ಶ್ರೀಲಂಕಾ ವಿರುದ್ಧ ಅಬ್ಬರಿಸಲು ಸಜ್ಜಾದ ಹಾರ್ದಿಕ್ ಪಾಂಡ್ಯ: ನೆಟ್‌ನಲ್ಲಿ ಕಠಿಣ ಅಭ್ಯಾಸ

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಅಬ್ಬರಿಸಿದ Hardik Pandya | Oneinda Kannada

ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯಾ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದ್ದಾರೆ. ಕೊಲಂಬೋದಲ್ಲಿರುವ ಟೀಮ್ ಇಂಡಿಯಾ ಶಿಬಿರದಲ್ಲಿ ಹಾರ್ದಿಕ್ ಪಾಂಡ್ಯ ಸಾಕಷ್ಟು ಬೆವರುಹರಿಸುತ್ತಿದ್ದಾರೆ. ಟೀಮ್ ಇಂಡಿಯಾದ ಪಾಲಿಗೆ ಮತ್ತೊಂದು ಸಂತಸದ ಸುದ್ದಿಯೆಂದರೆ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್‌ನಲ್ಲಿಲೂ ಸಾಕಷ್ಟು ಸುಧಾರಣೆ ಕಾಣುತ್ತಿದ್ದು ಬೌಲಿಂಗ್‌ನತ್ತಲೂ ಹೆಚ್ಚಿನ ಗಮನಹರಿಸುತ್ತಿದ್ದಾರೆ.

ಬೆನ್ನು ನೀವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಿಂದ ದೂರವುಳಿದಿದ್ದರು. ಇದು ತಂಡದ ಪಾಲಿಗೆ ಹಿನ್ನಡೆಯ ಸಂಗತಿಯಾಗಿತ್ತು. ಆದರೆ ಈಗ ಶ್ರೀಲಂಕಾ ಸರಣಿಯ ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಬೌಲಿಂಗ್‌ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಂಡ್ಯ ಬೌಲಿಂಗ್ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ.

ಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಡೆವೊನ್ ಕಾನ್ವೇ, ಸೋಫಿ ಎಕ್ಲೆಸ್ಟೋನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಎರಡನೇ ಇಂಟ್ರಾ ಸ್ಕ್ವಾಡ್ ಪಂದ್ಯದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸಿದ್ದರು. ಶ್ರೀಲಂಕಾ ಕ್ರಿಕೆಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿಯೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುತ್ತಿರುವುದು ಬಹಿರಂಗವಾಗಿತ್ತು. ಹೀಗಾಗಿ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ತಂಡಕ್ಕೆ ಆಶಾದಾಯಕವಾಗಿದೆ.

ಇನ್ನು ಹಾರ್ದಿಕ್ ಪಾಂಡ್ಯ ಬೌಲಿಂಗ್ ವಿಚಾರವಾಗಿ ಮಾತ್ರವಲ್ಲ ಬ್ಯಾಟಿಂಗ್‌ನಲ್ಲಿದ ಫಾರ್ಮ್ ತಂಡಕ್ಕೆ ಸಕಾರಾತ್ಮಕ ಸಂಗತಿಯಾಗಿದೆ. ಎರಡನೇ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 79 ರನ್‌ಗಳನ್ನು ಬಾರಿಸಿದ್ದರು. ಈ ಮೂಲಕ ಎದುರಾಳಿ ಶ್ರಿಲಂಕಾ ತಂಡಕ್ಕೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯಶೆಫಾಲಿ ವರ್ಮಾ, ದೀಪ್ತಿ ಶರ್ಮಾ ಭರ್ಜರಿ ಆಟ, ಇಂಗ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ

ಇನ್ನು ಕೊರೊನಾವೈರಸ್‌ನ ಆತಂಕದ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಐದು ದಿನಗಳ ಕಾಲ ಮುಂದೂಡಿಕೆಯಾಗಿದೆ. ಜುಲೈ 18ರಿಂದ ಸರಣಿ ಆರಂಭವಾಗಲಿದೆ. 18, 20 ಹಾಗೂ 23ರಂದು ಏಕದಿನ ಸರಣಿ ನಡೆದರೆ 25, 27 ಹಾಗೂ 29ರಂದು ಟಿ20 ಪಂದ್ಯಗಳು ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 20:14 [IST]
Other articles published on Jul 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X