
ಪೂಜಾರ ಬೆನ್ನುತಟ್ಟಿ ಸುಮ್ಮನೆ ಹೊರಟ ರಾಹುಲ್ ದ್ರಾವಿಡ್
ಹೀಗೆ ಗೋಲ್ಡನ್ ಡಕ್ ಔಟ್ ಆಗುವುದರ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದ ಚೇತೇಶ್ವರ್ ಪೂಜಾರ ರಾಹುಲ್ ದ್ರಾವಿಡ್ ಬಳಿ ಬಂದಾಗ ದ್ರಾವಿಡ್ ಆತನಿಗೆ ಹೆಚ್ಚೇನು ಹೇಳದೇ ಬೆನ್ನು ತಟ್ಟಿ ಹೊರಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಚೇತೇಶ್ವರ್ ಪೂಜಾರ ಜತೆ ದ್ರಾವಿಡ್ ನಡೆದುಕೊಂಡ ರೀತಿಗೆ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿವೆ.

ದ್ರಾವಿಡ್ ನಡೆದುಕೊಂಡ ರೀತಿ ಕುರಿತು ಪ್ರೇಕ್ಷಕರು ಹೇಳುತ್ತಿರುವುದಿಷ್ಟು
ಇನ್ನು ಚೇತೇಶ್ವರ್ ಪೂಜಾರ ಜತೆ ರಾಹುಲ್ ದ್ರಾವಿಡ್ ನಡೆದುಕೊಂಡ ರೀತಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕಳಪೆ ಪ್ರದರ್ಶನ ನೀಡಿದ ಆಟಗಾರನೋರ್ವನ ವಿರುದ್ಧ ಕೋಪ ಮಾಡಿಕೊಳ್ಳದೇ ರಾಹುಲ್ ದ್ರಾವಿಡ್ ಬೆನ್ನು ತಟ್ಟಿದ್ದನ್ನು ಕೆಲ ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಆದರೆ ಇನ್ನೂ ಕೆಲ ನೆಟ್ಟಿಗರು ರಾಹುಲ್ ದ್ರಾವಿಡ್ ಏನೂ ಮಾತನಾಡದೇ ಬೆನ್ನು ತಟ್ಟುವುದರ ಮೂಲಕ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಪರೋಕ್ಷವಾಗಿ ಪೂಜಾರ ಕಾಲೆಳೆದಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗೂ ದ್ರಾವಿಡ್ ಈ ರೀತಿ ನಡೆದುಕೊಂಡ ನಂತರ ಚೇತೇಶ್ವರ್ ಪೂಜಾರ ಹುಸಿ ನಗೆ ಬೀರಿದ್ದಾರೆ ಎಂದು ಕೂಡ ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿಯೂ ನೆಲಕಚ್ಚಿದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಅನುಮಾನ
ಇನ್ನು ಚೇತೇಶ್ವರ್ ಪೂಜಾರಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಅವಕಾಶ ಸಿಕ್ಕಿರುವುದು ದೊಡ್ಡ ವಿಷಯ. ಏಕೆಂದರೆ ತಂಡದಲ್ಲಿ ಈಗಾಗಲೇ ಉತ್ತಮ ಫಾರ್ಮ್ ಹೊಂದಿರುವ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಇದ್ದಾರೆ. ಆಗಿದ್ದರೂ ಸಹ ಚೇತೇಶ್ವರ್ ಪೂಜಾರ ಅವಕಾಶವನ್ನು ಪಡೆದುಕೊಂಡಿದ್ದು ಇದೀಗ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಮಂಕಾಗಿದ್ದಾರೆ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಇದೇ ರೀತಿ ಪ್ರದರ್ಶನವನ್ನೇನಾದರೂ ಚೇತೇಶ್ವರ್ ಪೂಜಾರಾ ನೀಡಿದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚಿವೆ.


Click it and Unblock the Notifications












