For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನಕ್ಕೆ ಕಣಕ್ಕಿಳಿಯಲಿರುವ ಭಾರತ ಪ್ಲೇಯಿಂಗ್ XI

India vs West Indies 1st ODI Predicted XI: Bowling combination key for hosts

ಚೆನ್ನೈ, ಡಿಸೆಂಬರ್ 14: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ರೋಚಕ ಜಯ ಸಾಧಿಸಿರುವ ವಿರಾಟ್ ಕೊಹ್ಲಿ ಬಳಗ, ಡಿಸೆಂಬರ್ 15ರಂದು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂಲ್ಲಿ ಪ್ರವಾಸಿಗರ ಎದುರು ಏಕದಿನ ಪಂದ್ಯಕ್ಕಾಗಿ ಮೈದಾನಕ್ಕಿಳಿಯಲಿದೆ. ಈ ಪಂದ್ಯ 2 pmಗೆ ಆರಂಭಗೊಳ್ಳಲಿದೆ.

ವಿಂಡೀಸ್ ಏಕದಿನ ಸರಣಿ ಆರಂಭಗೊಳ್ಳುವುದಕ್ಕೂ ಮೊದಲೇ ಭಾರತ ತಂಡದ ಇಬ್ಬರು ಪ್ರಮುಖ ಆಟಗಾರರು ಗಾಯಕ್ಕೀಡಾಗಿ ಸರಣಿಯಿಂದ ಹೊರ ಬಿದ್ದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ವೇಗಿ ಭುವನೇಶ್ವರ್ ಕುಮಾರ್‌ ಅವರ ಶಕ್ತಿ ದೇಸಿ ತಂಡಕ್ಕೆ ಇಲ್ಲದ್ದು ಕೊಂಚ ಹಿನ್ನಡೆಯಾಗಿ ಪರಿಣಮಿಸಿದೆ.

ಆದರೆ ಗಾಯಾಳಾಗಿರುವ ಇಬ್ಬರನ್ನು ಹೊರತುಪಡಿಸಿಯೂ ಟೀಮ್ ಇಂಡಿಯಾ ಸಾಕಷ್ಟು ಬಲಿಷ್ಠವಾಗೇ ಇದೆ. ಭಾರತ vs ವಿಂಡೀಸ್ ಮೊದಲ ಏಕದಿನಕ್ಕೆ ಮೈದಾನಕ್ಕಿಳಿಯಲಿರುವ ಭಾರತ ಸಂಭಾವ್ಯ XI ಇಂತಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಆರಂಭಿಕ ಬ್ಯಾಟ್ಸ್‌ಮನ್‌ಗಳು

50 ಓವರ್‌ಗಳ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಶಕ್ತಿಯಾಗಿರುವ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಆರಂಭಿರಾಗಿ ಮೈದಾನಕ್ಕಿಳಿಯಲಿದ್ದಾರೆ. ಗಾಯಕ್ಕೀಡಾಗಿರುವ ಶಿಖರ್ ಧವನ್ ಬದಲು ರೋಹಿತ್‌ಗೆ ಜೊತೆಯಾಗಿ ಕನ್ನಡಿಗ ಕೆಎಲ್ ರಾಹುಲ್ 2ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬರೋದು ನಿರೀಕ್ಷಿತ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಬ್ಯಾಟಿಂಗ್ ಕ್ರಮಾಂಕ

ಮಧ್ಯಮ ಬ್ಯಾಟಿಂಗ್ ಕ್ರಮಾಂಕ

ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದಾಗ ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಯಶಸ್ವಿಯಾಗಿ ಆಡಿದ್ದರು. 4ನೇ ಕ್ರಮಾಂಕಕ್ಕೆ ಶ್ರೇಯಸ್ ಸೂಕ್ತ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ಹೇಳಿದ್ದರು. ಹೀಗಾಗಿ ಮೊದಲ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಬರುವುದನ್ನು ನಿರೀಕ್ಷಿಸಲಾಗಿದೆ. 5ನೇ ಕ್ರಮಾಂಕದಲ್ಲಿ ಪಂತ್‌ ಬರುವ ಸಾಧ್ಯತೆಯಿದೆ (4. ಶ್ರೇಯಸ್ ಐಯ್ಯರ್, 5. ರಿಷಬ್ ಪಂತ್).

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಅಂತಿಮ ಓವರ್‌ಗಳಲ್ಲಿ ಸಿಕ್ಸ್‌ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬಲ್ಲ ಶಕ್ತಿಯಿರುವ ಆಲ್ ರೌಂಡರ್ ಕೇದಾರ್ ಜಾಧವ್ ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಜಾಧವ್ 6ನೇ ಕ್ರಮಾಂಕದಲ್ಲಿ ಬರಬಹುದು. ಮತ್ತೊಬ್ಬ ಆಲ್ ರೌಂಡರ್, ಬೆಸ್ಟ್ ಫೀಲ್ಡರ್ ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಆಡಲಿದ್ದಾರೆ (6. ಕೇದಾರ್ ಜಾಧವ್, 7. ರವೀಂದ್ರ ಜಡೇಜಾ).

ಬೌಲರ್‌ಗಳ ಬಳಗ

ಬೌಲರ್‌ಗಳ ಬಳಗ

ಟಿ20ಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ದೀಪಕ್ ಚಹಾರ್ ಕೆರಿಬಿನ್ನರ ವಿರುದ್ಧದ ಏಕದಿನದಲ್ಲೂ ಉತ್ತಮ ಪ್ರದರ್ಶನ ನೀಡುವುದನ್ನು ನಿರೀಕ್ಷಿಸಲಾಗಿದೆ. ಚಹಾರ್ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಬಹುದು. ಇನ್ನು ಚೈನಾಮನ್ ಕುಲದೀಪ್ ಯಾದವ್ 9ನೇ ಕ್ರಮಾಂದಲ್ಲಿ, ವೇಗಿ ಮೊಹಮ್ಮದ್ ಶಮಿ 10ನೇ ಸ್ಥಾನದಲ್ಲಿ ಮೈದಾನಕ್ಕಿಳಿಯುವುದನ್ನು ಎದುರು ನೋಡಬಹುದು. ಲೆಗ್ ಸ್ಪಿನ್ ಎಸೆಯಬಲ್ಲ ಯುಜುವೇಂದ್ರ ಚಾಹಲ್ 11ನೇ ಕ್ರಮಾಂಕದಲ್ಲಿ ಬರಲಿದ್ದಾರೆ (8. ದೀಪಕ್ ಚಹಾರ್, 9. ಕುಲದೀಪ್ ಯಾದವ್, 10. ಮೊಹಮ್ಮದ್ ಶಮಿ, 11. ಯುಜುವೇಂದ್ರ ಚಾಹಲ್).

Story first published: Saturday, December 14, 2019, 16:56 [IST]
Other articles published on Dec 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+