ಭಾರತ vs ಶ್ರೀಲಂಕಾ: ಕೊನೇ ಕ್ಷಣದಲ್ಲಿ ಎಡವಿದ ಭಾರತ: ತಿಣುಕಾಡಿ ಗೆದ್ದ ಶ್ರೀಲಂಕಾ

ಕೊಲಂಬೋ, ಜುಲೈ 28: ರೋಚಕವಾಗಿ ಅಂತ್ಯಕಂಡ ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಲಂಕಾ ಪಡೆ ಗೆಲುವು ಸಾಧಿಸಿದೆ. ಭಾರತ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಸೋಲಿನ ದವಡೆಗೆ ಸಿಲುಕಿ ಅಂತಿಮ ಘಟ್ಟದಲ್ಲಿ ಪಾರಾಗಿದೆ. ಭಾರತದ ಯುವ ಬೌಲಿಂಗ್ ಪಡೆ ಲಂಕಾ ವಿರುದ್ಧ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೀಲಂಕಾಗೆ ಸಾಧಾರಣ ಗುರಿಯನ್ನು ನೀಡಿತ್ತು. ಏಳು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ ಇಂದು ಕಣಕ್ಕಿಳಿದಿದ್ದ ಭಾರತ ಶ್ರೀಲಂಕಾ ತಂಡಕ್ಕೆ 133 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಟೀಮ್ ಇಂಡಿಯಾ ಪರವಾಗಿ ಶಿಖರ್ ಧವನ್ 40 ರನ್‌ಗಳಿಸಿದ್ದರೆ ಪಡಿಕ್ಕಲ್ 29 ರನ್ ಹಾಗೂ ಋತುರಾಜ್ ಗಾಯಕ್ವಾಡ್ 21 ರನ್‌ಗಳಿಸಿದರು. ಉಳಿದಂತೆ ಸಂಜು ಸ್ಯಾಮ್ಸನ್ ಹಾಗೂ ನಿತೀಶ್ ರಾಣಾ ಸಂಪೂರ್ಣವಾಗಿ ವೈಫಲ್ಯವನ್ನು ಅನುಭವಿಸಿದರು.

ಭಾರತೀಯ ಬೌಲರ್‌ಗಳ ಆರ್ಭಟ
ಭಾರತ ತಂಡ ನೀಡಿದ ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಶ್ರೀಲಂಕಾಗೆ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮೊದಲ ಆಘಾತವನ್ನು ನೀಡಿದರು. ತಂಡದ ಮೊತ್ತ 12 ರನ್‌ಗಳಿಸಿದ್ದಾಗ ಆವಿಶ್ಕಾ ಫೆರ್ನಾಂಡೋ ಅವರನ್ನು ಕೆಡವುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾದರು. ಅದಾದ ಬಳಿಕ ವರುಣ್ ಚಕ್ರವರ್ತಿ ಅದೀರಾ ಸಮತವಿಕ್ರಮೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಲಂಕಾ ನಾಯಕ ದಸುನ್ ಶನಕ ಕುಲ್‌ದೀಪ್ ಯಾದವ್ ಎಸೆತದಲ್ಲಿ ಸ್ಟಂಪ್‌ಔಟ್ ಆಗಿ ವಿಕೆಟ್ ಕಳೆದುಕೊಂಡರು.

ಲಂಕಾ ಬ್ಯಾಟ್ಸ್‌ಮನ್‌ಗಳು ತತ್ತರ
ನಂತರ ಮಿನೋದ್ ಭಾನುಕಾ ವಿಕೆಟ್ ಕೂಡ ಕುಲ್‌ದೀಪ್ ಯಾದವ್‌ಗೆ ದೊರೆಯಿತು. ಬಳಿಕ ವನಿಂದು ಹಸರಂಗಾ ವಿಕೆಟ್ ಕಬಳಿಸಲು ರಾಹುಲ್ ಚಹರ್ ಯಶಸ್ವಿಯಾದರು. ಬಳಿಕ ರಮೇಶ್ ಮೆಂಡಿಸ್ ಚೇತನ್ ಸಕಾರಿಯಾಗೆ ಬಲಿಯಾದರು. ಈ ಮೂಲಕ ಶ್ರೀಲಂಕಾ ತಂಡ 105 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

ಅಂತಿಮ ಹಂತದಲ್ಲಿ ಎಡವಿದ ಟೀಮ್ ಇಂಡಿಯಾ
ಆದರೆ ಮತ್ತೊಂದು ತುದಿಯಲ್ಲಿದ್ದ ಧನಂಜಯ ಡಿಸಿಲ್ವ ಸ್ಥರವಾಗಿ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯುತ್ತಿದ್ದರು. ಇವರಿಗೆ ಅಂತಿಮವಾಗಿ ಕ್ರೀಸ್‌ಗೆ ಬಂದ ಚಮುಕ ಕರುಣರತ್ನೆ ಸಾತ್ ನೀಡಿದರು. ಈ ಇಬ್ಬರು ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆಯೇ ಶ್ರೀಲಂಕಾ ತಂಡವನ್ನು ಗೆಲ್ಲಿಸಿದರು.

ಗುರುವಾರ ನಿರ್ಣಾಯಕ ಪಂದ್ಯ
ಈ ಗೆಲುವಿನ ಮೂಲಕ ಶ್ರೀಲಂಕಾ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಸರಣಿಯ ಅಂತಿಮ ಪಂದ್ಯ ಗುರುವಾರ ನಡೆಯಲಿದ್ದು ಸರಣಿ ಗೆಲ್ಲಲು ಎರಡು ತಂಡಗಳು ಕೂಡ ತೀವ್ರ ಪೈಪೋಟಿಯನ್ನು ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications