For Quick Alerts
ALLOW NOTIFICATIONS  
For Daily Alerts
 

ಭಾರತ-ವಿಂಡೀಸ್: ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ಟೀಮ್ ಇಂಡಿಯಾ

IND vs WI 2nd test : ಪಂದ್ಯದ ಬಳಿಕ ವಿರಾಟ್ ಹೇಳಿದ್ದೇನು ? | Oneindia Kannada
India vs West Indies, 2nd Test, Day 4, Live Score

ಕಿಂಗ್‌ಸ್ಟನ್, ಸೆಪ್ಟೆಂಬರ್ 2: ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್‌ಸ್ವೀಪ್‌ನೊಂದಿಗೆ ಅಂತ್ಯಗೊಳಿಸಿದೆ. ಸೋಮವಾರ (ಸೆಪ್ಟೆಂಬರ್ 2) ಭಾರತ vs ವಿಂಡೀಸ್ ದ್ವಿತೀಯ ಟೆಸ್ಟ್‌ನಲ್ಲಿ 257 ರನ್‌ ಜಯ ಸಾಧಿಸಿದ ವಿರಾಟ್ ಕೊಹ್ಲಿ ಪಡೆ, ಟೆಸ್ಟ್ ಸರಣಿಯಲ್ಲಿ 2-0ಯ ಮೇಲುಗೈ ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿರಾಟ್ ಕೊಹ್ಲಿ ಬಳಗ, ಮೊದಲ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ ಶತಕ (111 ರನ್), ಕೆಎಲ್ ರಾಹುಲ್ 13, ಮಯಾಂಕ್ ಅಗರ್ವಾಲ್ 55, ಪೂಜಾರ 6, ನಾಯಕ ವಿರಾಟ್ ಕೊಹ್ಲಿ 76, ಅಜಿಂಕ್ಯ ರಹಾನೆ 24, ರಿಷಬ್ ಪಂತ್ 27, ರವೀಂದ್ರ ಜಡೇಜಾ 16, ಇಶಾಂತ್ ಶರ್ಮಾ 57 ರನ್ ನೆರವಿನೊಂದಿಗೆ 140.1 ಓವರ್‌ಗೆ 416 ರನ್‌ ಗಳಿಸಿತ್ತು.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, ಸ್ಕೋರ್‌ಕಾರ್ಡ್

1
46251

ವೆಸ್ಟ್ ಇಂಡೀಸ್ ತಂಡ, ಶಿಮ್ರಾನ್ ಹೆಟ್ಮೈರ್ 34, ನಾಯಕ ಜೇಸನ್ ಹೋಲ್ಡರ್ 18, ರಹ್ಕೀಮ್ ಕಾರ್ನ್‌ವಾಲ್ 14, ಕೆಮರ್ ರೋಚ್ 17, ಕ್ರೇಗ್ ಬ್ರಾಥ್‌ವೈಟ್ 10 ರನ್‌ನೊಂದಿಗೆ 47.1 ಓವರ್‌ಗೆ 117 ರನ್ ಪೇರಿಸಿ ಹಿನ್ನಡೆ ಅನುಭವಿಸಿತು. ಭಾರತದ ಇನ್ನಿಂಗ್ಸ್‌ನಲ್ಲಿ ಹೋಲ್ಡರ್ 5, ಕಾರ್ನ್‌ವಾಲ್ 3 ವಿಕೆಟ್‌ನೊಂದಿಗೆ ಮಿಂಚಿದರೆ, ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ 27 ರನ್‌ಗೆ 6 ವಿಕೆಟ್‌ ಪಡೆದು ಗಮನ ಸೆಳೆದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್‌ ದಾಖಲೆಯೂ ಸೇರಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ, ರಹಾನೆ 64, ವಿಹಾರಿ 53 ರನ್‌ ಸೇರ್ಪಡೆಯೊಂದಿಗೆ 54.4 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 168 ಬಾರಿಸಿ ಡಿಕ್ಲೇರ್ ಘೋಷಿಸಿತ್ತು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದ ವಿಂಡೀಸ್ ಮತ್ತೆ ಬ್ಯಾಟಿಂಗ್ ವೈಫಲ್ಯ ತೋರಿತು. ಶಮರ್ ಬ್ರೂಕ್ಸ್ 50, ಡ್ಯಾರೆನ್ ಬ್ರಾವೋ 23, ಜೆರ್ಮೈನ್ ಬ್ಲ್ಯಾಕ್‌ವುಡ್ 38, ಹೋಲ್ಡರ್ 39 ರನ್‌ನೊಂದಿಗೆ 59.5 ಓವರ್‌ಗೆ 210 ರನ್‌ ಕಲೆ ಹಾಕಿ ಶರಣಾಯಿತು.

ವಿಂಡೀಸ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ 3, ರವೀಂದ್ರ ಜಡೇಜಾ 3, ಇಶಾಂತ್ ಶರ್ಮಾ 2 ವಿಕೆಟ್ ಪಡೆದರು. ಹನುಮ ವಿಹಾರಿ ಪಂದ್ಯಶ್ರೇಷ್ಠರೆನಿಸಿದರು. ಇಲ್ಲಿಗೆ ವಿಂಡೀಸ್ ಪ್ರವಾಸ ಸರಣಿಯಲ್ಲಿ ಭಾರತ 3 ಪಂದ್ಯಗಳ ಟಿ20 ಸರಣಿಯನ್ನು 3-0ಯಿಂದ, 3 ಪಂದ್ಯಗಳ ಏಕದಿನದಲ್ಲಿ 2-0 (1 ಪಂದ್ಯ ರದ್ದು), 2 ಪಂದ್ಯಗಳ ಟೆಸ್ಟ್‌ನಲ್ಲಿ 2-0ಯ ಗೆಲುವು ದಾಖಲಿಸಿದಂತಾಗಿದೆ.

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಜಹ್ಮರ್ ಹ್ಯಾಮಿಲ್ಟನ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಕೆಮರ್ ರೋಚ್, ರಹಕೀಮ್ ಕಾರ್ನ್‌ವಾಲ್, ಶಾನನ್ ಗೇಬ್ರಿಯಲ್.

ಭಾರತ ತಂಡ: ಲೋಕೇಶ್ ರಾಹುಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

Story first published: Tuesday, September 3, 2019, 2:15 [IST]
Other articles published on Sep 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+