ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಕೇಪ್‌ಟೌನ್‌ಗೆ ಬಂದಿಳಿದ ಟೀಂ ಇಂಡಿಯಾ ಆಟಗಾರರು:Video

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಆಟಗಾರರು ಕೇಪ್‌ಟೌನ್‌ಗೆ ಬಂದಿಳಿದಿದ್ದಾರೆ. ಭಾರತದ ಆಟಗಾರರು ಕೇಪ್‌ಟೌನ್ ಹೋಟೆಲ್ ತಲುಪುವ ಮುನ್ನ ಕೊಹ್ಲಿ ಪಡೆಗೆ ಅಭೂತಪೂರ್ವ ಸ್ವಾಗತ ಸಿಕ್ಕಿತು. ಆಫ್ರಿಕಾದವರು ತಮ್ಮದೆ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ಸ್ವಾಗತ ಕೋರಿದ್ದಾರೆ. ಅಲ್ಲದೆ ಕೇಪ್‌ಟೌನ್‌ಗೆ ಸ್ವಾಗತ ಎಂದು ಬರೆದಿರುವ ಕೇಕ್ ಕೂಡ ತಯಾರು ಮಾಡಿದ್ದರು.
ಮೂರು ಪಂದ್ಯಗಳ ಟೆಸ್ಟ್ ಸರಣಿಯು 1-1ರಿಂದ ಸಮಬಲಗೊಂಡ ಪರಿಣಾಮ ಅಂತಿಮ ಪಂದ್ಯ ಕುತೂಹಲ ಹಂತಕ್ಕೆ ಹೋಗಿ ತಲುಪಿದೆ. ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಲಿದ್ದು, ಭಾರತವು ಐತಿಹಾಸಿಕ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅತ್ತ ದಕ್ಷಿಣ ಆಫ್ರಿಕಾ ತವರಿನ ಅಂಗಳದಲ್ಲಿ ಗೆಲುವು ಬಿಟ್ಟುಕೊಡದಿರಲು ತಯಾರಿ ನಡೆಸುತ್ತಿದೆ. ಉಭಯ ತಂಡಗಳು ಸಾಕಷ್ಟು ತಯಾರಿಯೊಂದಿಗೆ ಕಣಕ್ಕಿಳಿಯಲಿದ್ದು, ಕೊಹ್ಲಿ ಪಡೆ ಇಂದಿನಿಂದ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಅಭ್ಯಾಸ ಶುರು ಮಾಡಲಿದೆ.
ವಿರಾಟ್ ಕೊಹ್ಲಿ ಪಡೆ ಕೇಪ್‌ಟೌನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಕುರಿತಾದ ವೀಡಿಯೋವನ್ನು ಬಿಸಿಸಿಐ ಪ್ರಕಟಿಸಿದ್ದು, ಭಾರತದ ಆಟಗಾರರ ಪ್ರಯಾಣವನ್ನ ವೀಕ್ಷಿಸಬಹುದು
ಈಗಾಗಲೇ 1-1ರಿಂದ ಸಮಬಲಗೊಂಡ ಪರಿಣಾಮ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಡಿಸೈಡರ್ ಆಗಿ ಪರಿಣಮಿಸಿದೆ. ಸೆಂಚುರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಗೆದ್ದಿದ್ದ ಭಾರತಕ್ಕೆ, ಜೋಹಾನ್ಸ್‌ಬರ್ಗ್‌ನಲ್ಲಿ ಹರಿಣಗಳು ತಿರುಗೇಟು ನೀಡಿದ್ದಾರೆ. ಹೀಗಾಗಿ ಕೇಪ್‌ಟೌನ್ ಟೆಸ್ಟ್ ಮ್ಯಾಚ್ ಕ್ರಿಕೆಟ್ ಲೋಕದ ಗಮನ ಸೆಳೆದಿದೆ.
ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ
ಟೀಮ್ ಇಂಡಿಯಾ ಪರ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಮರಳಿದ್ರೆ ಯಾರನ್ನ ಹೊರಗಿಡಬೇಕು ಎಂಬ ಗೊಂದಲ ಟೀಂ ಇಂಡಿಯಾಗಿದೆ. ಇದರ ನಡುವೆ ಕೊಹ್ಲಿ ಈಗಾಗಲೇ ಅಭ್ಯಾಸ ಶುರು ಮಾಡಿರುವುದರ ಕುರಿತು ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.
ಆರು ಬ್ಯಾಟ್ಸ್‌ಮನ್‌ಗಳು ಮತ್ತು ಐವರು ಬೌಲರ್‌ಗಳ ತಂತ್ರವು ವಿದೇಶಿ ಪಿಚ್‌ಗಳಲ್ಲಿ ಭಾರತಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ರೆ ದಕ್ಷಿಣ ಆಫ್ರಿಕಾ ಪಿಚ್‌ನಲ್ಲಿ ಈ ಕಾರ್ಯತಂತ್ರ ಅಷ್ಟು ಕೈ ಹಿಡಿಯುತ್ತಿಲ್ಲ. ಹೀಗಾಗಿ ಕೊಹ್ಲಿ ಪ್ಲೇಯಿಂಗ್ 11ನಲ್ಲಿ ತಂಡಕ್ಕೆ ಆಗಮಿಸಿದ್ರೆ, ಯಾರು ಹೊರಗುಳಿಯುತ್ತಾರೆ ಎಂಬ ಗೊಂದಲವಿದೆ.
ಅಂತಿಮ ಟೆಸ್ಟ್ ಪಂದ್ಯವು ಜನವರಿ 11ರಿಂದ (ಮಂಗಳವಾರ) ಶುರುವಾಗಲಿದ್ದು, ಕೇಪ್‌ಟೌನ್ ನ್ಯೂಲ್ಯಾಂಡ್ಸ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications