ಭಾರತ vs ವೆಸ್ಟ್ ಇಂಡೀಸ್: ದ್ವಿತೀಯ ಏಕದಿನಕ್ಕೆ ಸಂಭಾವ್ಯ ಭಾರತ XI

ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 10: ಗಯಾನಾ ಸ್ಟೇಡಿಯಂನಲ್ಲಿ ಆಗಸ್ಟ್ 8ರಂದು ಭಾರತ vs ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ದ್ವಿತೀಯ ಪಂದ್ಯಕ್ಕಾಗಿ ಇತ್ತಂಡಗಳು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾನುವಾರ (ಆಗಸ್ಟ್ 11) ಕಣಕ್ಕಿಳಿಯಲಿವೆ.
ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 13 ಓವರ್ ಗಳ ವರೆಗೆ ಆಡಿತ್ತು. ಅನಂತರ ಮಳೆ ಸುರಿದ್ದರಿಂದ ಪಂದ್ಯ ಮುಂದುವರೆಯಲಿಲ್ಲ. 13 ಓವರ್‌ಗಳಲ್ಲಿ ವಿಂಡೀಸ್ 54 ರನ್ ಮಾಡಿತ್ತು. ದ್ವಿತೀಯ ಪಂದ್ಯದಲ್ಲಿ ಮಳೆ ಅಡಚಣೆಯಾಗದಿದ್ದರೆ, ಭಾರತದ ಒಂದಿಷ್ಟು ಯುವ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ಲಭಿಸಲಿದೆ.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಆಡುವ 11ರಲ್ಲಿ ಕಾಣಿಸಿಕೊಳ್ಳಲಿರುವ ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ.

ಆರಂಭಿಕ ಬ್ಯಾಟ್ಸ್ಮನ್‌ಗಳು
ಟೀಮ್ ಇಂಡಿಯಾದ ಎಂದಿನ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಟಾಪ್ ಆರ್ಡರ್‌ನಲ್ಲಿ ಆಡಲಿದ್ದಾರೆ. ವಿಶ್ವಕಪ್ ಬಳಿಕ ಮೊದಲ ಬಾರಿಗೆ ರೋಹಿತ್-ಧವನ್ ಜೋಡಿ ಜೊತೆಯಾಗಿ ಆಡಲಿದೆ. ಇನ್ನು 3ನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ (1. ರೋಹಿತ್ ಶರ್ಮಾ, 2 ಶಿಖರ್ ಧವನ್, 3 ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ
ಮಳೆ ತೊಂದರೆ ನೀಡದೆ ಆಟಕ್ಕೆ ಅನುವು ಮಾಡಿಕೊಟ್ಟರೆ, ಭಾರತದ ಮಧ್ಯಮ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಅವಕಾಶ ಲಭಿಸಲಿದೆ. ದೀರ್ಘ ಕಾಲದ ಬಳಿಕ ಶ್ರೇಯಸ್ ಭಾರತದ ಏಕದಿನ ತಂಡದಲ್ಲಿ ಬ್ಯಾಟ್ ಬೀಸಲಿದ್ದಾರೆ. ಶ್ರೇಯಸ್ 4ನೇ ಕ್ರಮಾಂಕದಲ್ಲಿ ಬಂದರೆ, ರಿಷಬ್ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಳ್ಳಲಿದ್ದಾರೆ (4. ಶ್ರೇಯಸ್ ಐಯ್ಯರ್, 5 ರಿಷಬ್ ಪಂತ್).

ಆಲ್ ರೌಂಡರ್‌ಗಳು
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಕೇದಾರ್ ಜಾಧವ್ ಭಾರತದ ಆಡುವ 11ರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಜಾಧವ್ 6ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡಬಹುದು. ಇನ್ನು 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್ ರೌಂಡರ್, ಬೆಸ್ಟ್ ಫೀಲ್ಡರ್ ರವೀಂದ್ರ ಜಡೇಜಾ ಬರಲಿದ್ದಾರೆ (6. ಕೇದಾರ್ ಜಾಧವ್, 7. ರವೀಂದ್ರ ಜಡೇಜಾ).

ಬೌಲಿಂಗ್ ಬಣ
ಮೊದಲ ಏಕದಿನದಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದ ಅದೇ ಬೌಲರ್‌ಗಳು ದ್ವಿತೀಯ ಏಕದಿನದಲ್ಲೂ ಮೈದಾನಕ್ಕಿಳಿಯಲಿದ್ದಾರೆ. ಹಿಂದಿನ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ವಿಕೆಟ್, ಚೈನಾಮನ್ ಕುಲದೀಪ್ ಯಾದವ್‌ಗೆ ಲಭಿಸಿತ್ತು (8. ಭುವನೇಶ್ವರ್ ಕುಮಾರ್, 9. ಕುಲದೀಪ್ ಯಾದವ್, 10. ಮೊಹಮ್ಮದ್ ಶಮಿ, 11. ಕೆ ಖಲೀಲ್ ಅಹ್ಮದ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications