For Quick Alerts
ALLOW NOTIFICATIONS  
For Daily Alerts
 

ರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ಟೀಮ್ ಇಂಡಿಯಾ ಮಡಿಲಿಗೆ ಟಿ20 ಸರಣಿ

India vs West Indies, 3rd T20I - Live Cricket Score

ಮುಂಬೈ, ಡಿಸೆಂಬರ್ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅಬ್ಬರದ ಅರ್ಧ ಶತಕದ ನೆರವಿನಿಂದ, ಭಾರತ vs ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 67 ರನ್ ಸುಲಭ ಜಯ ಗಳಿಸಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿ 2-1ರಿಂದ ಭಾರತದ ಪಾಲಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 71 (34 ಎಸೆತ), ಕೆಎಲ್ ರಾಹುಲ್ 91 (56 ಎಸೆತ), ನಾಯಕ ವಿರಾಟ್ ಕೊಹ್ಲಿ ಅಜೇಯ 70 (29 ಎಸೆತ) ರನ್‌ನೊಂದಿಗೆ 20 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿತು.

ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್, ಲೆಂಡ್ಲ್ ಸಿಮ್ಮನ್ಸ್ 7, ಬ್ರ್ಯಾಂಡನ್ ಕಿಂಗ್ 5, ನಿಕೋಲಸ್ ಪೂರನ್ ೦, ಶಿಮ್ರನ್ ಹೆಟ್ಮಾಯರ್ 41, ಜೇಸನ್ ಹೋಲ್ಡರ್ 8, ಕೀರನ್ ಪೊಲಾರ್ಡ್ 68 (39 ಎ), ಹೇಡನ್ ವಾಲ್ಶ್ 11, ಕೆಸ್ರಿಕ್ ವಿಲಿಯಮ್ಸ್ 13 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 173 ರನ್ ಕಲೆ ಹಾಕಿ ಶರಣಾಯಿತು. ಪಂದ್ಯಶ್ರೇಷ್ಠರಾಗಿ ಕೆಎಲ್ ರಾಹುಲ್, ಸರಣಿ ಶ್ರೇಷ್ಠರಾಗಿ ವಿರಾಟ್ ಕೊಹ್ಲಿ ಮಿನುಗಿದರು.

ಭಾರತ vs ವಿಂಡೀಸ್, 3ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46123

ಅಂತಿಮ ಪಂದ್ಯದಲ್ಲಿ ಭಾರತದ ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು ವಿಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ದ್ವಿತೀಯ ಟಿ20ಯಲ್ಲಿ ಪ್ರವಾಸಿ ವಿಂಡೀಸ್ ಗೆಲುವಿನ ಸಂಭ್ರಮಾಚರಿಸುವ ಮೂಲಕ ಮುಯ್ಯಿ ತೀರಿಸಿಕೊಂಡಿತ್ತು.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್ (ವಿಕೆ), ಶ್ರೇಯಸ್ ಅಯ್ಯರ್, ಶಿವಂ ದೂಬೆ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ದೀಪಕ್ ಚಹಾರ್, ಮೊಹಮ್ಮದ್ ಶಮಿ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಲೆಂಡ್ಲ್ ಸಿಮ್ಮನ್ಸ್, ಎವಿನ್ ಲೂಯಿಸ್, ಬ್ರ್ಯಾಂಡನ್ ಕಿಂಗ್, ಶಿಮ್ರಾನ್ ಹೆಟ್ಮಾಯರ್, ನಿಕೋಲಸ್ ಪೂರನ್ (ವಿಕೆ), ಕೀರನ್ ಪೊಲಾರ್ಡ್ (ಸಿ), ಜೇಸನ್ ಹೋಲ್ಡರ್, ಖಾರಿ ಪಿಯರೆ, ಹೇಡನ್ ವಾಲ್ಷ್, ಶೆಲ್ಡನ್ ಕಾಟ್ರೆಲ್, ಕೆಸ್ರಿಕ್ ವಿಲಿಯಮ್ಸ್.

Story first published: Wednesday, December 11, 2019, 23:11 [IST]
Other articles published on Dec 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+