ಭಾರತ vs ವಿಂಡೀಸ್, 2ನೇ ಏಕದಿನ ಪಂದ್ಯ: ಸಂಭಾವ್ಯ ಆಡುವ ಬಳಗ, ಪಿಚ್ ರಿಪೋರ್ಟ್

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದೆ. ರೋಚಕವಾಗಿ ನಡೆದ ಈ ಕಾದಾಟದಲ್ಲಿ ಕೇವಲ ಮೂರು ರನ್‌ಗಳ ಅಂತರದಿಂದ ಭಾರತ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಅಂತಿಮ ಹಂತದವರೆಗೂ ಹೋರಾಡಿ ಗೆಲುವು ಪಡೆಯಲು ಸಾಧ್ಯವಾಗದ ವಿಂಡೀಸ್ ಪಡೆ ಈಗ ಮುಂದಿನ ಪಂದ್ಯದಲ್ಲಿ ಸೇಡು ತೀರಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಭಾನುವಾರ ನಡೆಯಲಿರುವ ಸರಣಿಯ ಎರಡನೇ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ.
ಭಾರತ ತಂಡ ಮೊದಲ ಪಂದ್ಯವನ್ನು ಗೆದ್ದಿರುವ ಕಾರಣ ಉಳಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಸಾಧ್ಯವಾದರೆ ಸರಣಿ ತನ್ನ ವಶಕ್ಕೆ ಪಡೆಯಲಿದೆ. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಮುಂದಿನ ಎರಡು ಪಂದ್ಯಗಳು ಕೂಡ ಬಹಳಷ್ಟು ಮುಖ್ಯವಾಗಿದ್ದು ಒತ್ತಡದಲ್ಲಿದೆ. ಈ ಮಧ್ಯೆ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿರುವ ಕಾರಣ ಅವರು ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಸರಣಿಯ ಎರಡನೇ ಪಂದ್ಯದಲ್ಲಿ ಯಾವ ತಂಡ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪಂದ್ಯದ ದಿನಾಂಕ, ಸಮಯ ಹಾಗೂ ನೇರಪ್ರಸಾರ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಜುಲೈ 24ರಂದು ಭಾನುವಾರ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದ್ದು 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯ ಕೂಡ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತ್ರವೇ ನೇರಪ್ರಸಾರವಾಗಲಿದೆ. ಇನ್ನು ಫ್ಯಾನ್‌ಕೋಚ್ ಚಂದಾದಾರರು ಕೂಡ ನೆರಪ್ರಸಾರ ವೀಕ್ಷಿಸುವ ಅವಕಾಶವಿದೆ.

ಪಿಚ್ ರಿಪೋರ್ಟ್
ಕ್ವೀನ್ಸ್ ಪಾರ್ಕ್ ಓವಲ್‌ನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳು ಮತ್ತು ಬೌಲರ್ ಎರಡೂ ವಿಭಾಗಕ್ಕೂ ಸಹಾಯಮಾಡುವ ಪಿಚ್ ಎನಿಸಿಕೊಂಡಿದೆ. ಇಲ್ಲಿನ ಪಿಚ್ ಅನ್ನು ಕ್ರಿಕೆಟಿಗರು ಸಾಮಾನ್ಯವಾಗಿ 'ಟ್ಯಾಕಿ' ಎನ್ನುತ್ತಾರೆ. ಇದಕ್ಕೆ ಕಾರಣ ಇಲ್ಲಿ ಆಟ ಮುಂದುವರಿದಂತೆ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಆದರೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅವಕಾಶ ಅವಕಾಶ ಇಲ್ಲಿ ದೊರೆಯುತ್ತದೆ. ವಿಶೇಷವಾಗಿ ಉತ್ತಮವಾಗಿ ಆರಂಭವನ್ನು ಪಡೆಯಲು ದೊಡ್ಡ ಮೊತ್ತವನ್ನು ಗಳಸಿಬಹುದು. ಸರಣಿಯ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಕೂಡ 300ಕ್ಕೂ ಅಧಿಕ ರನ್ ಗಳಿಸಿರುವುದನ್ನು ಗಮನಿಸಬಹುದು.

ಸ್ಕ್ವಾಡ್ ಹೀಗಿದೆ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಗುಡಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಕೀಸಿ ಕಾರ್ಟಿ, ಕೀಮೋ ಪಾಲ್
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್

ಸಂಭಾವ್ಯ ಆಡುವ ಬಳಗ
ಭಾರತ: 1 ಶಿಖರ್ ಧವನ್, 2 ಶುಬ್ಮನ್ ಗಿಲ್, 3 ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) / ಇಶಾನ್ ಕಿಶನ್ (ವಿಕೆಟ್ ಕೀಪರ್), 4 ಸೂರ್ಯಕುಮಾರ್ ಯಾದವ್, 5 ಶ್ರೇಯಸ್ ಅಯ್ಯರ್, 6 ದೀಪಕ್ ಹೂಡಾ, 7 ಅಕ್ಷರ್ ಪಟೇಲ್, 8 ಶಾರ್ದೂಲ್ ಠಾಕೂರ್, 9 ಮೊಹಮ್ಮದ್ ಸಿರಾಜ್, 10 ಪ್ರಸಿದ್ಧ್ ಕೃಷ್ಣ, 11 ಯುಜುವೇಂದ್ರ ಚಹಾಲ್.
ವೆಸ್ಟ್ ಇಂಡೀಸ್: 1 ಶಾಯ್ ಹೋಪ್, 2 ಬ್ರ್ಯಾಂಡನ್ ಕಿಂಗ್, 3 ಶಮರ್ ಬ್ರೂಕ್ಸ್, 4 ಕೈಲ್ ಮೇಯರ್ಸ್, 5 ನಿಕೋಲಸ್ ಪೂರನ್ (ಕ್ಯಾಪ್ಟನ್, ವಿಕೆಟ್ ಕೀಪರ್), 6 ರೋಮನ್ ಪೊವೆಲ್, 7 ಜೇಸನ್ ಹೋಲ್ಡರ್ / ಗುಡಾಕೇಶ್ ಮೋಟಿ, 8 ಜೇಡನ್ ಸೀಲ್ಸ್, 9 ಅಕೇಲ್ ಹೊಸೈನ್, 10 ಅಲ್ಜಾರಿ ಜೋಸೆಫ್, 11 ರೊಮಾರಿಯೋ ಶೆಫರ್ಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications