Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ್ವಿತೀಯ ಟಿ20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಸುಲಭ ಜಯ

IND vs SL 2nd T20 : Team India shows Sri Lankan team who is the boss at Indore
India vs Sri Lanka, 2nd T20I - Live Cricket Score

ಇಂದೋರ್, ಜನವರಿ 7: ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 7) ನಡೆದ ಭಾರತ vs ಶ್ರೀಲಂಕಾ ದ್ವಿತೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಶ್ರೀಲಂಕಾ ತಂಡ ನೀರಸ ಬ್ಯಾಟಿಂಗ್ ಪ್ರದರ್ಶಿಸಿ ಸೋಲನ್ನು ಬರ ಮಾಡಿಕೊಂಡರೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಕುಲದೀಪ್ ಯಾದವ್ ಭಾರತದ ಬೌಲಿಂಗ್ ವಿಭಾಗದ ಬಲವಾಗಿ ನಿಂತು ಗೆಲುವಿನ ರುವಾರಿಗಳೆನಿಸಿದರು. ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಐಯ್ಯರ್ ಮತ್ತು ಕೊಹ್ಲಿ ಬ್ಯಾಟಿಂಗ್ ಕೂಡ ಗೆಲುವಿನ ನೆಲೆಯಲ್ಲಿ ನೆರವಿಗೆ ಬಂತು.

ಭಾರತ vs ಶ್ರೀಲಂಕಾ, 2ನೇ ಟಿ20ಐ ಪಂದ್ಯ, ಸ್ಕೋರ್‌ಕಾರ್ಡ್

1
46128

ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ದುಕೊಂಡಿತ್ತು. ಇನ್ನಿಂಗ್ಸ್‌ಗೆ ಇಳಿದ ಲಂಕಾ, ದನುಷ್ಕಾ ಗುಣತಿಲಕ 20, ಅವಿಷ್ಕಾ ಫರ್ನಾಂಡೊ 22, ಕುಸಾಲ್ ಪೆರೆರಾ 34, ಓಷಾದಾ ಫರ್ನಾಂಡೊ 10, ಧನಂಜಯ ಡಿ ಸಿಲ್ವಾ, ಇಸುರು ಉದಾನ 17, ವನಿಂದು ಹಸರಂಗ 16 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 142 ರನ್ ಗಳಿಸಿತು.

ಗುರಿ ಬೆಂಬತ್ತಿದ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 32, ಕೆಎಲ್ ರಾಹುಲ್ 45, ಶ್ರೇಯಸ್ ಐಯ್ಯರ್ 34, ವಿರಾಟ್ ಕೊಹ್ಲಿ 30 ರನ್‌ ಸೇರಿಸಿದರು. ಭಾರತ 17.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 144 ರನ್ ಪೇರಿಸಿ ಗೆಲುವನ್ನಾಚರಿಸಿತು.

ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 3, ನವದೀಪ್ ಸೈನಿ 2, ಕುಲದೀಪ್ ಯಾದವ್ 2, ಜಸ್‌ಪ್ರೀತ್‌ ಬೂಮ್ರಾ ಮತ್ತು ವಾಷಿಂಗ್ಟ್‌ನ್ ಸುಂದರ್ ತಲಾ 1 ವಿಕೆಟ್ ಪಡೆದರು. ಭಾರತದ ಇನ್ನಿಂಗ್ಸ್‌ನಲ್ಲಿ ಲಂಕಾ ಬೌಲರ್‌ಗಳಾದ ವನಿಂದು ಹಸರಂಗ 2, ಲಹಿರು ಕುಮಾರಗೆ 1 ವಿಕೆಟ್‌ ಲಭಿಸಿತು. ನವದೀಪ್ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಭಾರತ ತಂಡ: ಶಿಖರ್ ಧವನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್ಪ್ರೀತ್ ಬೂಮ್ರಾ.

ಶ್ರೀಲಂಕಾ ತಂಡ: ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಸಾಲ್ ಪೆರೆರಾ (ವಿಕೆ), ಓಷಾದಾ ಫರ್ನಾಂಡೊ, ಭಾನುಕಾ ರಾಜಪಕ್ಸೆ, ದಾಸುನ್ ಶಾನಕಾ, ಧನಂಜಯ ಡಿ ಸಿಲ್ವಾ, ಇಸುರು ಉದಾನ, ವನಿಂದು ಹಸರಂಗ, ಲಹೀರು ಕುಮಾರ, ಲಸಿತ್ ಮಾಲಿಂಗ (ಸಿ).

Story first published: Tuesday, January 7, 2020, 22:35 [IST]
Other articles published on Jan 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+