ಹಳೇ ಕೊಹ್ಲಿ ಬೇರೆ, ಈ ಕೊಹ್ಲಿ ಬೇರೆ!; ದ್ರಾವಿಡ್ ಮಾಡಿದ ಈ ಮಾಸ್ಟರ್ ಪ್ಲಾನ್ ಕೊಡುತ್ತಾ 71ನೇ ಶತಕದ ಫಲ?

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ದೊಡ್ಡ ಮಟ್ಟದ ವಿವಾದ ಮತ್ತು ಚರ್ಚೆಗೆ ಒಳಗಾಗಿರುವಂತಹ ಕ್ರಿಕೆಟಿಗ. ಈ ವರ್ಷದ ಆರಂಭದಲ್ಲಿ ಭಾರತ ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಈ ಮೂರೂ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ಈ ವರ್ಷದ ಅಂತ್ಯದ ವೇಳೆಗೆ ಕೇವಲ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಣಯವನ್ನು ಸ್ವಇಚ್ಛೆಯಿಂದ ತೆಗೆದುಕೊಂಡಿದ್ದ ವಿರಾಟ್ ಕೊಹ್ಲಿ ನಂತರದ ದಿನಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಲ್ಪಟ್ಟರು.
ಹೀಗೆ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡ ವಿರಾಟ್ ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಭಾರತ ತಂಡವನ್ನು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ನಾಯಕನಾಗಿ ವಿಶ್ರಾಂತಿ ಬಳಿಕ ತಂಡಕ್ಕೆ ವಾಪಸಾಗಿದ್ದ ಕೊಹ್ಲಿ ಮಾರ್ಗದರ್ಶನದಡಿಯಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು. ಅದೇ ಗೆಲುವಿನ ಅಲೆಯಲ್ಲಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧವೂ ಕೂಡ ಜಯವನ್ನು ಸಾಧಿಸಿ ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹರಿಣಗಳ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವ ಯೋಜನೆಯಲ್ಲಿದೆ.

ಕೊಹ್ಲಿಗೆ ಹಿಂದಿನ ರೀತಿ ಹೆಚ್ಚಿನ ಒತ್ತಡವಿಲ್ಲ
ಇನ್ನು ನಾಯಕನಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿರುವ ವಿರಾಟ್ ಕೊಹ್ಲಿ ಹೆಚ್ಚಿನ ರನ್ ಗಳಿಸಿ ತನ್ನ ವಿರುದ್ಧ ಟೀಕೆಗಳನ್ನು ಮಾಡಿದ ಟೀಕಾಕಾರರಿಗೆ ಬ್ಯಾಟ್ ಮುಖಾಂತರ ಉತ್ತರ ನೀಡಲೇ ಬೇಕಾದ ಅನಿವಾರ್ಯತೆಯಿದೆ. ಅದರ ಜತೆಗೆ ಅನೇಕ ತಿಂಗಳುಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿ ಮೂಲಕ ಶತಕ ಬಾರಿಸಿ ತಮ್ಮ 71ನೇ ಶತಕವನ್ನು ಸಿಡಿಸುವ ಅಗತ್ಯವೂ ಕೂಡ ಇದೆ. ಇನ್ನು ಏಕದಿನ ಮತ್ತು ಟಿ ಟ್ವೆಂಟಿ ನಾಯಕತ್ವದ ಹೊರೆಯನ್ನು ತಮ್ಮ ಹೆಗಲಿನಿಂದ ಕೆಳಗಿಳಿಸಿರುವ ವಿರಾಟ್ ಕೊಹ್ಲಿ ಸದ್ಯ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಮುಂದಿನ ಶತಕವನ್ನು ಸಿಡಿಸಲಿದ್ದಾರೆ ಎಂಬ ವಿಶ್ವಾಸ ಹೆಚ್ಚಿದ್ದು ಈ ವಿಶ್ವಾಸಕ್ಕೆ ಇದೀಗ ರಾಹುಲ್ ದ್ರಾವಿಡ್ ಹೆಚ್ಚಿನ ಬಲ ತುಂಬುತ್ತಿದ್ದಾರೆ.

ಕೊಹ್ಲಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಸಲಹೆ
ಸದ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ಈಗಾಗಲೇ ಸೆಂಚುರಿಯನ್ ಕ್ರೀಡಾಂಗಣವನ್ನು ತಲುಪಿರುವ ಟೀಮ್ ಇಂಡಿಯಾ ಆಟಗಾರರು ಡಿಸೆಂಬರ್ 26ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕೆ ತಾಲೀಮು ನಡೆಸುತ್ತಿದ್ದಾರೆ. ಹೀಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಚಿತ್ರಗಳಲ್ಲಿ ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಸಲಹೆಗಳನ್ನು ನೀಡುತ್ತಿರುವ ದೃಶ್ಯವಿದೆ. ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಸಲಹೆಗಳನ್ನು ನೀಡುತ್ತಿರುವ ಚಿತ್ರವನ್ನು ಕಂಡ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಶತಕ ಭಾರಿಸುವುದು ಖಚಿತ ಎನ್ನುತ್ತಿದ್ದಾರೆ.

ಕೊಹ್ಲಿ ಬ್ಯಾಟಿಂಗ್ ನಿಲುವು ಬದಲು!
ಇನ್ನು ಈ ಚಿತ್ರದಲ್ಲಿ ಕೊಹ್ಲಿ ಬ್ಯಾಟ್ ಹಿಡಿದಿರುವ ವೈಖರಿಯನ್ನು ಕಂಡ ಕೆಲ ಅಭಿಮಾನಿಗಳು ಈ ಹಿಂದೆ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿಯುತ್ತಿದ್ದ ಶೈಲಿಗೂ ಈ ಚಿತ್ರದಲ್ಲಿ ಬ್ಯಾಟ್ ಹಿಡಿದಿರುವ ಶೈಲಿಗೂ ಸಾಕಷ್ಟು ವ್ಯತ್ಯಾಸಗಳಿದ್ದು ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಯಲ್ಲಿ ಕೊಂಚ ಬದಲಾವಣೆಯನ್ನು ತರಲು ಹೊರಟಿದ್ದಾರೆ, ಈ ಸರಣಿಯಲ್ಲಿ ಹಳೆ ವಿರಾಟ್ ಕೊಹ್ಲಿಯನ್ನು ನಾವು ಖಂಡಿತಾ ಕಾಣಬಹುದು ಎಂದು ರಾಹುಲ್ ದ್ರಾವಿಡ್ ಮಾರ್ಗದರ್ಶನದ ಬಗ್ಗೆ ವಿಶ್ವಾಸವನ್ನು ಹೊರಹಾಕುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications