Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವಿಂಡೀಸ್ 2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ಮುನ್ನಡೆಯತ್ತ ಭಾರತ

India vs West Indies 2nd Test Day 2 Live Score

ಹೈದರಾಬಾದ್, ಅಕ್ಟೋಬರ್ 13: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನ ಭಾರತ 81 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದು 308 ರನ್ ಪೇರಿಸುವುದರೊಂದಿಗೆ ದಿನದಾಟ ಮುಗಿಸಿದೆ.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44265

ದ್ವಿತೀಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡಿದ್ದ ಪೃಥ್ವಿ ಶಾ 70, ನಾಯಕ ವಿರಾಟ್ ಕೊಹ್ಲಿ 45, ಅಜಿಂಕ್ಯ ರಹಾನೆ 75, ರಿಷಬ್ ಪಂತ್ 85 ರನ್ ಪೇರಿಸಿದ್ದರಿಂದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ವಿಂಡೀಸ್ ವಿರುದ್ಧ ಮುನ್ನಡೆ ಸಾಧಿಸುವುದರಲ್ಲಿದೆ. ರಹಾನೆ ಮತ್ತು ಪಂತ್ ಕ್ರೀಸ್ ನಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ಗೆ ರಾಸ್ಟನ್ ಚೇಸ್ (98 ರನ್) ಮತ್ತು ಜಾನ್ಸನ್ ಹೋಲ್ಡರ್ (52 ರನ್) ಅರ್ಥ ಶತಕದ ಬಲ ದೊರೆಯಿತು. ಹೀಗಾಗಿ ಇಂಡೀಸ್ 101.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 311 ರನ್ ಪೇರಿಸುವುದರೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು.

ವೆಸ್ಟ್ ಇಂಡೀಸ್ ಇನ್ನಿಂಗ್ಸ್ ವೇಳೆ ಭಾರತದ ವೇಗಿ ಉಮೇಶ್ ಯಾದವ್ 88 ರನ್ನಿಗೆ ಭರ್ಜರಿ 6 ವಿಕೆಟ್ ಉರುಳಿಸಿ ಪಾರಮ್ಯ ಮೆರೆದರು. ಇನ್ನು ಕುಲದೀಪ್ ಯಾದವ್ 3 ವಿಕೆಟ್, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಆದರೂ ಮೊದಲ ಟೆಸ್ಟ್ ಗೆ ಹೋಲಿಸಿದರೆ ದ್ವಿತೀಯ ಟೆಸ್ಟ್ ನಲ್ಲಿ ಇಂಡೀಸ್ ಉತ್ತಮ ಆಟ ಪ್ರದರ್ಶಿಸಿತ್ತು.

ಭಾರತ ತಂಡ: ಪೃಥ್ವಿ ಶಾ, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಶಬ್ ಪಂತ್ (ವಾ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್.

ವಿಂಡೀಸ್: ಕ್ರೆಗ್ ಬ್ರಾಥ್ವೈಟ್, ಕೀರನ್ ಪೊವೆಲ್, ಶೈ ಹೋಪ್, ಶಿಮ್ರೋನ್ ಹೆಟ್ಮರ್, ಸುನಿಲ್ ಅಂಬ್ರೀಸ್, ರಾಸ್ಟನ್ ಚೇಸ್, ಶೇನ್ ಡೌರಿಚ್ (W), ಜೇಸನ್ ಹೋಲ್ಡರ್ (ಸಿ), ದೇವೇಂದ್ರ ಬಿಶೂ, ಜೋಮೆಲ್ ವಾರ್ರಿಕನ್, ಶಾನನ್ ಗೇಬ್ರಿಯಲ್.

Story first published: Saturday, October 13, 2018, 17:19 [IST]
Other articles published on Oct 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+