ಭಾರತ vs ಶ್ರೀಲಂಕಾ: ಭಾರತ ತಂಡಕ್ಕೆ 5 ಯುವ ಆಟಗಾರರು ಸೇರ್ಪಡೆ!

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್-19 ಪಾಸಿಟಿವ್ ಬಂದಿದ್ದರಿಂದ ಮಂಗಳವಾರ (ಜುಲೈ 27) ನಡೆಯಲಿದ್ದ ಭಾರತ-ಶ್ರೀಲಂಕಾ ದ್ವಿತೀಯ ಟಿ20ಐ ಪಂದ್ಯವನ್ನು ಜುಲೈ 28ಕ್ಕೆ ಮುಂದೂಡಲಾಗಿತ್ತು. ಜುಲೈ 28ರಂದು ಪಂದ್ಯ ನಡೆಯುವ ಬಗ್ಗೆ ಈ ಮೊದಲು ಅನುಮಾನವಿತ್ತಾದರೂ ಬುಧವಾರ ಪಂದ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.
ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ಪಾಸಿಟಿವ್ ಇದ್ದ ಕಾರಣ ತಂಡದಲ್ಲಿರುವ ಇತರ ಆಟಗಾರರಿಗೂ ಕೋವಿಡ್ ಪಾಸಿಟಿವ್ ಬರುವ ಭೀತಿ ಎದುರಾಗಿತ್ತು. ಆದರೆ ಇಡೀ ತಂಡಕ್ಕೆ ನಡೆಸಲಾದ ಆರ್‌ಟಿ-ಪಿಸಿಆರ್ ಟೆಸ್ಟ್ ವೇಳೆ ಎಲ್ಲರಿಗೂ ಕೋವಿಡ್ ನೆಗೆಟಿವ್ ಬಂದಿರುವುದು ನಿರಾಳತೆ ತಂದಿದೆ.

8 ಆಟಗಾರರು ಕ್ವಾರಂಟೈನ್?
ತಂಡದಲ್ಲಿ ಕೃನಾಲ್ ಸಂಪರ್ಕಿಸಿದ್ದ ಎಂಟು ಆಟಗಾರರಿಗೆ ಸೋಂಕು ತಗುಲಿರುವ ಭೀತಿ ಇತ್ತಾದರೂ ಅವರ ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಹೆಚ್ಚಿನ ಭೀತಿಯಿಲ್ಲ. ಆದರೆ ಕೆಲ ಆಟಗಾರರು ಮುನ್ನೆಚ್ಚರಿಕೆಯಾಗಿ ಕ್ವಾರಂಟೈನ್ ಪಾಲಿಸುವ ಸಾಧ್ಯತೆಯಿದೆ.

ಹೊಸ ಆಟಗಾರರು ಸೇರ್ಪಡೆ
ಭಾರತ ತಂಡದ ಕೆಲ ಆಟಗಾರರು ಕ್ವಾರಂಟೈನ್ ಪಾಲಿಸಲಿರುವುದರಿಂದ ತಂಡಕ್ಕೆ ಬೇರೆ ಕೆಲ ಆಟಗಾರರನ್ನು ಸೇರಿಸಲಾಗಿದೆ. ಇಶಾನ್ ಪೊರೇಲ್, ಸಂದೀಪ್ ವಾರಿಯರ್, ಅರ್ಶದೀಪ್ ಸಿಂಗ್, ಸಾಯ್ ಕಿಶೋರ್, ಸಮರ್ಜೀತ್ ಸಿಂಗ್ ಅವರನ್ನು ಬಿಸಿಸಿಐ ಟೀಮ್ ಇಂಡಿಯಾಕ್ಕೆ ಸೇರಿಸಿದೆ. ಹೀಗಾಗಿ ಬುಧವಾರದ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ.

ಪಂದ್ಯದ ಪ್ರಮುಖ ಮಾಹಿತಿ
ಕೋವಿಡ್ ಪಾಸಿಟಿವ್ ಬಂದಿರುವ ಕೃನಾಲ್ ಪಾಂಡ್ಯ ಅವರನ್ನು ಕೊಲಂಬೋದ ಮೌಂಟ್ ಲೆವೀನಿಯಾ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ. ಆದರೆ ಭಾರತೀಯ ಇತರ ಆಟಗಾರರು ಮೊದಲಿದ್ದ ಅದೇ ಕೊಲಂಬೋದಲ್ಲಿರುವ ತಾಜ್ ಸಮುದ್ರ ಹೋಟೆಲ್‌ನಲ್ಲಿದ್ದಾರೆ. ದ್ವಿತೀಯ ಟಿ20ಐ ಪಂದ್ಯ ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ 8 PMಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications