ಭಾರತ vs ಶ್ರೀಲಂಕಾ: 2ನೇ ಟಿ20 ಪಂದ್ಯ, Live ಸ್ಕೋರ್, ಆಡುವ ಬಳಗ

ಕೊಲಂಬೋ, ಜುಲೈ 28: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊರೊನಾವೈರಸ್‌ನಿಂದ ತತ್ತರಿಸಿರುವ ಟೀಮ್ ಇಂಡಿಯಾ ನಿರೀಕ್ಷೆಯಂತೆಯೇ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.
ಟೀಮ್ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯ ಕೊರೊನಾವೈರಸ್‌ಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಸುಮಾರು 8 ಕ್ರಿಕೆಟಿಗರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ಭಾರತ ತಂಡದ ಆಡುವ ಬಳಗದಲ್ಲಿ ಅನಿವಾರ್ಯವಾಗಿ ಸಾಕಷ್ಟು ಬದಲಾವಣೆಯನ್ನು ಮಾಡಬೇಕಾಯಿತು.
ಕನ್ನಡಿಗ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ ಋತುರಾಜ್ ಗಾಯಕ್ವಾಡ್ ನಿತೀಶ್ ರಾಣಾ, ಚೇತನ್ ಸಕಾರಿಯಾ ಕೂಡ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಇನ್ನು ಶ್ರೀಲಂಕಾ ತಂಡದಲ್ಲಿ ಕೂಡ ಎರಡು ಬದಲಾವಣೆ ಮಾಡಲಾಗಿದೆ.
Live ಸ್ಕೋರ್ ಪಟ್ಟಿ ಹೀಗಿದೆ:
ಭಾರತ ಆಡುವ ಬಳಗ:
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ
ಶ್ರೀಲಂಕಾ ಆಡುವ ಬಳಗ:
ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಸದೀರಾ ಸಮರವಿಕ್ರಮ, ದಸುನ್ ಶನಕ (ನಾಯಕ), ರಮೇಶ್ ಮೆಂಡಿಸ್, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದಾನ, ಅಕಿಲಾ ದನಂಜಯ, ದುಷ್ಮಂತಾ ಚಮೀರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications