ಭಾರತ vs ದ. ಆಫ್ರಿಕಾ: ಸರಣಿ ಉಳಿಸಿಕೊಳ್ಳಬೇಕಾದರೆ ಮೂರು ಬದಲಾವಣೆ ಭಾರತಕ್ಕೆ ಅನಿವಾರ್ಯ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತ ಸೋಲು ಅನುಭವಿಸಿದೆ. ಹೀಗಾಗಿ ಸರಣಿ ಸೋಲಿನ ಭೀತಿ ಎದುರಿಸುತ್ತಿದೆ ಭಾರತ. ಉಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಕಳೆದುಕೊಂಡರೂ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿಯೇ ಮತ್ತೊಮ್ಮೆ ಟಿ20 ಸರಣಿ ಕಳೆದುಕೊಂಡ ಮುಖಭಂಗಕ್ಕೆ ಭಾರತ ಒಳಗಾಗಲಿದೆ.
ಹೀಗಾಗಿ ಭಾರತ ಕ್ರಿಕೆಟ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿಯೂ ಕೆಲ ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಅದರಲ್ಲೂ ಕಳೆದ ಎರಡು ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಟೀಮ್ ಇಂಡಿಯಾದಲ್ಲಿ ಮೂರು ಬದಲಾವಣೆ ಮಾಡುವ ಅಗತ್ಯವಿದೆ. ಹಾಗಾದಲ್ಲಿ ಮಾತ್ರವೇ ಭಾರತ ತಂಡ ಸರಣಿಯನ್ನು ಉಳಿಸಿಕೊಳ್ಳುವ ಅವಕಾಶವಿರುತ್ತದೆ.
ಹಾಗಾದರೆ ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಮಾಡಬೇಕಿರುವ ಬದಲಾವಣೆ ಯಾವುದು? ಮುಂದೆ ಓದಿ..

ಋತುರಾಜ್‌ಗೆ ಅವಕಾಶ ಸಾಕು
ಐಪಿಎಲ್‌ನಲ್ಲಿ ಮಿಂಚುತ್ತಿರುವ ಋತಿರಾಜ್ ಗಾಯಕ್ವಾಡ್ ಟೀಮ್ ಇಂಡಿಯಾ ಪರವಾಗಿ ಸಿಕ್ಕ ಅವಕಾಶವನ್ನು ಒಮ್ಮೆಯೂ ಬಳಸಿಕೊಳ್ಳಲು ವಿಫಲವಾಗಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ ಗಾಯಕ್ವಾಡ್ ಈವರೆಗೂ ಭರವಸೆಯ ಪ್ರದರ್ಶನ ನೀಡಿಲ್ಲ. ಈವರೆಗೆ 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿರುವ ಋತುರಾಜ್ ಗಳಿಸಿದ್ದು 63 ರನ್ ಮಾತ್ರ. ಇದಕ್ಕಾಗಿ ಅವರು 55 ಎಸೆತ ಎದುರಿಸಿದ್ದಾರೆ. ಅವರ ಸರಾಸರಿ 12.60 ಇದ್ದರೆ ಸ್ಟ್ರೈಕ್‌ರೇಟ್ 114.55 ಮಾತ್ರವೇ ಆಗಿದೆ. ಕೇವಲ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಮಾತ್ರ ಅವರ ಬ್ಯಾಟ್‌ನಿಂದ ಬಂದಿದೆ. ಈ ಸರಣಿಯಲ್ಲಿಯೂ ಎರಡು ಪಂದ್ಯದಲ್ಲಿಯೂ ಋತುರಾಜ್ ಗಾಯಕ್ವಾಡ್ ವಿಫಲವಾಗಿದ್ದು ಇತರ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ.

ಆವೇಶ್ ಖಾನ್ ಬದಲಿಗೆ ಅರ್ಷ್‌ದೀಪ್ ಸಿಂಗ್
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತೀಯ ಬೌಲಿಂಗ್ ವಿಭಾಗ ಸಾಕಷ್ಟು ಪರದಾಟವನ್ನು ಅನುಭವಿಸುತ್ತಿದೆ. ತಂಡದ ಸಮತೋಲನದ ದೃಷ್ಟಿಯಿಂದ ಆವೇಶ್ ಖಾನ್ ಬದಲಿಗೆ ಅರ್ಷ್‌ದೀಪ್ ಸಿಂಗ್‌ಗೆ ಅವಕಾಶ ನಿಡುವುದು ಉತ್ತಮ. ಭಾರತ ತಂಡದಲ್ಲಿ ಪವರ್‌ಪ್ಲೇನಲ್ಲಿ ಬೌಲಿಂಗ್ ನಡೆಸಲು ಅಗತ್ಯ ಬೌಲರ್‌ಗಳಿದ್ದು ಡೆತ್ ಓವರ್‌ನಲ್ಲಿ ಪರಿಣಾಮಕಾರಿ ಬೌಲರ್‌ನ ಅಗತ್ಯವಿದೆ. ಐಪಿಎಲ್‌ನಲ್ಲಿ ಡೆತ್ ಓವರ್‌ನಲ್ಲಿ ತೀಕ್ಷ್ಣ ಯಾರ್ಕರ್‌ಗಳ ಮೂಲಕ ಮಿಂಚಿರುವ ಅರ್ಷ್‌ದೀಪ್ ಸಿಂಗ್ ರನ್‌ನಿಯಂತ್ರಣದಲ್ಲಿಯೂ ಗಮನಸೆಳೆದಿದ್ದಾರೆ. ಹೀಗಾಗಿ ಆವೇಶ್ ಖಾನ್ ಬದಲಿಗೆ ಅರ್ಷ್‌ದೀಪ್‌ಗೆ ಅವಕಾಶ ನೀಡುವ ಅಗತ್ಯವಿದೆ.

ಅಕ್ಷರ್ ಪಟೇಲ್ ಬದಲಿಗೆ ರವಿ ಬಿಷ್ಣೋಯ್
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಯಲ್ಲಿ ಭಾರತ ತಂಡದ ಪರವಾಗಿ ಪರಿಣಾಮಕಾರಿಯಾಗಲು ವಿಫಲವಾಗಿರುವ ಅಕ್ಷರ್ ಪಟೇಲ್ ಮುಂದಿನ ಪಂದ್ಯದ ಆಡುವ ಬಳಗದಿಂದ ಹೊರಗೆ ಬೀಳುವ ಅಗತ್ಯವಿದೆ. ವಿಕೆಟ್ ಹಾಗೂ ರನ್ ನಿಯಂತ್ರಣ ಎರಡರಲ್ಲಿಯೂ ಅಕ್ಷರ್ ವಿಫಲವಾಗಿದ್ದಾರೆ. ಹೀಗಾಗಿ ಯುವ ಆಟಗಾರ ರವಿ ಬಿಷ್ಣೋಯ್‌ಗೆ ಅವಕಾಶ ನೀಡುವ ಅಗತ್ಯವಿದೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭರವಸೆ ನೀಡಿರುವ ಬಿಷ್ಣೋಯ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಮಿಂಚುವ ಆತ್ಮವಿಶ್ವಾಸವನ್ನು ಹೊಂದಿರುವ ಬೌಲರ್. ಮುಂಬರುವ ವಿಶ್ವಕಪ್ ದೃಷ್ಟಿಯಿಂದಲೂ ಬಿಷ್ಣೋಯ್‌ಗೆ ಅವಕಾಶ ನೀಡುವ ಅನಿವಾರ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications