For Quick Alerts
ALLOW NOTIFICATIONS  
For Daily Alerts
 

IND vs SA T20: ಇಂದು ಡರ್ಬನ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ನಡುವೆ ಫಸ್ಟ್‌ ಫೈಟ್‌: ಪಂದ್ಯಕ್ಕೆ ಮಳೆ ಕಾಟ

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಸರಣಿ ಆಡಲಿದೆ. ಉಭಯ ದೇಶಗಳ ನಡುವಣ ಮೊದಲ ಟಿ20 ಪಂದ್ಯ ಇಂದು ನಡೆಯಲಿದೆ. ಈ ಪಂದ್ಯಕ್ಕೆ ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಸಜ್ಜಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8:30 ಕ್ಕೆ ಆರಂಭವಾಗಲಿದೆ. ಚುಟುಕು ಕ್ರಿಕೆಟ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಲು ಸೂರ್ಯಕುಮಾರ್ ಯಾದವ್ ಪಡೆ ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌ ಹಾಗೂ ಹವಾಮಾನ ಕುರಿತಾದ ವರದಿ ಇಲ್ಲಿದೆ.

ಶ್ರೀಲಂಕಾ ಪ್ರವಾಸದಲ್ಲಿ ಸೂರ್ಯಕುಮಾರ್ ಯಾದವ್ ಮುಂದಾಳತ್ವದಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಸರಣಿ ವಶಕ್ಕೆ ಪಡೆದಿತ್ತು. ಬಳಿಕ ಭಾರತದಲ್ಲಿ ನಡೆದಿದ್ದ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈಗ ಯುವ ಪಡೆ ಮತ್ತೊಂದು ಸವಾಲಿಗೆ ಸಜ್ಜಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.

India vs South Africa T20 Series 2024 Match 1 Begins Today in Durban Amid Rain Concerns

ಹೇಗಿದೆ ವಾತಾವರಣ?

ಹವಾಮಾನ ವರದಿಗಳ ಪ್ರಕಾರ ಡರ್ಬನ್‌ನಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರುವ ಸಂಭವವಿದೆ. ಪಂದ್ಯ ಆರಂಭಕ್ಕೂ ಮುನ್ನ ಕೆಲವೆಡೆ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ. ಈ ವಾತಾವರಣ ಗ್ರೌಂಡ್‌ ಪಿಚ್‌ ಮೇಲೂ ಪರಿಣಾಮ ಬೀರಲಿದೆ. ದಿನವೀಡಿ ಇಲ್ಲಿನ ವಾತಾವರಣ 20 ರಿಂದ 24 ಡಿಗ್ರಿ ಸೆಲ್ಸಿಯನ್‌ ನಡುವೆ ಇರುತ್ತದೆ. ಹೀಗಾಗಿ ಇದು ಸಹ ಆಟಗಾರರಿಗೆ ಸವಾಲು ಒಡ್ಡಲಿದೆ.

ಈ ಪ್ರದೇಶದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ವರದಿ ಮಾಡಿದೆ. ಸಾಮಾನ್ಯವಾಗಿ ಇಲ್ಲಿನ ಗಾಳಿಯ ವೇಗವು 13 ಕಿಲೋ ಮೀಟರ್ ಆಗಿದ್ದು, ಕೆಲವೊಮ್ಮೆ 41 ಕಿಲೋ ಮೀಟರ್ ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಈ ವಾತಾವರಣವನ್ನು ನೋಡಿದರೆ, ಶೇಕಡಾ 40 ರಷ್ಟು ಮಳೆಯಾಗುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ. ಅಲ್ಲದೆ ಗುಡುಗು ಮಿಂಚು ಸಹ ಸಾಧ್ಯತೆ ಹೆಚ್ಚಿದ್ದು, ಸಂಜೆಯ ವೇಳೆಗೆ ಮಳೆ ಆಗುಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮಳೆ ಅಡ್ಡಿ ಪಡಿಸಿದರೂ ಪಂದ್ಯ ನಡೆಯುವ ಸಾಧ್ಯತೆ ಇದೆ.

India vs South Africa T20 Series 2024 Match 1 Begins Today in Durban Amid Rain Concerns

ಭಾರತ ಕ್ರಿಕೆಟ್ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್, ವಿಜಯಕುಮಾರ್ ವಿಶಾಕ್, ಅವೇಶ್ ಖಾನ್, ಯಶ್ ದಯಾಳ್.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್ (ವಿಕೆಟ್‌ ಕೀಪರ್), ಹೆನ್ರಿಚ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೆರಾಲ್ಡ್ ಕೋಟ್ಜಿ, ಡೊನೊವನ್ ಫೆರೆರಾ, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಮಿಹಾಲಿ ಎಂಪಾಂಗ್ವಾನಾ, ಮಿಹಾಲಿ ಎಂಪಾಂಗ್ವಾನಾ . ಪೀಟರ್, ಆಂಡಿಲ್ ಸಿಮೆಲೇನ್, ಲುಥೋ ಸಿಪಾಮ್ಲಾ, ಟ್ರಿಸ್ಟಾನ್ ಸ್ಟಬ್ಸ್.

Story first published: Friday, November 8, 2024, 10:09 [IST]
Other articles published on Nov 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+