3ನೇ ಏಕದಿನ ಪಂದ್ಯ, ಶ್ರೀಲಂಕಾಗೆ ಆಘಾತ
ಪಲ್ಲೇಕೆಲೆ, ಆಗಸ್ಟ್. 27 : ಭಾರತ-ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಆರಂಭಿಕ ಆಘಾತ ಕಂಡಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಪಲ್ಲೇಕೆಲೆ ಮೈದಾನದಲ್ಲಿ ಮೂರನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಉಸ್ತುವಾರಿ ನಾಯಕ ಚಮರ ಕಪುಗೇದರ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶ್ರೀಲಂಕಾ ತಂಡ ಆರಂಭಿಕ ಅಘಾತ ಕಂಡಿದ್ದು, 16 ಓವರ್‌ಗಳಲ್ಲಿ 65 ರನ್‌ಗಳಿಸಿದ್ದು ಎರಡು ವಿಕೆಟ್ ಕಳೆದುಕೊಂಡಿದೆ.

ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ನಿರೋಶನ್ ಡಿಕ್‌ವೆಲ್ಲ 13 ಮತ್ತು ಕುಸಾಲ್ ಮೆಂಡಿಸ್ 1ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಭಾರತ-ಶ್ರೀಲಂಕಾ ಐದು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತಿದ್ದು, ಈಗಾಗಲೇ ಎರಡು ಪಂದ್ಯಗಳಲ್ಲಿ ಭಾರತ ಗೆಲವು ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಶ್ರೀಲಂಕಾ ತಂಡವಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications