For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಅಂತಿಮ ಪಂದ್ಯ ಗೆಲ್ಲಲು ವಿಂಡೀಸ್ ಪಣ: ವೈಟ್‌ವಾಶ್ ಮೇಲೆ ರೋಹಿತ್ ಪಡೆ ಕಣ್ಣು

India vs West Indies: 3rd ODI, preview and match details, Ahmedabad

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದೆ. ಈ ಎರಡು ಪಂದ್ಯಗಳಲ್ಲಿಯೂ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಸರಣಿಯ ಅಂತಿಮ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗಿದ್ದು ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿಯನ್ನು ವೈಟ್‌ವಾಶ್ ಮಾಡಲಿದೆ. ಅತ್ತ ವೆಸ್ಟ್ ಇಂಡೀಸ್ ಅಂತಿಮ ಪಂದ್ಯವನ್ನಾದರೂ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಲಿದೆ.

ಭಾರತ ತಂಡ ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಮೊದಲ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯದಿದ್ದರೂ ಈ ಎರಡು ಪಂದ್ಯಗಳಲ್ಲಿಯೂ ಭಾರತ ಸುಲಭವಾದ ಗೆಲುವು ಸಾಧಿಸಲು ಸಾಧ್ಯವಾಗಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಬಾರಿಗೆ ಈ ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ಕಾರಣದಿಂದಾಗಿ ಎಲ್ಲರ ಚಿತ್ತ ರೋಹಿತ್ ಶರ್ಮಾ ಮೇಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಶರ್ಮಾ ತನ್ನ ಜವಾಬ್ಧಾರಿಯನ್ನು ನಿರೀಕ್ಷೆಯಂತೆಯೇ ಅದ್ಭೂತವಾಗಿ ನಿರ್ವಹಿಸಿ ಮಿಂಚಿದ್ದಾರೆ.

ಭಾರತ ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಸುವ ಮೂಲಕ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಮೊದಲ ಪಂದ್ಯದಲ್ಲಿ ವಿಂಡಿಸ್ ಪಡೆಯನ್ನು 176 ರನ್‌ಗಳಿಗೆ ಆಲೌಟ್ ಮಾಡಿದ್ದರೆ ಎರಡನೇ ಪಂದ್ಯದಲ್ಲಿ 237 ರನ್‌ಗಳನ್ನು ಭಾರತ ತಂಡದ ಬೌಲಿಂಗ್ ವಿಭಾಗ ರಕ್ಷಣೆ ಮಾಡಿತ್ತು.

ಇಂದು ನಡೆಯಲಿರುವ ಸರಣಿಯ ಅಂತಿಮ ಪಂದ್ಯ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿಲ್ಲ ಎಂಬುದು ನಿಜ. ಹಾಗಾಗಿ ಈ ಪಂದ್ಯದಲ್ಲಿ ಭಾರತ ತಂಡ ತನ್ನ ಬೆಂಚ್ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯೂ ಇದೆ. ಇನ್ನು ಈ ಪಂದ್ಯದಲ್ಲಿ ಶಿಖರ್ ಧವನ್ ಆರಂಭಿಕನಾಗಿ ಕಣಕ್ಕಿಳಿಯಕಿದ್ದಾರೆ. ಹಾಗಾಗಿ ಋತುರಾಜ್ ಗಾಯಕ್ವಾಡ್ ಈ ಸರಣಿಯಲ್ಲಿಯೂ ಅವಕಾಶ ಪಡೆಯುವ ಸಾಧ್ಯತೆ ತೀರಾ ಕಡಿಮೆಯಿದೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದಿದ್ದರೆ ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಆರಂಭಿಕನಾಗಿ ಆಡಿದ್ದರು.

ಕುಲ್ದೀಪ್ ಅಥವಾ ಬಿಷ್ಣೋಯ್‌ಗೆ ಅವಕಾಶ: ಇನ್ನು ಈ ಪಂದ್ಯದಲ್ಲಿ ಕೆಲ ಆಟಗಾರರಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತದ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನಿಡಿದ್ದರು. ವಾಶಿಂಗ್ಟನ್ ಸುಂದರ್ ಹಾಗೂ ಅನುಭವಿ ಚಾಹಲ್ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಇತರ ಬೌಲರ್‌ಗಳಿಗೆ ಅವಕಾಶ ನೀಡಿದರೆ ಅಚ್ಚರಿಯಿಲ್ಲ. ಇದರಲ್ಲಿ ಕುಲ್ದೀಪ್ ಯಾದವ್ ಅಥವಾ ರವಿ ಬಿಷ್ಣೋಯ್ ಯಾರು ಅವಕಾಶ ಪಡೆಯಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಶಾರುಖ್ ಖಾನ್, ರವಿ ಬಿಷ್ಣೋಯ್, ದೀಪಕ್ ಚಹಾರ್ , ಇಶಾನ್ ಕಿಶನ್, ಅವೇಶ್ ಖಾನ್, ಕುಲದೀಪ್ ಯಾದವ್

ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಫ್ಯಾಬಿಯನ್ ಅಲೆನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಹೇಡನ್ ವಾಲ್ಷ್, ರೊಮಾರಿಯೋ ಶೆಫರ್ಡ್, ಎನ್ಕ್ರುಮ್ ಬೊನ್ನರ್, ಕೀರಾನ್ ಪೊಲಾರ್ಡ್(ನಾಯಕ)

Hijab vs Kesari shalu: ಸುಪ್ರೀಂ ಆದೇಶದವರೆಗೂ ಧಾರ್ಮಿಕ ಡ್ರೆಸ್ ಧರಿಸುವಂತಿಲ್ಲ | Oneindia Kannada

Story first published: Friday, February 11, 2022, 12:57 [IST]
Other articles published on Feb 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+