India vs Sri Lanka: ವೇಳಾಪಟ್ಟಿ, ತಂಡಗಳು, ನೇರ ಪ್ರಸಾರ, ಸಂಪೂರ್ಣ ಮಾಹಿತಿ

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಬಾರತದ ವಿರುದ್ಧ ಆತಿಥೇಯ ಶ್ರೀಲಂಕಾ ತಂಡ ಮೂರು ಏಕದಿನ ಪಂದ್ಯಗಳು ಮತ್ತು ಟಿ20ಐ ಪಂದ್ಯಗಳನ್ನಾಡಲಿದೆ. ಏಕದಿನ ಸರಣಿಯೊಂದಿಗೆ ಜುಲೈ 13ರಿಂದ ಪ್ರವಾಸ ಪಂದ್ಯಗಳು ಶುರುವಾಗಲಿವೆ. ಕೋವಿಡ್-19 ಕಾರಣ ಸರಣಿಯ ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿರುವ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ಜುಲೈ 25ಕ್ಕೆ ಪ್ರವಾಸ ಸರಣಿ ಕೊನೆಗೊಳ್ಳಲಿದೆ.
2021ರಲ್ಲಿ ಶ್ರೀಲಂಕಾ ತಂಡ ಟಿ20ಐನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಂದು ಪಂದ್ಯವನ್ನಷ್ಟೇ ಗೆದ್ದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್-ಶ್ರೀಲಂಕಾ ಏಕದಿನ ಸರಣಿಯಲ್ಲೂ ಲಂಕಾ 3-0ಯ ಹೀನಾಯ ಸೋಲನುಭವಿಸಿದೆ. ಹೀಗಾಗಿ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾರತ ಗೆಲ್ಲುವ ನಿರೀಕ್ಷೆಯಿದೆ.

ನೇರಪ್ರಸಾರ ಮಾಹಿತಿ
ಭಾರತ ತಂಡವನ್ನು ಶಿಖರ್ ಧವನ್ ನಾಯಕರಾಗಿ, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ಮುನ್ನಡೆಸಲಿದ್ದಾರೆ. ತಂಡದ ಜೊತೆಗೆ ಮುಖ್ಯ ಕೋಚ್ ಆಗಿ 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಇರಲಿದ್ದಾರೆ. ತಂಡಗಳಲ್ಲಿ ಭಾರತ ತಂಡ ಪ್ರಕಟಗೊಂಡಿದ್ದು, ಶ್ರೀಲಂಕಾ ತಂಡ ಶೀಘ್ರ ಪ್ರಕಟಗೊಳ್ಳಲಿದೆ.
* ನೇರಪ್ರಸಾರ ಮಾಹಿತಿ: ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಸೋನಿ Liv ಆ್ಯಪ್, ಶ್ರೀಲಂಕಾದಲ್ಲಿ ಚಾನೆಲ್ ಐ, ದಕ್ಷಿಣ ಆಫ್ರಿಕಾದಲ್ಲಿ ಸೂಪರ್ ಸ್ಪೋರ್ಟ್, ಯುಎಸ್‌ಎಯಲ್ಲಿ ವಿಲ್ಲೋ ಟಿವಿ.

ಏಕದಿನ ವೇಳಾಪಟ್ಟಿ
* ಮೊದಲ ಏಕದಿನ: ಜುಲೈ 13, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)
* ಎರಡನೇ ಏಕದಿನ: ಜುಲೈ 16, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)
* ಮೂರನೇ ಏಕದಿನ: ಜುಲೈ 18, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (2:30 PM IST)

ಟಿ20ಐ ವೇಳಾಪಟ್ಟಿ
* ಮೊದಲ ಟಿ20ಐ: ಜುಲೈ 21, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)
* ಎರಡನೇ ಟಿ20ಐ: ಜುಲೈ 23, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)
* ಮೂರನೇ ಟಿ20ಐ: ಜುಲೈ 25, ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ (7 PM IST)

ಭಾರತ ತಂಡ
ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ವಿಸಿ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ. ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಾಹರ್, ಚೇತನ್ ಸಕರಿಯಾ, ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications