ಭಾರತ vs ವಿಂಡೀಸ್: 2ನೇ ಟಿ20 ಪಂದ್ಯ ಗೆದ್ದ ವಿಂಡೀಸ್: ರೋಚಕ ಸೆಣೆಸಾಟದಲ್ಲಿ ಎಡವಿದ ಭಾರತ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ರೋಚಕ ಜಯ ಸಾಧಿಸಿದೆ. ಬೌಲರ್‌ಗಳಿಗೆ ಉತ್ತಮವಾಗಿ ನೆರವು ನೀಡುತ್ತಿದ್ದ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ವಿಂಡೀಸ್ ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿದ್ದು ಅಂತಿಮವಾಗಿ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದ ವೆಸ್ಟ್ ಇಂಡೀಸ್ ಪರವಾಗಿ ಬೌಲರ್‌ಗಳಿಂದ ಅದ್ಭುತ ಪ್ರದರ್ಶನ ಬಂದಿತು. ಟೀಮ್ ಇಂಡಿಯಾದ ಯಾವೊಬ್ಬ ಆಟಗಾರ ಕುಡ ಹೆಚ್ಚು ಹೊತ್ತ ಕ್ರೀಸ್‌ನಲ್ಲಿ ನೆಲೆಯೂರದಂತೆ ಮಾಡುವಲ್ಲಿ ವಿಂಡೀಸ್ ಬೌಲರ್‌ಗಳು ಯಶಸ್ವಿಯಾಗಿದ್ದರು. ಇದರ ಪರಿಣಾಮವಾಗಿ 138 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಭಾರತ ಪೇರಿಸಲು ಸಾಧ್ಯವಾಯಿತು. ಈ ಮೊತ್ತವನ್ನು ರಕ್ಷಣೆ ಮಾಡಲು ಭಾರತೀಯ ಬೌಲರ್‌ಗಳು ಕೂಡ ಅಂತಿಮ ಹಂತದವರೆಗೂ ಹೋರಾಡಿದರಾದರೂ ಕೊನೆಯ ಹಂತದಲ್ಲಿ ವಿಂಡೀಸ್ ಗೆದ್ದು ಬೀಗಿದೆ.
ಮೆಕ್ಕಾಯ್ ಮ್ಯಾಜಿಕ್: ಇನ್ನು ಭಾರತೀಯ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಆಘಾತ ನೀಡಿದ್ದು ವೆಸ್ಟ್ ಇಂಡೀಸ್ ತಂಡದ ವೇಗಿ ಒಬೆದ್ ಮೆಕ್ಕಾಯ್. ಪಂದ್ಯದ ಮೊದಲ ಎಸೆತದಿಂದಲೇ ಮೆಕ್ಕಾಯ್ ಭಾರತ ತಂಡಕ್ಕೆ ಆಘಾತ ನೀಡುತ್ತಾ ಸಾಗಿದ್ದರು. ಪಂದ್ಯದ ಮೊದಲ ಎಸೆತದಲ್ಲಿಯೇ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದ ಅವರು ತಮ್ಮ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆದರು. ಅದಾದ ಬಳಿಕ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಆರ್ ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ವಿಕೆಟ್ ಸಂಪಾದಿಸಿದರು. ಈ ಮೂಲಕ ಕೇವಲ 17 ರನ್‌ಗಳನ್ನು ನೀಡಿ ವಿಕೆಟ್ ಸಂಪಾದಿಸಿದ್ದಾರೆ.
ಬ್ರೆಂಡನ್ ಕಿಂಗ್ ಅರ್ಧ ಶತಕ: ಇನ್ನು ಬೌಲಿಂಗ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಕ್ರೀಸ್‌ನಲ್ಲಿ ನೆಲೆಯೂರಲು ಯಾವುದೇ ಬ್ಯಾಟರ್ ಕಷ್ಟ ಪಡುತ್ತಿದ್ದರೆ ವಿಂಡಿಸ್ ತಂಡದ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ತಂಡಕ್ಕೆ ಅರ್ಧ ಶತಕ ಸಿಡಿಸಿ ನೆರವಾಗಿದ್ದಾರೆ. ಈ ಭರ್ಜರಿ ಆಟದ ಪರಿಣಾಮವಾಗಿ ವಿಂಡೀಸ್ ಪಡೆ ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು. 52 ಎಸೆತಗಳನ್ನು ಎದುರಿಸಿದ ಕಿಂಗ್ 68 ರನ್‌ಗಳಿಸಿದರು. ಬಳಿಕ ಅಂತಿಮ ಹಂತದಲ್ಲಿ ಡೆವೋನ್ ಥೋಮಸ್ ಸ್ಪೋಟಕ ಪ್ರದರ್ಶನ ನೀಡಿ ಭಾರತದಿಂದ ಗೆಲುವನ್ನು ಕಸಿದರು.
ಸರಣಿ ಸಮಬಲ: ಇನ್ನು ಈ ಫಲಿತಾಂಶದಿಂದಾಗಿ ಐದು ಪಂದ್ಯಗಳ ಟಿ20 ಸರಣಿ ಈಗ ಸಮಬಲದಲ್ಲಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಆತಿಥೇಯ ತಂಡ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವುಯಾಗಿದೆ. ಈಗಾಗಲೇ ಏಕದಿನ ಸರಣಿ ಕಳೆದುಕೊಂಡಿರುವ ಕಾರಣ ಟಿ20 ಸರಣಿಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ ನಿಕೋಲಸ್ ಪೂರನ್ ಪಡೆ.
ಭಾರತ ಆಡುವ ಬಳಗ: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಆವೇಶ್ ಖಾನ್
ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅಕ್ಸರ್ ಪಟೇಲ್, ದೀಪಕ್ ಹೂಡಾ, ಇಶಾನ್ ಕಿಶನ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್
ವೆಸ್ಟ್ ಇಂಡೀಸ್ ಆಡುವ ಬಳಗ: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ಸಿ), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಾಕ್), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಶಮರ್ ಬ್ರೂಕ್ಸ್, ಕೀಮೋ ಪಾಲ್, ಹೇಡನ್ ವಾಲ್ಷ್, ರೊಮಾರಿಯೋ ಶೆಫರ್ಡ್, ಡೊಮಿನಿಕ್ ಡ್ರೇಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications