3ನೇ ಟಿ20: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ

ಚೆನ್ನೈ, ನವೆಂಬರ್ 11: ಚೆನ್ನೈಯ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 11) ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ20 ಸರಣಿಯ 3ನೇ ಮತ್ತು ಕೊನೆಯ ಪಂದ್ಯದಲ್ಲಿ ಭಾರತ 6 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಸರಣಿಯಲ್ಲಿ ವಿಂಡೀಸ್ 3-0ಯ ಹೀನಾಯ ಸೋಲನುಭವಿಸಿದಂತಾಗಿದೆ.
ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್ ಗೆ ಡ್ಯಾರೆನ್ ಬ್ರಾವೋ ಮತ್ತು ನಿಕೋಲಾಸ್ ಪೂರನ್ ರನ್ ಬೆಂಬಲ ದೊರೆಯಿತು. ಬ್ರಾವೋ 43, ನಿಕೋಲಸ್ 53 ರನ್ ಸೇರಿಸಿದರು. 20 ಓವರ್ ಗೆ ವಿಂಡೀಸ್ 3 ವಿಕೆಟ್ ಕಳೆದು 181 ರನ್ ಪೇರಿಸಿತು.
ಪ್ರವಾಸಿ ವೆಸ್ಟ್ ಇಂಡೀಸ್ ನೀಡಿದ್ದ 182 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ರನ್ ಬಲ ದೊರೆಯಿತು. 62 ಎಸೆತಗಳನ್ನು ಎದುರಿಸಿದ ಧವನ್ 92 ರನ್ ಬಾರಿಸಿದರು. ರಿಷಬ್ ಪಂತ್ ಕೂಡ 58 ರನ್ ಸೇರಿಸಿದರು.
ಪಂದ್ಯ ಅಂತಿಮ ಹಂತದಲ್ಲಿ ಕೊಂಚ ರೋಚಕ ಮಟ್ಟಕ್ಕೆ ತಲುಪಿತ್ತು. ಕೊನೆಯ ಓವರ್ ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡಿತ್ತು. ಅಂತಿಮ ಬಾಲ್‌ಗೆ ಭಾರತಕ್ಕೆ 1 ರನ್ ನ ಅವಶ್ಯಕತೆಯಿತ್ತು. ಕೊನೆಗೂ ಭಾರತ 20 ಓವರ್ ಗೆ 4 ವಿಕೆಟ್ ಕಳೆದು 182 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಪ್ರವಾಸಿ ಕೆರಿಬಿಯನ್ನರನ್ನು ಬ್ಲೂಬಾಯ್ಸ್ ಟೀಮ್, ಟೆಸ್ಟ್ ನಲ್ಲಿ 2-0ಯಿಂದ, ಏಕದಿನದಲ್ಲಿ 3-1ರಿಂದ, ಟಿ20ಯಲ್ಲಿ 3-0ಯಿಂದ ಸರಣಿ ಜಯಿಸಿಕೊಂಡಿದ್ದಾಗಿದೆ. ಅಂತಿಮ ಔಪಚಾರಿಕ ಪಂದ್ಯದಲ್ಲಾದ್ರೂ ವಿಂಡೀಸ್ ಪ್ರತಿಷ್ಠೆಗಾಗಿ ಗೆಲ್ಲಬೇಕಿತ್ತು. ಆದರೆ ರೋಹಿತ್ ಶರ್ಮಾ ಬಳಗ ವಿಂಡೀಸ್ ಗೆಲುವಿಗೆ ಅವಕಾಶ ನೀಡಲಿಲ್ಲ. ಶಿಖರ್ ಧವನ್ ಪಂದ್ಯ ಶ್ರೇಷ್ಠರೆನಿಸಿದರೆ, ಕುಲದೀಪ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ರಿಷಬ್ ಪಂತ್, ಲೋಕೇಶ್ ರಾಹುಲ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ಡಬ್ಲ್ಯೂ), ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹ್ಮದ್, ಯುಜುವೇಂದ್ರ ಚಾಹಲ್.
ವೆಸ್ಟ್ ಇಂಡೀಸ್ ತಂಡ: ಶೈ ಹೋಪ್, ಶಿಮ್ರಾನ್ ಹೆಟ್ಮರ್, ಡ್ಯಾರೆನ್ ಬ್ರಾವೋ, ದನೇಶ್ ರಾಮ್ಡಿನ್ (W), ನಿಕೋಲಸ್ ಪೂರಾನ್, ಕೀರನ್ ಪೊಲಾರ್ಡ್, ಕಾರ್ಲೋಸ್ ಬ್ರಾಥ್ವೈಟ್ (ಸಿ), ಫ್ಯಾಬಿಯನ್ ಅಲೆನ್, ಕೀಮೊ ಪಾಲ್, ಖೇರಿ ಪಿಯರೆ, ಒಶೇನ್ ಥಾಮಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications