T20 World Cup: ಭಾರತ Vs ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಗಮನ ಹರಿಸಬೇಕಾದ ಮೂರು ಅಂಶಗಳು

ಭಾರತವು ಭಾನುವಾರ ಪರ್ತ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022 ರ ನಿರ್ಣಾಯಕ ಗುಂಪು 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾರತ ಇದುವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಆರಂಭಿಕ ಪಂದ್ಯವನ್ನು ಮಳೆಯಿಂದ ಕಳೆದುಕೊಂಡರು, ಆದರೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರು.
ಮಳೆಯಿಂದ ಪಂದ್ಯ ರದ್ದಾಗಿದ್ದರೆ, ಭಾನುವಾರ ಗೆಲ್ಲುವ ತಂಡ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸುತ್ತದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಹಂಬಲದಲ್ಲಿವೆ. ಭಾರತವು ಇತ್ತೀಚೆಗೆ ದಕ್ಷಿಣ ಆಫ್ರಿಕಾವನ್ನು ಸ್ವದೇಶಿ ಟಿ 20 ಅಂತರಾಷ್ಟ್ರೀಯ ಸರಣಿಯಲ್ಲಿ ಸೋಲಿಸಿತು, ಆದರೆ ಪರ್ತ್‌ನಲ್ಲಿನ ಪರಿಸ್ಥಿತಿಗಳು ಭಾರತಕ್ಕಿಂತ ತುಂಬಾ ವಿಭಿನ್ನವಾಗಿರುತ್ತದೆ.
ಎರಡೂ ತಂಡಗಳು ಸಮಬಲದಿಂದ ಕೂಡಿವೆ, ಅದರಲ್ಲೂ ಆಸ್ಟ್ರೇಲಿಯಾ ನೆಲದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ವೇಗದ ಬೌಲಿಂಗ್ ಸಾಕಷ್ಟು ಬಲಿಷ್ಠವಾಗಿದೆ. ಭಾರತದ ವಿರುದ್ಧದ ಸರಣಿಯಲ್ಲಿ ಭರ್ಜರಿ ಶತಕ ಗಳಿಸಿದ್ದ ರಿಲೀ ರೊಸೊವ್ ಬಾಂಗ್ಲಾ ವಿರುದ್ಧ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ. ಭಾನುವಾರದ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ರೋಚಕ ಹಣಾಹಣಿ ನಡೆಸುವ ನಿರೀಕ್ಷೆ ಇದೆ. ಈ ಪಂದ್ಯದಲ್ಲಿ ಗಮನಿಸಬೇಕಾಗ ಮೂರು ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

ಎರಡೂ ತಂಡಗಳಿಂದ ಹೆಚ್ಚುವರಿ ವೇಗದ ಬೌಲರ್ ಬಳಕೆ
ಪರ್ತ್ ಸ್ಟೇಡಿಯಂನಲ್ಲಿನ ಪಿಚ್ ಬೌಲರ್‌ಗಳಿಗೆ ಉತ್ತಮ ವೇಗ ಮತ್ತು ಬೌನ್ಸ್ ನೀಡುತ್ತದೆ ಮತ್ತು ಹೆಚ್ಚುವರಿ ವೇಗಿಯನ್ನು ಕಣಕ್ಕಿಳಿಸಲು ಉತ್ತೇಜನ ನೀಡುತ್ತದೆ.
ದಕ್ಷಿಣ ಆಫ್ರಿಕಾವು ಬಾಂಗ್ಲಾದೇಶದ ವಿರುದ್ಧ ಸಿಡ್ನಿಯಲ್ಲಿ ಚಪ್ಪಟೆಯಾದ ಮತ್ತು ನಿಧಾನಗತಿಯ ಪಿಚ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಿತು. ಪರ್ತ್‌ನಲ್ಲಿನ ಪರಿಸ್ಥಿತಿಗಳು ಮತ್ತು ಸ್ಪಿನ್ ವಿರುದ್ಧ ಉತ್ತಮವಾಗಿ ಆಡುವ ಭಾರತೀಯರ ಸಾಮರ್ಥ್ಯವನ್ನು ಪರಿಗಣಿಸಿ, ಅವರು ತಬ್ರೈಜ್ ಶಮ್ಸಿ ಬದಲಿಗೆ ಲುಂಗಿ ಎನ್‌ಗಿಡಿಗೆ ಅವಕಾಶ ನೀಡಬಹುದು.
ಅದೇ ರೀತಿ, ಅಕ್ಸರ್ ಪಟೇಲ್ ಬದಲಿಗೆ ಹರ್ಷಲ್ ಪಟೇಲ್ ಅವರನ್ನು ಆಡಿಸುವ ಅವಕಾಶ ಭಾರತಕ್ಕಿದೆ. ಪಾಕಿಸ್ತಾನದ ವಿರುದ್ಧ ಕಳಪೆ ಪ್ರದರ್ಶನದ ನಂತರ ನೆದರ್ಲೆಂಡ್ಸ್ ವಿರುದ್ಧ ಅಕ್ಷರ್ ಉತ್ತಮ ಬೌಲಿಂಗ್ ಮಾಡಿದರು. ದಕ್ಷಿಣ ಆಫ್ರಿಕಾದ ತಂಡವು ಎಡಗೈ ಬ್ಯಾಟರ್‌ಗಳಿಂದ ಕೂಡಿದೆ, ಅವರು ಅಕ್ಷರ್‌ನ ಎಡಗೈ ಸಾಂಪ್ರದಾಯಿಕ ಸ್ಪಿನ್ ವಿರುದ್ಧ ಆಕ್ರಮಣಕಾರಿಯಾಗಿ ಆಡುವ ಅಪಾಯವಿದೆ.
PKL 2022: ಜೈಪುರ ಪಿಂಕ್ ಪ್ಯಾಂಥರ್ಸ್ ಬೇಟೆಯಾಡಿದ ತಮಿಳ್ ತಲೈವಾಸ್

ಬೌಲಿಂಗ್ ಲೆಂಗ್ತ್ ಬದಲಾವಣೆಯಾಗಬೇಕು
ಭಾರತದ ಹೊಸ ಬಾಲ್ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಮೊದಲ ಎರಡು ಪಂದ್ಯಗಳಲ್ಲಿ ಚೆಂಡನ್ನು ಉತ್ತಮ ರೀತಿಯಲ್ಲಿ ಸ್ವಿಂಗ್ ಮಾಡಿದರು. ಸ್ವಿಂಗ್ ಅನ್ನು ಸೃಷ್ಟಿಸಲು ಅವರು ಸಾಮಾನ್ಯವಾಗಿ ಫುಲ್ ಲೆಂಗ್ತ್ ಬೌಲ್ ಮಾಡಿದರು, ಆದರೆ ಪರ್ತ್‌ನಲ್ಲಿ ತಮ್ಮ ತಂತ್ರವನ್ನು ಬದಲಾಯಿಸಬೇಕಾಗಬಹುದು.
ಹೆಚ್ಚುವರಿ ಬೌನ್ಸ್ ಅನ್ನು ಬಳಸಿಕೊಳ್ಳಲು ಪರ್ತ್‌ನಲ್ಲಿ ಉತ್ತಮ ಲೆಂಗ್ತ್‌ಗಿಂತ ಕಡಿಮೆ ಪಿಚ್ ಮಾಡಲು ವೇಗಿಗಳಿಗೆ ಉತ್ತಮ ಸಲಹೆ ನೀಡಲಾಗುತ್ತದೆ. ಪಾಕಿಸ್ತಾನದ ವಿರುದ್ಧದ ಗೆಲುವಿನಲ್ಲಿ ಜಿಂಬಾಬ್ವೆ ವೇಗಿಗಳು ಅದನ್ನು ಚೆನ್ನಾಗಿ ಪ್ರದರ್ಶಿಸಿದರು ಮತ್ತು ಭಾರತೀಯ ಬೌಲರ್‌ಗಳು ಅದೇ ಮಾದರಿಯನ್ನು ಅನುಸರಿಬೇಕು.
ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನದ ವಿರುದ್ಧ ವಿಕೆಟ್ ಪಡೆಯಲು ಅರ್ಷದೀಪ್ ಕೆಲವು ಉತ್ತಮ ಬೌನ್ಸರ್ ಬೌಲ್ ಮಾಡಿದರು ಮತ್ತು ಪರ್ತ್‌ನಲ್ಲಿ ಅದೇ ತಂತ್ರ ಅನುಸರಿಸಬಹುದು. ಆದಾಗ್ಯೂ, ಫುಲ್ ಲೆಂಗ್ತ್ ಬೌಲಿಂಗ್ ಮಾಡಲು ಆದ್ಯತೆ ನೀಡುವ ಭುವನೇಶ್ವರ್ ಕುಮಾರ್, ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಯೋಜನೆಯನ್ನು ಮರುಪರಿಶೀಲಿಸಬೇಕಾಗಬಹುದು. ಇಲ್ಲಿ ಹಾರ್ದಿಕ್ ಪಾಂಡ್ಯ ಪರಿಣಾಮಕಾರಿಯಾಗುವ ಅವಕಾಶವಿದೆ.
ಬಾಂಗ್ಲಾದೇಶ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ ಅನ್ರಿಚ್ ನೋಕಿಯಾ ಮತ್ತೊಮ್ಮೆ ದಕ್ಷಿಣ ಆಫ್ರಿಕಾಗೆ ಪ್ರಮುಖ ಬೌಲರ್ ಆಗಲಿದ್ದಾರೆ. ವೇಯ್ನ್ ಪಾರ್ನೆಲ್ ಮತ್ತು ಕಗಿಸೊ ರಬಾಡ ಇಬ್ಬರೂ ಪವರ್ ಪ್ಲೇ ಬೌಲರ್‌ಗಳಾಗಿದ್ದಾರೆ. ಲುಂಗಿ ಎನ್‌ಗಿಡಿ ಸೇರ್ಪಡೆಯು ಈ ನಿಟ್ಟಿನಲ್ಲಿ ಆಫ್ರಿಕನ್ ವೇಗದ ದಾಳಿಯನ್ನು ಬಲಪಡಿಸುತ್ತದೆ.

ಪವರ್ ಹಿಟ್ಟರ್ ಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ
ಇತರ ಆಸ್ಟ್ರೇಲಿಯನ್ ಮೈದಾನಗಳಂತೆ, ಆಪ್ಟಸ್ ಕ್ರೀಡಾಂಗಣವು ಸಾಕಷ್ಟು ದೊಡ್ಡದಾಗಿದೆ ಮತ್ತು ಬ್ಯಾಟರ್‌ಗಳಿಗೆ ಸಿಕ್ಸರ್ ಬಾರಿಸುವುದು ಸುಲಭವಲ್ಲ. ಭಾರತೀಯ ತಂಡದಲ್ಲಿ ಹೆಚ್ಚು ತಾಂತ್ರಿಕವಾಗಿ ಸರಿಯಾದ ಆಟಗಾರರನ್ನು ಹೊಂದಿದ್ದರೂ, ದಕ್ಷಿಣ ಆಫ್ರಿಕನ್ನರು ಹೆಚ್ಚಿನ ಸಂಖ್ಯೆಯ ಬಿಗ್-ಹಿಟ್ಟರ್‌ಗಳನ್ನು ಹೊಂದಿದ್ದಾರೆ.
ಎರಡು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ರಿಲೀ ರೊಸ್ಸೌವ್, ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್, ಎಲ್ಲಾ ಎಡಗೈ ಆಟಗಾರರು - ಆನ್‌ಸೈಡ್ ಮೂಲಕ ಬೌಂಡರಿ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಫಾರ್ಮ್ ಭಾರತಕ್ಕೆ ದೊಡ್ಡ ಶಕ್ತಿಯಾಗಿದೆ. ಬಿಗ್ ಹಿಟ್ ಹೊಡೆಯದಿದ್ದರು, ತಾಂತ್ರಿಕವಾಗಿ ಬೌಂಡರಿ ಗಳಿಸುವ ಸಾಮರ್ಥ್ಯ ಇವರಿಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರ ವಹಿಸಬಹುದು. ಅವರು ಸಾಕಷ್ಟು ವೈವಿಧ್ಯತೆಯನ್ನು ಹೊಂದಿದ್ದಾರೆ. ಆಫ್-ಸ್ಪಿನ್ನರ್ ಆಗಿ, ಅವರು ಎಡಗೈ ಬ್ಯಾಟರ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಹರ್ಷಲ್ ಪಟೇಲ್ ಆಡಲು ಆಯ್ಕೆಯಾದರೆ, ನಿಧಾನಗತಿಯ ಬೌಲಿಂಗ್ ಮಾಡುವ ಸಾಮರ್ಥ್ಯದೊಂದಿಗೆ ಅವರು ಪರಿಣಾಮಕಾರಿಯಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications