ವಿಂಡೀಸ್‌ಗೆ ತಿರುಗೇಟು ನೀಡಲು ಭಾರತ ಸಜ್ಜು: ಇಂದು ನಡೆಯುವ 2ನೇ ಟಿ20 ಪಂದ್ಯಕ್ಕೆ ಮಳೆಯ ಆತಂಕ?!
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಆಘಾತಕಾರಿ ಸೋಲು ಅನುಭವಿಸಿತ್ತು. ಇದೀಗ ಇತ್ತಂಡಗಳು ಕೂಡ ಎರಡನೇ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿಗೆ ಪ್ರತಿಯಾಗಿ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಲೆಕ್ಕಾಚಾರದಲ್ಲಿದಲ್ಲಿದೆ.
ಇನ್ನು ವೆಸ್ಟ್ ಇಂಡಿಸ್ ತಂಡ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಟಿ20 ಸರಣಿಯನ್ನಾದರೂ ವಶಕ್ಕೆ ಪಡೆದುಕೊಳ್ಳುವ ಲೆಕ್ಕಾಚಾರ ನಡೆಸುತ್ತಿದೆ. ಈ ಮೂಲಕ ತವರೊನಲ್ಲಿ ಭಾರತದ ವಿರುದ್ಧ ಚುಟುಕು ಮಾದರಿಯಲ್ಲಿ ಗೆದ್ದುಬೀಗುವ ಕನಸುಕಾಣುತ್ತಿದೆ. ಅದಕ್ಕೆ ಪೂರಕವಾಗಿ ಮೊದಲ ಪಂದ್ಯದಲ್ಲಿ ಸಾಧಿಸಿದ ಗೆಲುವು ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ
ಇನ್ನು ಸರಣಿಯ ಮೊದಲ ಪಂದ್ಯ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದರೆ ಇಂದಿನ ಪಂದ್ಯ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಆಯೋಜನೆಯಾಗಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು 7:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ. ಅಲ್ಲದೆ ಫ್ಯಾನ್ ಕೋಡ್ ಹಾಗೂ ಜಿಯೋ ಜಿನಿಮಾದಲ್ಲಿಯೂ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ವೀಕ್ಷಿಸಬಹುದು.
ಪಿಚ್ ರಿಪೋರ್ಟ್ ಹಾಗೂ ಹವಾಮಾನ ವರದಿ
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನ ಸರಾಸರಿ 146 ರನ್. ಹಾಗಾಗಿ ಇಲ್ಲಿ ಕೂಡ ಹೈಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ. ಇಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ರನ್ ಬೆನ್ನಟ್ಟಿರುವ ತಂಡ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ಗೆದ್ದ ತಂಡ ಇಲ್ಲಿ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಪಂದ್ಯದ ಸಂದರ್ಭದಲ್ಲಿ 30-40 ಶೇಕಡಾದಷ್ಟು ಮಳೆಯಾಗುವ ಸಾಧ್ಯತೆಯಿದ್ದು ಇದರಿಂದಾಗಿ ಪಂದ್ಯದ ಆರಂಭದಲ್ಲಿ ವಿಳಭವಾಗುವ ಸಾಧ್ಯತಯೂ ಇದೆ ಎನ್ನಲಾಗಿದೆ.
ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ ಬಳಗ: ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಕೈಲ್ ಮೇಯರ್ಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್), ರೋವ್ಮನ್ ಪೊವೆಲ್ (ನಾಯಕ), ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
ಟೀಮ್ ಇಂಡಿಯಾ: ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications