ಏಷ್ಯಾಕಪ್‌ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಓಟವನ್ನು ಮುಂದುವರಿಸಿದೆ. ಬ್ಯಾಟಿಂಗ್‌ನಲ್ಲಿ ನಿರೀಕ್ಷಿಸಿದ ಪ್ರದರ್ಶನ ನೀಡುವಲ್ಲಿ ಟೀಮ್ ಇಂಡಿಯಾ ವಿಫಲವಾಗಿದ್ದರೂ ಕೂಡ ಬೌಲಿಂಗ್‌ನಲ್ಲಿ ಅಮೋಘ ಆಟಕ್ಕೆ ಎದುರಾಳಿ ಶ್ರೀಲಂಕಾ ಸವಾಲಾಗಲಿಲ್ಲ. ಹೀಗಾಗಿ 41 ರನ್‌ಗಳ ಅಂತರದ ಗೆಲುವು ಸಾಧಿಸಿದೆ ಭಾರತ.
ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತ ತಂಡದ ಓರ್ವ ಆಟಗಾರನ ಬಗ್ಗೆ ನಾಯಕ ರೋಹಿತ್ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸೂಪರ್ 4 ಹಂತದ ಎರಡು ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿರುವ ಈ ಆಟಗಾರನ ಪ್ರದರ್ಶನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದೆ ಎಂದಿದ್ದಾರೆ ರೋಹಿತ್ ಶರ್ಮಾ.

"ಸವಾಲಿನ ಪಿಚ್‌ನಲ್ಲಿ ಇದೊಂದು ಉತ್ತಮವಾದ ಪಂದ್ಯವಾಗಿತ್ತು. ಸಾಕಷ್ಟು ವಿಚಾರಗಳಲ್ಲಿ ಇಲ್ಲಿ ಸವಾಲು ನಮ್ಮ ಮುಂದಿತ್ತು. ನಾವು ಏನನ್ನು ಸಾಧಿಸಬಹುದು ಎನ್ನುವುದನ್ನು ಕಂಡುಕೊಳ್ಳುವುದಕ್ಕೆ ಇಂಥಾ ಪಿಚ್‌ನಲ್ಲಿ ಆಡುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಇದು ಉತ್ತಮವಾದ ಅನುಭವ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದ ಇಬ್ಬರು ಆಟಗಾರರ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ ಒಂದು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿರುವ ಹಾರ್ದಿಕ್ ಪಾಂಡ್ಯ ಲಂಕಾ ವಿರುದ್ಧದ ಪಂದ್ಯದಲ್ಲಿ ಗಮನಸೆಳೆಯುವ ಪ್ರದರ್ಶನ ನೀಡಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಬಗ್ಗೆಯೂ ನಾಯಕ ರೋಹಿತ್ ಶರ್ಆ ಗುಣಗಾನ ಮಾಡಿದ್ದಾರೆ. ಕುಲ್‌ದೀಪ್ ಪಾಕ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ನಂತರ ಲಂಕಾ ವಿರುದ್ಧದ ಪಂದ್ಯದಲ್ಲಿಯೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
"ಕಳೆದ ಒಂದೆರಡು ವರ್ಷಗಳಲ್ಲಿ ಹಾರ್ದಿಕ್ ಬೌಲಿಂಗ್ ಮೇಲೆ ಸಾಕಷ್ಟು ಕಠಿಣ ಪರಿಶ್ರಮಪಟ್ಟಿದ್ದಾರೆ. ಈ ಬದಲಾವಣೆ ರಾತ್ರೋರಾತ್ರಿ ನಡೆದಿರುವುದಲ್ಲ. ಆತನ ಈ ಏಲಿಗೆ ನೋಡಲು ಬಹಳ ಸಂತಸವಾಗುತ್ತದೆ. ಪ್ರತಿ ಎಸೆತದಲ್ಲಿಯೂ ಆತ ವಿಕೆಟ್ ಪಡೆಯುವುದಕ್ಕೆಯೇ ಆತ ನೋಡುತ್ತಿರುತ್ತಾರೆ. ಹಾಗಾಗಿ ಅಂಥಾ ಎಸೆತಗಳಿಮದ ರಕ್ಷಣೆ ಮಾಡಿಕೊಳ್ಳುವುದು ಸುಲಭವಲ್ಲ" ಎಂದು ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಬೌಲಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇನ್ನು ಸ್ಪಿನ್ನರ್ ಕುಲ್‌ದೀಪ್ ಯಾದವ್ ಕಳೆದ ಎರಡು ಪಂದ್ಯಗಳಲ್ಲಿಯೂ ನೀಡಿದ ಅಮೋಘ ಪ್ರದರ್ಶನದ ನಂತರ ನಾಯಕ ರೋಹಿತ್ ವಿಶೇಷ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. "ಕಳೆದ ಕೆಳೆದ ಒಂದು ವರ್ಷದಿಂದೀಚೆಗೆ ಅದ್ಭುತವಾದ ಬೌಲಿಂಗ್ ನಡೆಸುತ್ತಿದ್ದಾರೆ. ಆತ ಈ ಬೌಲಿಂಗ್‌ನ ಲಯವನ್ನು ಕಂಡುಕೊಳ್ಳಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಬೌಲಿಂಗ್‌ನಲ್ಲಿನ ಲಯವನ್ನು ಕಂಡುಕೊಳ್ಳುವ ಸಲುವಾಗಿ ಕಠಿಣವಾದ ಅಭ್ಯಾಸವನ್ನು ನಡೆಸಿದ್ದಾರೆ. ಆತನಿಂದ ಅದ್ಭುತವಾಗಿ ಬೆಂಡು ಬರುತ್ತಿದ್ದು ಕಳೆದ ಹತ್ತು ಪಂದ್ಯಗಳಲ್ಲಿ ಅದರ ಫಲಿತಾಂಶವನ್ನು ಎಲ್ಲರೂ ಕಂಡಿದ್ದೇವೆ" ಎಂದಿದ್ದಾರೆ ರೋಹಿತ್ ಶರ್ಮಾ.