For Quick Alerts
ALLOW NOTIFICATIONS  
For Daily Alerts
 

IND vs SL 1st T20: ಭಾರತ-ಶ್ರೀಲಂಕಾ ಪಂದ್ಯಕ್ಕೆ ಮಳೆ ವಿಲನ್; ವೇಳಾಪಟ್ಟಿ ಬದಲಾವಣೆ!

ಜುಲೈ 25 ಗುರುವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕೇವಲ 2 ದಿನಗಳು ಉಳಿದಿವೆ. ಆದರೆ ಪಲ್ಲೆಕೆಲೆಯಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಮಳೆಯ ಛಾಯೆ ಆವರಿಸಿದೆ.

ಈ ಸರಣಿಯ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದ್ದು, ಇದು ಭಾರಿ ಪರಿಣಾಮ ಬೀರುತ್ತಿದೆ. ಜುಲೈ 26 ರಿಂದ ಟಿ20 ಸರಣಿ ಆರಂಭವಾಗಬೇಕಾಗಿತ್ತು. ಆದರೆ ಒಂದು ದಿನ ತಡವಾಗಿ ಮೊದಲ ಟಿ20 ಪಂದ್ಯ ಆರಂಭವಾಗಲಿದೆ.

India vs Sri Lanka T20 series schedule change

ಪಂದ್ಯ ಯಾವಾಗ ಆರಂಭ?

ಜುಲೈ 27 ಮತ್ತು 28 ರಂದು ಭಾರತ ಮತ್ತು ಶ್ರೀಲಂಕಾ ಎರಡು ಪಂದ್ಯಗಳನ್ನು ಸತತವಾಗಿ ಆಡಲಿವೆ. ಸರಣಿಯ ಕೊನೆಯ ಪಂದ್ಯವು ಜುಲೈ 30 ರಂದು ನಡೆಯಲಿದೆ.

ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಪಲ್ಲೆಕೆಲೆಯಲ್ಲಿ ನಡೆಯಲಿದೆ. ಮೊದಲ ಟಿ20 ಬಗ್ಗೆ ನೋಡುವುದಾರೆ ಜುಲೈ 27 ರಂದು ಪಲ್ಲೆಕೆಲೆಯಲ್ಲಿ ಕಪ್ಪು ಮೋಡಗಳು ಇರುತ್ತವೆ.

ಅಲ್ಲದೇ ಅಕ್ಯುವೆದರ್ ವರದಿ ಪ್ರಕಾರ 3 ಗಂಟೆಗಳ ಕಾಲ ಜೋರಾಗಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಹೆಡ್ ಟು ಹೆಡ್ ದಾಖಲೆ

ಭಾರತ ಮತ್ತು ಶ್ರೀಲಂಕಾ ನಡುವಿನ ಮುಖಾಮುಖಿ ದಾಖಲೆ ಕುರಿತು ನೋಡುವುದಾದರೆ, ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ 29 ಟಿ20 ಪಂದ್ಯಗಳು ನಡೆದಿವೆ.

ಇದರಲ್ಲಿ ಟೀಮ್‌ ಇಂಡಿಯಾ 19 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 9 ಪಂದ್ಯಗಳನ್ನು ಗೆಲುವಿನ ನಗೆ ಬೀರಿದೆ. ಒಂದು ಪಂದ್ಯ ಡ್ರಾ ಆಗಿದೆ. ಜುಲೈ 27 ರಂದು ಮಳೆ ಮತ್ತು ಬಿರುಗಾಳಿ ಯಾವ ತಂಡಕ್ಕೆ ವರದಾನವಾಗಲಿದೆ ಎಂಬುದು ಈಗ ಕುತೂಹಲಕಾರಿಯಾಗಿದೆ.

ಶ್ರೀಲಂಕಾ ಸರಣಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ವನಿಂದು ಹಸರಂಗ ಬದಲಿಗೆ ಚರಿತ್ ಅಸಲಂಕಾ ಅವರನ್ನು ಟಿ20 ನಾಯಕರನ್ನಾಗಿ ನೇಮಿಸಲಾಗಿದ್ದು, ಸನತ್ ಜಯಸೂರ್ಯ ಹಂಗಾಮಿ ಮುಖ್ಯ ಕೋಚ್ ಆಗಿದ್ದಾರೆ.

ಇನ್ನು ಭಾರತ ತಂಡಕ್ಕೂ ಹೊಸ ಟಿ20 ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ನೇಮಿಸಿಲಾಗಿದ್ದು, ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರು ವಿಶ್ರಾಂತಿ ಪಡೆಯುತ್ತಿರುವುದರಿಂದ ಎರಡು ಸರಣಿಗಳಿಗೂ ಅಲಭ್ಯರಾಗಿದ್ದಾರೆ

ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ

ಜುಲೈ 27: 1ನೇ ಟಿ20 ಪಲ್ಲೆಕೆಲೆ- ಸಂಜೆ 7 ಗಂಟೆಗೆ

ಜುಲೈ 28: 2ನೇ ಟಿ20 ಪಲ್ಲೆಕೆಲೆ- ಸಂಜೆ 7 ಗಂಟೆಗೆ

ಜುಲೈ 30: 3ನೇ ಟಿ20 ಪಲ್ಲೆಕೆಲೆ- ಸಂಜೆ 7 ಗಂಟೆಗೆ

ಭಾರತ vs ಶ್ರೀಲಂಕಾ ಟಿ20 ತಂಡಗಳು

ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್ ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್.

ಶ್ರೀಲಂಕಾ : ಚರಿತ್ ಅಸಲಂಕಾ - ಕ್ಯಾಪ್ಟನ್, ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಚಮಿಂದು ವಿಕ್ರಮಸಿಂಘೆ, ಡಿ. ಬಿನೂರ ಫರ್ನಾಂಡೋ.

Story first published: Thursday, July 25, 2024, 17:50 [IST]
Other articles published on Jul 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+