ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಮೊತ್ತ ದಾಖಲಿಸಿದ ವಿಂಡೀಸ್ ; LIVE ಸ್ಕೋರ್ ಕಾರ್ಡ್

ಕಟಕ್, ನವೆಂಬರ್ 22; ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ನಿಗದಿತ ಐವತ್ತು ಓವರ್‌ಗಳಲ್ಲಿ 315ರನ್ ಬಾರಿಸಿ ಟೀಮ್ ಇಂಡಿಯಾಗೆ ದೊಡ್ಡ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ಗಿಳಿದ ವೆಸ್ಟ್ ಇಂಡೀಸ್ ನಿಧಾನಗತಿಯ ಆರಂಭ ಪಡೆಯಿತು. ಬಳಿಕ ಕೊನೆಯ ಹತ್ತು ಓವರ್‌ಗಳಲ್ಲಿ ಭರ್ಜರಿ ರನ್ ಬಾರಿಸುವಲ್ಲಿ ಯಶಸ್ವಿಯಾಯಿತು. ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ಸ್ಪೋಟಕ ಆಟದ ಮೂಲಕ ಈ ಪಂದ್ಯದಲ್ಲೂ ಮಿಂಚಿದರು.
ಭಾರತ vs ವೆಸ್ಟ್ ಇಂಡೀಸ್ live ಸ್ಕೋರ್ ಕಾರ್ಡ್
ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ನವದೀಪ್ ಸೈನಿ ಪದಾರ್ಪಣೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸೈನಿಗೆ ಕ್ಯಾಪ್ ನೀಡುವ ಮೂಲಕ ಆಡುವ ಹನ್ನೊಂದರ ಬಳಗಕ್ಕೆ ಸ್ವಾಗತಿಸಿದರು. ಗಾಯಗೊಂಡ ದೀಪಕ್ ಚಾಹರ್ ಸ್ಥಾನಕ್ಕೆ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಎರಡು ತಂಡಗಳೂ ಕೂಡ ಸಮಬಲ ಸಾಧಿಸಿದ್ದರಿಂದ ಈ ಪಂದ್ಯವನ್ನು ಗೆದ್ದು ಸರಣಿ ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿವೆ.
ಟೀಮ್ ಇಂಡಿಯಾ (ಪ್ಲೇಯಿಂಗ್ XI)
ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಕುಲದೀಪ್ ಯಾದವ್
ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI)
ಎವಿನ್ ಲೂಯಿಸ್, ಶೈ ಹೋಪ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಿಯರ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಕೀಮೊ ಪಾಲ್, ಅಲ್ಜಾರಿ ಜೋಸೆಫ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications