ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಅಂತಿಮ ಪಂದ್ಯಕ್ಕೆ ಕ್ಷಣಗಣನೆ, ವೈಟ್‌ವಾಶ್ ಮೇಲೆ ರೋಹಿತ್ ಪಡೆ ಕಣ್ಣು

India vs West Indies, 3rd T20, Preview, Playing XI, TV Channel, Live Streaming details, Kolkata

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಇಂದು(ಭಾನುವಾರ) ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ಏಕದಿನ ಸರಣಿಯ ಬಳಿಕ ಟಿ20 ಸರಣಿಯನ್ನು ಕೂಡ ವೈಟ್‌ವಾಶ್ ಮಾಡಿ ವಶಕ್ಕೆ ಪಡೆಯುವ ಹುಮ್ಮಸ್ಸಿನಲ್ಲಿದೆ ರೋಹಿತ್ ಶರ್ಮಾ ಪಡೆ.

ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರದ ಪ್ರದರ್ಶನ ನೀಡಿದ್ದರೆ ನಂತರ ಸೂರ್ಯ ಕುಮಾರ್ ಯಾದವ್ ಹಾಗೂ ವೆಂಕಟೇಶ್ ಐಯ್ಯರ್ ಮಿಂಚುಹರಿಸಿದ್ದರು. ಆದರೆ ವಿರಾಟ್ ಕೊಹ್ಲಿ ಫಾರ್ಮ್ ಸಮಸ್ಯೆ ತಂಡಕ್ಕೆ ಕಾಡಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಧ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದಾರೆ. ರಿಷಭ್ ಪಂತ್ ಹಾಗೂ ವೆಂಕಟೇಶ್ ಐಯ್ಯರ್ ಪ್ರದರ್ಶನ ಕೂಡ ತಂಡಕ್ಕೆ ಮಹತ್ವದ ಕೊಡುಗೆ ನೀಡಿತು. ಇನ್ನು ಬೌಲಿಂಗ್‌ನಲ್ಲಿ ಡೆತ್ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಮಾಡಿದ ದಾಳಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ತಂಡದಿಂದ ಹೊರಬಿದ್ದ ಕೊಹ್ಲಿ, ಪಂತ್ ಮತ್ತು ರಾಹುಲ್ ಮತ್ತೆ ತಂಡ ಸೇರುವುದು ಯಾವಾಗ? ಈತನದ್ದೇ ಅನುಮಾನ!ತಂಡದಿಂದ ಹೊರಬಿದ್ದ ಕೊಹ್ಲಿ, ಪಂತ್ ಮತ್ತು ರಾಹುಲ್ ಮತ್ತೆ ತಂಡ ಸೇರುವುದು ಯಾವಾಗ? ಈತನದ್ದೇ ಅನುಮಾನ!

ಇನ್ನು ಮೂರನೇ ಟಿ20 ಪಂದ್ಯಕ್ಕೆ ಮುನ್ನ ಇಬ್ಬರು ಪ್ರಮುಖ ಆಟಗಾರರಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬಯೋಬಬಲ್ ತೊರೆದಿದ್ದು ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಆಟಗಾರರು ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿದಿದ್ದಾರೆ.

ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್ , ಹರ್ಷಲ್ ಪಟೇಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲದೀಪ್ ಯಾದವ್ ಮತ್ತು ಹರ್ಪ್ರೀತ್ ಬ್ರಾರ್.

ವೆಸ್ಟ್ ಇಂಡೀಸ್ ಸ್ಕ್ವಾಡ್: ಕಿರಾನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಓಡಿಯನ್ ಶೆಫರ್ಡ್, ಓಡಿಯನ್ ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.

ಸಂಭಾವ್ಯ ಆಡುವ ಬಳಗ:

ಭಾರತ: ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಐಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಾಲ್

ವೆಸ್ಟ್ ಇಂಡಿಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಕಿರಾನ್ ಪೊಲಾರ್ಡ್ (ನಾಯಕ), ರೋಸ್ಟನ್ ಚೇಸ್/ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್, ಅಕೀಲ್ ಹೋಸೇನ್

ಪಂದ್ಯದ ಮಾಹಿತಿ:
ದಿನಾಂಕ ಹಾಗೂ ಸಮಯ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯ ಫೆಬ್ರವರಿ 20 ಭಾನುವಾರದಂದು ನಡೆಯಲಿದೆ. ಸಮಯ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ತ ನೇರಪ್ರಸಾರವಿರಲಿದ್ದು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಕೂಡ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

Story first published: Sunday, February 20, 2022, 9:13 [IST]
Other articles published on Feb 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X