ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಸ್ ಗೇಲ್ ನಿವೃತ್ತಿ ರೀಲಾ, ರಿಯಲ್ಲಾ?!: ವಿಡಿಯೋ

ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 15: ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ (ಆಗಸ್ಟ್ 14) ನಡೆದ ಭಾರತ vs ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆನ್ನಲಾಗಿತ್ತು. ಆದರೆ ಗೇಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕ್ವೀನ್ಸ್ ಪಾರ್ಕ್ ಓವಲ್ ಪಂದ್ಯದಲ್ಲಿ ಗೇಲ್ ಸ್ಫೋಟಕ ಅರ್ಧ ಶತಕ ಬಾರಿಸಿದ್ದರು. 41 ಎಸೆತಗಳಿಗೆ 72 ರನ್ ಸೇರಿಸಿ ವೆಸ್ಟ್ ಇಂಡೀಸ್ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಕೆರಿಬಿಯನ್ನರು ಪಂದ್ಯವನ್ನು 6 ವಿಕೆಟ್‌ನಿಂದ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಸೋತರು.
ಭಾರತ vs ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯವೇ ಗೇಲ್ ಅವರ ಕೊನೇ ಅಂತಾರಾಷ್ಟ್ರೀಯ ಪಂದ್ಯವೆನ್ನಲಾಗುತ್ತಿತ್ತು. ಈ ಪಂದ್ಯದ ಬಳಿಕ ಗೇಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನೀಡಲಿದ್ದಾರೆ ಎಂದೆಲ್ಲ ಗಾಳಿ ಸುದ್ದಿಗಳು ಹಬ್ಬಿದ್ದವು. ಆದರೆ ಈ ಕುರಿತು ಸ್ವತಃ ಕ್ರಿಸ್ ಗೇಲ್ ಸ್ಪಷ್ಟನೆ ನೀಡಿದ್ದಾರೆ.
ಪಂದ್ಯದ ಬಳಿಕ ಸಂದರ್ಶನವೊಂದರಲ್ಲಿ, 'ನೀವು ಅಂತಾರಾಷ್ಟ್ರೀಯ ಏಕದಿನದಿಂದ ನಿವೃತ್ತಿ ಹೊಂದಿದ್ದೀರ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿ ಬರುತ್ತಿದೆ,' ಎಂಬ ಸುದ್ದಿಗಾರರ ಪ್ರಶ್ನೆಗೆ ಗೇಲ್, 'ನಾನಿನ್ನೂ ಯಾವುದೇ ನಿವೃತ್ತಿ ಘೋಷಿಸಿಲ್ಲ. ಮುಂದಿನ ಸೂಚನೆ ಬರೋವರೆಗೂ ನಾನು ವೆಸ್ಟ್ ಇಂಡೀಸ್ ತಂಡದಲ್ಲೇ ಇರಲಿದ್ದೇನೆ,' ಎಂದು ಉತ್ತರಿಸಿದ್ದಾರೆ.
ಗೇಲ್ ಮಾತನಾಡಿರುವ ಈ ವಿಡಿಯೋವನ್ನು 'ವೆಸ್ಟ್ ಇಂಡೀಸ್ ಕ್ರಿಕೆಟ್' ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವುದರಿಂದ ಗೇಲ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿಲ್ಲ ಅನ್ನೋದು ಖಾತ್ರಿಯಾಗಿದೆ. ಅಂದ್ಹಾಗೆ ಬುಧವಾರದ ಪಂದ್ಯವನ್ನು ಮಳೆಯ ಕಾರಣ 35 ಓವರ್‌ಗೆ ಕಡಿತಗೊಳಿಸಲಾಗಿತ್ತು. ವೆಸ್ಟ್ ಇಂಡೀಸ್ 240, ಭಾರತ 256 ರನ್ ಬಾರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications