ಭಾರತ vs ವೆಸ್ಟ್ ಇಂಡೀಸ್: ನಾನಾ-ನೀನಾ ಪಂದ್ಯಕ್ಕೆ ಭಾರತ ಪ್ಲೇಯಿಂಗ್ XI

ಕಟಕ್, ಡಿಸೆಂಬರ್ 21: ಭಾರತ vs ವೆಸ್ಟ್ ಇಂಡೀಸ್ 3ನೇ ಮತ್ತು ಅಂತಿಮ ಏಕದಿನ ಪಂದ್ಯ ಭಾನುವಾರ (ಡಿಸೆಂಬರ್ 22) ಕಟಕ್‌ನ ಬರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಗೆಲುವು ಎರಡೂ ತಂಡಗಳಿಗೂ ಪ್ರತಿಷ್ಠೆಯದ್ದು. ಯಾಕೆಂದರೆ ಇದೇ ಪಂದ್ಯದ ಫಲಿತಾಂಶ ಏಕದಿನ ಸರಣಿಯ ವಿಜೇತರನ್ನು ನಿರ್ಧರಿಸಲಿದೆ.
3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1ರಿಂದ ಗೆದ್ದಿತ್ತು. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡೂ ತಂಡಗಳೂ 1-1ರ ಸಮಬಲ ಸಾಧಿಸಿವೆ. ಹೀಗಾಗಿ ಸರಣಿ ಜಯಿಸುತ್ತ ಎರಡೂ ತಂಡಗಳು ಕಣ್ಣಿಟ್ಟಿವೆ. ದ್ವಿತೀಯ ಪಂದ್ಯದ ರೀತಿಯಲ್ಲೇ ಆಡಿದರೆ ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲುವುದರಲ್ಲಿ ಸಂಶಯವಿಲ್ಲ.
ನಾನಾ-ನೀನಾ ಪಂದ್ಯಕ್ಕೆ ಭಾರತ ಪರ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ. ಅಂತಿಮ ಪಂದ್ಯಕ್ಕೆ ತಂಡದಲ್ಲಿ ಸಣ್ಣ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ಭಾರತ-ವಿಂಡೀಸ್ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮುಖ್ಯ ಕಾರಣ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಅದ್ಭುತ ಆರಂಭಿಕ ಜೊತೆಯಾಟ. ಆ ಪಂದ್ಯದಲ್ಲಿ ಇಬ್ಬರೂ ಶತಕ ಬಾರಿಸಿದ್ದರು. ಅಂತಿಮ ಪಂದ್ಯದಲ್ಲಿ ಆರಂಭಿಕರಾಗಿ ಇದೇ ಜೋಡಿ ಮೈದಾನಕ್ಕಿಳಿಯಲಿದೆ. ಇನ್ನು ಒನ್ ಡೌನ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ (1 ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕದ ಆಟಗಾರರು
ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಪೂರ್ತಿ ಸೆಟ್ಟಾದಂತಿದೆ. ಆರಂಭಿಕ ಎರಡೂ ಪಂದ್ಯಗಳಲ್ಲೂ ಶ್ರೇಯಸ್ ಈ ಬ್ಯಾಟಿಂಗ್ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು 5ನೇ ಕ್ರಮಾಂಕದಲ್ಲಿ ಬರಲಿರುವವರು ರಿಷಬ್ ಪಂತ್. ರಿಷಬ್ ಈಗ ಕೊಂಚ ಪ್ರೌಢ ಆಟ ತೋರಿಸುತ್ತಿರುವುದರಿಂದ ಅಂತಿಮ ಪಂದ್ಯದಲ್ಲಿ ಪಂತ್ ಇದ್ದೇ ಇರುತ್ತಾರೆ (4. ಶ್ರೇಯಸ್ ಐಯ್ಯರ್, 5 ರಿಷಬ್ ಪಂತ್).

ಆಲ್ ರೌಂಡರ್‌ಗಳು
ಕೇದಾರ್ ಜಾಧವ್ ಕಳೆದ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಂಡಿಲ್ಲವಾದರೂ ಡೌನ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಭಾರತಕ್ಕೆ ಬಲವಾಗಿ ನಿಲ್ಲಬಲ್ಲ ಆಟಗಾರರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಜಾಧವ್ ಬರಲಿದ್ದಾರೆ. ಇನ್ನು 7ನೇ ಕ್ರಮಾಂಕದಲ್ಲಿ ಆಲ್ ರೌಂಡರ್, ಬೆಸ್ಟ್ ಫೀಲ್ಡರ್ ರವೀಂದ್ರ ಜಡೇಜಾ ಅವರದ್ದು (6. ಕೇದಾರ್ ಜಾಧವ್, 7. ರವೀಂದ್ರ ಜಡೇಜಾ).

ಬದಲಾಗಬಲ್ಲ ಬೌಲಿಂಗ್ ಬಣ
ಹೊಡಿ-ಬಡಿ ಬ್ಯಾಟ್ಸ್‌ಮನ್‌ಗಳಿರುವ ವೆಸ್ಟ್ ಇಂಡೀಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕನ್ನಡಿಗ ಅನಿಲ್ ಕುಂಬ್ಳೆ ಕೂಡ ವಿಂಡೀಸ್ ಅಪಾಯಕಾರಿ ತಂಡ, ಇಲ್ಲಿ ಬೌಲರ್‌ಗಳ ಪ್ರಮುಖ ಬೆಂಬಲ ಬೇಕು ಎಂದಿದ್ದರು. ಇನ್ನು 9ರಲ್ಲಿ ಕುಲದೀಪ್ ಯಾದವ್, 10ರಲ್ಲಿ ಮೊಹಮ್ಮದ್ ಶಮಿ ಮತ್ತು 11ರಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬರುವ ಸಾಧ್ಯತೆಯಿದೆ (9. ಕುಲದೀಪ್ ಯಾದವ್, 10. ಮೊಹಮ್ಮದ್ ಶಮಿ, 11. ಯುಜುವೇಂದ್ರ ಚಾಹಲ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications