ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್‌ಗೆ ಕೊರೊನಾ ಪಾಸಿಟಿವ್

ಕೊಲಂಬೋ: ಶ್ರೀಲಂಕಾ ವಿರುದ್ಧದ ಸರಣಿ ಬಳಿಕ ವೇಳೆ ಇಂಗ್ಲೆಂಡ್‌ನ ಅನೇಕ ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡುಬಂದಿತ್ತು. ಇದೇ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ತಂಡದಲ್ಲಿ ಅನೇಕ ಅನ್‌ಕ್ಯಾಪ್ಡ್ ಆಟಗಾರರನ್ನು ಹೆಸರಿಸಲಾಗಿದೆ. ಈಗ ಶ್ರೀಲಂಕಾ ಕೋಚ್ ಗ್ರ್ಯಾಂಟ್ ಫ್ಲವರ್‌ಗೂ ಕೋವಿಡ್-19 ಸೋಂಕು ತಗುಲಿದೆ.
ಇಂಗ್ಲೆಂಡ್‌ನಿಂದ ಬಂದ 48 ಗಂಟೆಗಳಲ್ಲಿ ಗ್ರ್ಯಾಂಟ್ ಫ್ಲವರ್ ಅವರಲ್ಲಿ ಕೊರೊನಾ ವೈರಸ್ ಸೋಂಕಿರುವುದು ಪತ್ತೆಯಾಗಿದೆ. ಅದೂ ಕೂಡ ಭಾರತ ವಿರುದ್ಧ ಶ್ರೀಲಂಕಾಕ್ಕೆ ಸೀಮಿತ ಓವರ್‌ಗಳ ಸರಣಿ ಆರಂಭಕ್ಕೆ ಒಂದು ವಾರ ಇರುವಾಗ ಈ ಆಘಾತಕಾರಿ ವಿಚಾರ ಲಂಕಾ ಕ್ರಿಕೆಟ್ ಬಳಗಕ್ಕೆ ತಿಳಿದು ಬಂದಿದೆ.
ಶ್ರೀಲಂಕಾ ಮತ್ತು ಭಾರತದ ಮಧ್ಯೆ ಜುಲೈ 13ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಸೋಂಕು ಕಂಡು ಬಂದಿರುವುದರಿಂದ ಫ್ಲವರ್ ಪ್ರತ್ಯೇಕವಾಗಿ ಐಸೊಲೇಶನ್‌ನಲ್ಲಿದ್ದಾರೆ. ಉಳಿದ ಆಟಗಾರರು ಇಂಗ್ಲೆಂಡ್‌ನಿಂದ ಬಂದ ಬಳಿಕ ಕ್ವಾರಂಟೈನ್‌ನಲ್ಲಿದ್ದಾರೆ.
"ಶ್ರೀಲಂಕಾ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಕೋವಿಡ್-19ಗೆ ಪಾಸಿಟಿವ್ ಬಂದಿದೆ," ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಕಟಣೆಯ ಮೂಲಕ ತಿಳಿಸಿದೆ. ಜುಲೈ 13ರಂದು ಆರಂಭಗೊಳ್ಳುವ ಭಾರತ-ಶ್ರೀಲಂಕಾ ಸರಣಿ ಜುಲೈ 25ರಂದು ಕೊನೆಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications