Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದ. ಆಫ್ರಿಕಾ: ಸರಣಿಯ ನಿರ್ಣಾಯಕ ಪಂದ್ಯವಾಡಲು ಬೆಂಗಳೂರಿಗೆ ಬಂದಿಳಿದ ಪಂತ್ ಪಡೆ

India vs South Africa: Team India squad reach Bengaluru for Final t20I against South Africa

ಭಾರತ ಹಾಗೂ ದಕ್ಷೀಣ ಆಫ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ಭಾರತೀಯ ತಂಡ ಬೆಂಗಳೂರಿಗೆ ಬಂದಿಳಿದಿದೆ. ರಾಜ್‌ಕೋಟ್‌ನಲ್ಲಿ ನಡೆದ ನಾಲ್ಕನೇ ಪಂದ್ಯದ ಬಳಿಕ ಐದನೇ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾರ್ದಿಕ್ ಪಾಂಡ್ಯ ಸೇರಿದಂತೆ ಹಾಗೂ ಇತರ ಆಟಗಾರರ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮಧ್ಯಾಹ್ನದ ಬಳಿಕ ಕೆಲ ಆಟಗಾರರು ನೆಟ್ ಅಭ್ಯಾಸದಲ್ಲಿ ಕೂಡ ಭಾಗಿಯಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುದೀರ್ಘ ಕಾಲದ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಹವಾಮಾನ ಯಾವ ರೀತಿಯಲ್ಲಿ ಸಾಥ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಬೆಂಗಳುರಿನಲ್ಲಿ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿರುವ ಕಾರಣ ಪಂದ್ಯದ ದಿನವೂ ಮಳೆಯಾಗಲಿದೆಯಾ ಎಂಬುದು ಈಗ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸತತವಾಗಿ ಸೋಲು ಅನುಭವಿಸಿದ್ದ ಕಾರಣ 2-0 ಅಂತರದಿಂದ ಹಿನ್ನಡೆಯಲ್ಲಿದ್ದು ಬಳಿಕ ಸರಣಿಯಲ್ಲಿ ತಿರುಗಿ ಬಿದ್ದಿದೆ. ಸರಣಿಯ ಮೂರನೇ ಹಾಗೂ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಇದರ ಪರಿಣಾಮವಾಗಿ ಸರಣಿ ಈಗ 2-2 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ರೋಚಕತೆಯನ್ನು ಸೃಷ್ಟಿಸಿಕೊಂಡಿದೆ.

ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!
ಸ್ಕ್ವಾಡ್‌ಗಳು ಹೀಗಿದೆ
ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯಿ ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ರೀಜಾ ಹೆಂಡ್ರಿಕ್ಸ್, ವೇಯ್ನೆ ಪರ್ಸೆಲ್‌ಬಾ , ಟ್ರಿಸ್ಟಾನ್ ಸ್ಟಬ್ಸ್

Story first published: Saturday, June 18, 2022, 19:32 [IST]
Other articles published on Jun 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+