Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾರ್ದಿಕ್ ಪಾಂಡ್ಯ ಬೌಲಿಂಗ್‌ ಬಗ್ಗೆ ಅಪ್‌ಡೇಟ್‌ ನೀಡಿದ ಸೂರ್ಯಕುಮಾರ್ ಯಾದವ್

India vs Sri Lanka: Indias Suryakumar Yadav gives update on Hardik Pandyas bowling

ಕೊಲಂಬೋ: 2019ರಲ್ಲಿ ಗಂಭೀರ ಬೆನ್ನು ನೋವಿಗೀಡಾಗಿದ್ದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಂದಿನಿಂದಲೂ ಸಂಪೂರ್ಣವಾಗಿ ಬೌಲಿಂಗ್‌ ಮಾಡಿದ್ದಿಲ್ಲ. ಬೆನ್ನಿನ ಶಸ್ತ್ರ ಚಿಕಿತ್ಸೆ ಮಾಡಿದಾಗಿನಿಂದ ಪಾಂಡ್ಯ ಭಾಗಶಃ ಬೌಲಿಂಗ್‌ನಿಂದ ದೂರವೇ ಇದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಪಾಂಡ್ಯ ಅಲ್ಲೂ ಬೌಲಿಂಗ್ ಮಾಡಿರಲಿಲ್ಲ.

ಹಾರ್ದಿಕ್ ಪಾಂಡ್ಯ ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿದ್ದಾರೆ. ಭಾರತ-ಶ್ರೀಲಂಕಾ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿದೆ. ಜುಲೈ 13ರಿಂದ ಈ ಸೀಮಿತ ಓವರ್‌ಗಳ ಸರಣಿ ಆರಂಭಗೊಳ್ಳಲಿದೆ.

ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್ ಮತ್ತು ಬರೋಡಾ ತಂಡದ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್, ಶ್ರೀಲಂಕಾದಲ್ಲಿ ತಂಡದ ಅಭ್ಯಾಸ, ಅಂತರ್ ತಂಡ ಅಭ್ಯಾಸ ಪಂದ್ಯ ಮತ್ತು ನೆಟ್‌ನಲ್ಲಿ ಹಾರ್ದಿಕ್ ಬೌಲಿಂಗ್‌ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

"ಆತ (ಹಾರ್ದಿಕ್) ಇಂಗ್ಲೆಂಡ್‌ ಸರಣಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಐಪಿಎಲ್ ವೇಳೆ ಅವರು ಬೌಲಿಂಗ್ ಮಾಡಿಲ್ಲ. ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಹಾರ್ದಿಕ್ ಬೌಲಿಂಗ್ ಮಾಡಿದ್ದಾರೆ, ನೆಟ್‌ ಅಭ್ಯಾಸದಲ್ಲೂ ಅವರು ಬೌಲಿಂಗ್ ಮಾಡಿದ್ದಾರೆ. ಸರಣಿಯ ವೇಳೆ ಬೌಲಿಂಗ್ ಮಾಡಬೇಕೋ ಬೇಡವೋ ಅನ್ನೋದು ಹಾರ್ದಿಕ್ ಮತ್ತು ತಂಡ ನಿರ್ವಹಣಾ ಸಮಿತಿಯ ನಿರ್ಧಾರ. ಆದರೆ ಸದ್ಯಕ್ಕಂತೂ ಹಾರ್ದಿಕ್ ಬೌಲಿಂಗ್ ಮಾಡುತ್ತಿದ್ದಾರೆ," ಎಂದು ಯಾದವ್ ಹೇಳಿದ್ದಾರೆ.

Story first published: Tuesday, July 6, 2021, 16:52 [IST]
Other articles published on Jul 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+