Ind sv WI: ಸತತ 2 ಸೋಲಿನ ಬಳಿಕ ತಿರುಗು ಬೀಳುತ್ತಾ ಟೀಮ್ ಇಂಡಿಯಾ: 3ನೇ ಪಂದ್ಯದ ಪ್ರಿವ್ಯೂ, ಪಂದ್ಯ ಮಾಹಿತಿ
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಸುಲಭವಾಗಿ ಸರಣಿಯನ್ನು ವಶಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ ಪಡೆಗೆ ಚುಟುಕು ಸರಣಿಯಲ್ಲಿ ವಿಂಡೀಸ್ ಪಡೆ ಭರ್ಜರಿಯಾಗಿ ತಿರುಗೇಟು ನೀಡುತ್ತಿದೆ.
ಆರಂಭಿಕ ಎರಡು ಪಂದ್ಯಗಳಲ್ಲಿಯೂ ಭಾರತ ತಂಡ ಸೋಲು ಅನುಭವಿಸಿದ ಬಳಿಕ ಐದು ಪಂದ್ಯಗಳ ಈ ಸರಣಿಯಲ್ಲಿ 0-2 ಅಂತರದ ಹಿನ್ನಡೆಯಲ್ಲಿರುವ ತಂಡ ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆದ್ದರೆ ಮಾತ್ರವೇ ಸರಣಿ ವಶಕ್ಕೆ ಪಡೆಯಲು ಸಾಧ್ಯ. ಹೀಗಾಗಿ ಟೀಮ್ ಇಂಡಿಯಾ ಉಳಿದ ಪಂದ್ಯಗಳಲ್ಲಿ ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸುವ ಅಗತ್ಯವಿದ್ದು ಮೊದಲ ಎರಡು ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ತಿದ್ದುಕೊಂಡು ಕಣಕ್ಕಿಳಿಯುವುದು ಅಗತ್ಯವಾಗಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರದ ಮಾಹಿತಿ
ಇನ್ನು ಸರಣಿಯ ಮೂರನೇ ಪಂದ್ಯ ಕೂಡ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ. ಎರಡನೇ ಪಂದ್ಯ ಕುಡ ಇದೇ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು 7:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವ ಅವಕಾಶವಿದೆ. ಅಲ್ಲದೆ ಫ್ಯಾನ್ ಕೋಡ್ ಹಾಗೂ ಜಿಯೋ ಜಿನಿಮಾದಲ್ಲಿಯೂ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ವೀಕ್ಷಿಸಬಹುದು.
ಪಿಚ್ ರಿಪೋರ್ಟ್ ಹೀಗಿದೆ
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನ ಮೊದಲಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 146 ರನ್. ಇದೇ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ 152 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿತ್ತು. ಹಾಗಾಗಿ ಮೂರನೇ ಪಂದ್ಯದಲ್ಲಿಯೂ ಇಲ್ಲಿ ಹೈಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಬಹಳ ಕಡಿಮೆಯಿದೆ. ಇಲ್ಲಿ ಆಡಿರುವ ಸರಣಿಯ ಎರಡನೇ ಪಂದ್ಯವೂ ಸೇರಿದಂತೆ ಇಲ್ಲಿ ಆಡಿರುವ 9 ಪಂದ್ಯಗಳ ಪೈಕಿ ಆರು ಪಂದ್ಯಗಳಲ್ಲಿ ರನ್ ಬೆನ್ನಟ್ಟಿರುವ ತಂಡ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ಗೆದ್ದ ತಂಡ ಇಲ್ಲಿ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿರಲಿದೆ.
ಸಂಭಾವ್ಯ ಆಡುವ ಬಳಗ
ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ ಬಳಗ: ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಕೈಲ್ ಮೇಯರ್ಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ವಿಕೆಟ್), ರೋವ್ಮನ್ ಪೊವೆಲ್ (ನಾಯಕ), ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
ಟೀಮ್ ಇಂಡಿಯಾ: ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications