Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎರಡನೇ ಟಿ20 ಪಂದ್ಯ: ವಿಂಡಿಸ್‌ಗೆ 171 ರನ್‌ ಟಾರ್ಗೆಟ್ ನೀಡಿದ ಭಾರತ

 India vs West Indies, 2nd T20I: Live Update

ತಿರುವನಂತಪುರಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ 170 ರನ್‌ಗಳಿಸಿ ವಿಂಡಿಸ್‌ಗೆ ಸವಾಲೊಡ್ಡಿದೆ. ಟಾಸ್‌ಗೆದ್ದ ವೆಸ್ಟ್‌ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತು. ಭಾರತದ ಪರವಾಗಿ ವನ್‌ಡೌನ್‌ ಸ್ಥಾನದಲ್ಲಿ ಬಂದ ಯುವ ಕ್ರಿಕೆಟಿಗ ಶಿವಂ ದುಬೆ ಅದ್ಭುತ ಆಟ ಪ್ರದರ್ಶಿಸಿದರು.

30 ಎಸೆತ ಎದುರಿಸಿದ ಶಿವಂ ದುಬೆ ಸ್ಪೋಟಕ 54 ರನ್ ಸಿಡಿಸಿದರು. ದುಬೆ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಮೂರು ಬೌಂಡರಿಗಳು ಇತ್ತು. ಫಾರ್ಮ್ ಕಳೆದುಕೊಂಡು ಸಾಕಷ್ಟು ಟೀಕೆಗೆ ಗುರಿಯಾಗಿದ್ದ ರಿಷಬ್ ಪಂತ್ ಸಮಯೋಚಿತ ಆಟ ಪ್ರದರ್ಶಿಸಿದರು. 22 ಎಸೆತಗಳನ್ನು ಎದುರಿಸಿದ ಪಂತ್ 33 ರನ್ ಬಾರಿಸಿದರು.

ನಾಯಕ ವಿರಾಟ್ ಕೋಹ್ಲಿ(19ರನ್), ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ(15ರನ್) ಮತ್ತು ರಾಹುಲ್(11ರನ್) ನಿರಾಸೆ ಮೂಡಿಸಿದರು. ವಿಂಡಿಸ್ ಪರವಾಗಿ ಹೇಡಿನ್ ವಾಲ್ಶ್ ಮತ್ತು ಕೆಸ್ರಿಕ್ ವಿಲಿಯಮ್ಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್‌ಗಳಿಸಿ ಇನ್ನಿಂಗ್ಸ್‌ ಅಂತ್ಯಗೊಳಿಸಿದೆ

ಸ್ಕೋರ್ ಪಟ್ಟಿ ಹೀಗಿದೆ:

1
46122

ಭಾರತ (ಪ್ಲೇಯಿಂಗ್ XI); ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಕೀಪರ್), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯಜುವೇಂದ್ರ ಚಹಲ್

ವಸ್ಟ್‌ ಇಂಡೀಸ್(ಪ್ಲೇಯಿಂಗ್ XI); ಲೆಂಡ್ಲ್ ಸಿಮ್ಮನ್ಸ್, ಎವಿನ್ ಲೂಯಿಸ್, ಬ್ರಾಂಡನ್ ಕಿಂಗ್, ಶಿಮ್ರಾನ್ ಹೆಟ್ಮಿಯರ್, ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಕೀಪರ್), ಜೇಸನ್ ಹೋಲ್ಡರ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್, ಹೇಡನ್ ವಾಲ್ಷ್

Story first published: Sunday, December 8, 2019, 21:15 [IST]
Other articles published on Dec 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+