ಭಾರತ vs ಶ್ರೀಲಂಕಾ: ನಾಯಕನಾಗಿ ಭಾರತದ ಪರ ವಿಶೇಷ ದಾಖಲೆ ಬರೆದ ಶಿಖರ್ ಧವನ್

ಕೊಲೊಂಬೋ, ಜುಲೈ 18: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ ಆರಂಭವಾಗಿದೆ. ಭಾನುವಾರ ಈ ಸರಣಿಯ ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಈ ಸರಣಿಯ ಮೂಲಕ ಶಿಖರ್ ಧವನ್ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಜವಾಬ್ಧಾರಿಯನ್ನು ಹೊತ್ತಿದ್ದಾರೆ. ಈ ಮೂಲಕ ಶಿಖರ್ ಧವನ್ ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಧವನ್ ಭಾರತದ ಪರವಾಗಿ ನಾಯಕತ್ವ ವಹಿಸಿಕೊಂಡ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿದ್ದಾರೆ. ಶಿಖರ್ ಧವನ್ 35 ವರ್ಷ 225ನೇ ದಿನದಲ್ಲಿ ನಾಯಕನಾಗಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ್ದಾರೆ.

ಮೊಹಿಂದರ್ ಅಮರ್‌ನಾಥ್ ಹೆಸರಿನಲ್ಲಿತ್ತು ದಾಖಲೆ
ಶಿಖರ್ ಧವನ್ ಈ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಮುನ್ನ ಈ ದಾಖಲೆ ಮೊಹಿಂದರ್ ಅಮರನಾಥ್ ಹೆಸರಿನಲ್ಲಿತ್ತು. 34ನೇ ವಯಸ್ಸಿನಲ್ಲಿ ಮೊಹಿಂದರ್ ಅಮರ್‌ನಾಥ್ ಭಾರತದ ಏಕದಿನ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಭಾರತೀಯರ ಪೈಕಿ ಒಟ್ಟಾರೆ ದಾಖಲೆ
ಇನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆ ಹೇಮು ಅಧಿಕಾರಿ ಹೆಸರಿನಲ್ಲಿದೆ. 1959ರಲ್ಲಿ ತಮ್ಮ 39ನೇ ವಯಸ್ಸಿನಲ್ಲಿ ನಾಯಕನಾಗುವ ಮೂಲಕ ಈ ದಾಖಲೆ ಬರೆದಿದ್ದರು. ಶಿಖರ್ ಧವನ್ ಅಲ್ಲದೆ ಭಾರತದ ಇನ್ನೂ ಕೆಲ ಆಟಗಾರರು ಹಿರಿಯ ವಯಸ್ಸಿನಲ್ಲಿ ನಾಯಕತ್ವದ ಜವಾಬ್ಧಾರಿಯನ್ನು ಚೊಚ್ಚಲ ಬಾರಿಗೆ ವಹಿಸಿಕೊಂಡಿದ್ದಾರೆ. ವಿನೂ ಮಂಕಡ್, ಸಿಕೆ ನಾಯ್ಡು, ವಿಜಯ್ ಹಝಾರೆ, ಇಫ್ತಿಖಾರ್ ಅಲಿ ಖಾನ್ ಪಟೌಡಿ ಮತ್ತು ಲಾಲ ಅಮರನಾಥ್ ತಮ್ಮ 36ನೇ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಂಡಿದ್ದರು.

ಲಂಕಾ ಸರಣಿಗೆ ಧವನ್ ನಾಯಕತ್ವ
ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರ ಅಲಭ್ಯತೆಯಲ್ಲಿ ಧವನ್ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ನಲ್ಲಿ ಸಿದ್ಧತೆಯನ್ನು ನಡೆಸುತ್ತಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಇಂಗ್ಲೆಂಡ್ ವಿರುದ್ಧ ಆಡಲಿದೆ. ಇದೇ ಸಂದರ್ಭದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನು ಭಾರತ ಶ್ರೀಲಂಕಾ ವಿರುದ್ಧ ಆಡುತ್ತಿದೆ.

ಶ್ರೀಲಂಕಾಗೆ ತೆರಳಿರುವ ಭಾರತ ಸಂಪೂರ್ಣ ಸ್ಕ್ವಾಡ್
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ಚೇತನ್ ಸಕಾರಿಯಾ, ಸಂಜು ಸ್ಯಾಮ್ಸನ್, ಕೃಷ್ಣಪ್ಪ ಗೌತಮ್, ನಿತೀಶ್ ರಾಣಾ, ನವದೀಪ್ ಸೈನಿ, ಋತುರಾಜ್ ಗಾಯಕ್ವಾಡ್, ರಾಹುಲ್ ಚಹರ್, ವರುಣ್ ಚಕ್ರವರ್ತಿ, ದೇವದತ್ ಪಡಿಕ್ಕಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications