ ಅರ್ಧ ಶತಕವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು. 111 ರನ್‌ಗಳ ಜೊತೆಯಾಟ ಈ ಜೊಡಿಯಿಂದ ಬಂದಿತ್ತು. ಅಜಿಂಕ್ಯಾ ರಹಾನೆ 58 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತ್ತು. ಅದಾದ ಬಳಿಕ ಕೆಲವೇ ನಿಮಿಷಗಳ ಅಂತರದಲ್ಲಿ 53 ರನ್‌ಗಳಿಸಿದ್ದ ಚೇತೇಶ್ವರ್ ಪುಜಾರ ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ಈ ಇಬ್ಬರು ಕೂಡ ಕಗಿಸೋ ರಬಡಾಗೆ ವಿಕೆಟ್ ಒಪ್ಪಿಸಿದ್ದರು.

ಭಾರೀ ಕುಸಿತಕ್ಕೆ ಒಳಗಾದ ಭಾರತ
ಇನ್ನು ರಹಾನೆ ವಿಕೆಟ್ ಕಳೆದುಕೊಂಡ ತಕ್ಷಣವೇ ಭಾರತ ತಂಡ ಭಾರೀ ಕುಸಿತವೊಂದನ್ನು ಕಂಡಿತು. 155 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ 184 ರನ್‌ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ರಹಾನೆ ಹಾಗೂ ಪೂಜಾರ ವಿಕೆಟ್ ಕಳೆದು ಕೊಂಡ ತಕ್ಷಣವೇ ರಿಷಭ್ ಪಂತ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ನಂತರ ಆರ್ ಅಶ್ವಿನ್ 16 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಭಾರತ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ವಿಹಾರಿ ಸಮಯೋಚಿತ ಬ್ಯಾಟಿಂಗ್‌ಗೆ ಭಾರೀ ಮೆಚ್ಚುಗೆ
ಇನ್ನು ಟೀಮ್ ಇಂಡಿಯಾದ ಬ್ಯಾಟರ್‌ಗಳು ಒಂದು ತುದಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹನುಮ ವಿಹಾರಿ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ್ದರು. ಕೊನೇಯ ಹಂತದಲ್ಲಿಯೂ ಜವಾಬ್ಧಾರಿಯುತ ಪ್ರದರ್ಶನ ನೀಡಿದ ವಿಹಾರಿ ಕ್ರಿಕೆಟ್ ಅಭಿಮಾನಿಗಳು ಹಾಗೂ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಂತಿಮ ವಿಕೆಟ್ ಇರುವ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಜೊತೆಗೂಡಿ ನೀಡಿದ 21 ರನ್‌ಗಳ ಜೊತೆಯಾಟ ಬಹಳ ನಿರ್ಣಾಯಕವೆನಿಸಿತು. ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಸಾಕಷ್ಟು ವಿಶ್ಲೇಷಕರು ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಂತಿಮವಾಗಿ ಭಾರತ 266 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 140 ರನ್‌ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಎಡವಿತಾ ಭಾರತದ ಬೌಲಿಂಗ್ ಪಡೆ
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ 47 ರನ್‌ಗಳಿಸಿದ್ದಾಗ ದಕ್ಷಿಣ ಆಫ್ರಿಕಾ ತಂಡ 31 ರನ್‌ಗಳಿಸಿದ್ದ ಮಾರ್ಕ್ರಮ್ ವಿಕೆಟ್ ಕಳೆದುಕೊಂಡಿತ್ತು. ನಂತರ 93 ರನ್‌ಗಳಿಗೆ ದಕ್ಷಿಣ ಆಪ್ರಿಕಾ ತಂಡ 2 ವಿಕೆಟ್ ಕಳೆದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅಜೇಯವಾಗುಳಿದಿದ್ದು 46 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ವಾನ್ ಡರ್ ಡಸನ್ ನಾಯಕನಿಗೆ ಸಾತ್ ನೀಡುತ್ತಿದ್ದು 11 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಈ ಜೋಡಿಯನ್ನು ಭಾರತ ಎಷ್ಟು ಬೇಗನೆ ಬೇರ್ಪಡಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಉಳಿದ ಬ್ಯಾಟರ್‌ಗಳು ಕೂಡ ಕ್ರೀಸ್ ಕಚ್ಚಿ ನಿಲ್ಲದಂತೆ ಮಾಡುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾದರೆ ಮಾತ್ರವೇ ಈ ಪಂದ್ಯವನ್ನು ಭಾರತ ತಂಡ ಗೆಲ್ಲಲು ಸಾಧ್ಯವಿದೆ.
ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಡುವಾನ್ನೆ ಒಲಿವಿಯರ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications