ಭಾರತ vs ವಿಂಡೀಸ್: ಕೊಹ್ಲಿ ಹೋರಾಟ ವ್ಯರ್ಥ, ವಿಂಡೀಸ್ ಗೆ 43 ರನ್ ಜಯ

ಪುಣೆ, ಅಕ್ಟೋಬರ್ 27: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 27) ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ವಿಂಡೀಸ್ 43 ರನ್ ಜಯ ಸಾಧಿಸಿದೆ. ಕೊಹ್ಲಿ ಹೋರಾಟದ ಹೊರತಾಗಿಯೂ ಭಾರತ ಸೋಲನುಭವಿಸಿತು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಶೈ ಹೋಪ್ 95, ಶಿಮ್ರಾನ್ ಹೆಟ್ಮೇಯರ್ (37), ಜೇಸನ್ ಹೋಲ್ಡರ್ 32, ಆ್ಯಶ್ಲೆ ನರ್ಸ್ 40 ರನ್ ಬೆಂಬಲದೊಂದಿಗೆ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 283 ರನ್ ಪೇರಿಸಿತ್ತು. ಚೇಸಿಂಗ್ ಗೆ ಇಳಿದ ಭಾರತ 47.4 ಓವರ್ ಗೆ ಎಲ್ಲಾ ವಿಕೆಟ್ ಕಳೆದು 240 ರನ್ ಪೇರಿಸಿ ಶರಣಾಯಿತು.
ಟೀಮ್ ಇಂಡಿಯಾಕ್ಕೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 8, ಶಿಖರ್ ಧವನ್ 35 ರನ ಗಳಿಸಿ ಔಟಾಗಿದ್ದು ಹಿನ್ನಡೆಗೆ ಕಾರಣವಾಯಿತು. ಕೊಹ್ಲಿ 107 ರನ್ ಸೇರಿಸಿ ತಂಡದ ಗೆಲುವಿಗೆ ಹೊಯ್ದಾಡಿದರಾದರೂ ಉಳಿದ ಬ್ಯಾಟ್ಸ್ಮನ್ ಗಳ ಬೆಂಬಲವಿಲ್ಲದೆ ತಂಡ ಸೊರಗಿತು. ಐದು ಪಂದ್ಯಗಳ ಈ ಸರಣಿಯಲ್ಲಿ ಇತ್ತಂಡಗಳು ಸಮಬಲ (1-1) ಸಾಧಿಸಿವೆ.
ಗುವಾಹಟಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್ ಸುಲಭ ಜಯ ಸಾಧಿಸಿದ್ದ ಭಾರತ, ವಿಶಾಖಪಟ್ನಂನಲ್ಲಿನ ದ್ವಿತೀಯ ಪಂದ್ಯದಲ್ಲಿ ಗೆಲುವು ಒಲಿಸಿಕೊಳ್ಳಲಾಗದೆ ಎಡವಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ, ರಾಯುಡು ಬಿಟ್ಟು ಉಳಿದ ಆಟಗಾರರ ಗಮನಾರ್ಹ ಬೆಂಬಲ ದೊರೆಯದಿದ್ದರಿಂದ ದ್ವಿತೀಯ ಪಂದ್ಯ ಟೈ ಮೂಲಕ (321 ರನ್) ಅಂತ್ಯ ಕಂಡಿತ್ತು.
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಅಂಬಾಟಿ ರಾಯುಡು, ಎಂಎಸ್ ಧೋನಿ (ಆರ್), ರಿಷಬ್ ಪಂತ್, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಕೆ ಖಲೀಲ್ ಅಹ್ಮದ್, ಯುಜುವೇಂದ್ರ ಚಾಹಲ್.
ವಿಂಡೀಸ್ ತಂಡ: ಕೀರನ್ ಪೊವೆಲ್, ಚಂದ್ರಪಾಲ್ ಹೇಮ್ರಾಜ್, ಶೈ ಹೋಪ್ (W), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋವ್ಮನ್ ಪೊವೆಲ್, ಜಾಸನ್ ಹೋಲ್ಡರ್ (ಸಿ), ಫ್ಯಾಬಿಯನ್ ಅಲೆನ್, ಆಶ್ಲೆ ನರ್ಸ್, ಕೆಮರ್ ರೋಚ್, ಒಬೇಡ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications